Advertisement
ಅಪೂರ್ವಿ ವಿಶ್ವದ ನಂ.1 ಶೂಟರ್ ಎನಿಸಿದ್ದು ಇದೇ ಮೊದಲು. ಇದೇ ವಿಭಾಗದಲ್ಲಿ ಭಾರತದ ಮತ್ತೋರ್ವ ಶೂಟರ್ ಅಂಜುಮ್ ಮೌದ್ಗಿಲ್ ರ್‍ಯಾಂಕಿಂಗ್ ಯಾದಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್‌ನಲ್ಲಿ ಅಪೂರ್ವಿ ಚಂದೇಲ 152.9 ಅಂಕಗಳೊಂದಿಗೆ ನೂತನ ವಿಶ್ವದಾಖಲೆ ನಿರ್ಮಿಸಿ ಬಂಗಾರದ ಪದಕ ಜಯಿಸಿ ದ್ದರು. 2018ರ ಏಶ್ಯಾಡ್‌ನಲ್ಲಿ 10 ಮೀ. ಮಿಕ್ಸೆಡ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 6 ಮಂದಿ ಶೂಟರ್‌ಗಳಲ್ಲಿ ಅಪೂರ್ವಿ ಕೂಡ ಒಬ್ಬರು. “ನಾನಿಂದು ಶೂಟಿಂಗ್ ಬಾಳ್ವೆಯಲ್ಲಿ ಹೊಸ ಎತ್ತರ ತಲುಪಿದೆ. ಬಹಳ ಖುಷಿಯಾಗುತ್ತಿದೆ’ ಎಂದು ಅಪೂರ್ವಿ ಚಂದೇಲ ಟ್ವೀಟ್ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಸಾಧಕಿ ಅಂಜುಮ್ ಮೌದ್ಗಿಲ್ ಇತ್ತೀಚೆಗೆ ಬೀಜಿಂಗ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.