Advertisement

ಟ್ರಂಪ್ ಪತ್ರಿಕಾಗೋಷ್ಠಿ ವೇಳೆ ಶ್ವೇತಭವನದ ಹೊರಗೆ ಶೂಟ್ ಔಟ್: ಓರ್ವನ ಬಂಧನ

03:13 PM Aug 11, 2020 | keerthan |

ವಾಷಿಂಗ್ಟನ್: ಅಮೇರಿಕಾ ಪ್ರೆಸಿಡೆಂಟ್ ಡೋನಾಲ್ಡ್ ಟ್ರಂಪ್ ಶ್ವೇತಭವನದ ಮಾಧ್ಯಮ ಕೋಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಮಯದಲ್ಲಿ ಶ್ವೇತಭವನದ ಹೊರಗಡೆ ಶೂಟ್ ಔಟ್ ಆದ ಘಟನೆ ನಡೆದಿದೆ.

Advertisement

ಟ್ರಂಪ್ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಭದ್ರತಾ ಅಧಿಕಾರಿಗಳು ಅವರನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ದರು. ಸ್ವಲ್ಪ ಸಮಯದ ನಂತರ ಮತ್ತೆ ಮರಳಿದ ಟ್ರಂಪ್, ಶ್ವೇತ ಭವನದ ಹೊರಗೆ ಓರ್ವನನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಶಸ್ತ್ರಸಜ್ಜಿತನಾಗಿ ಶ್ವೇತಭವನದ ಬಳಿ ಬಂದಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯೇ ಗುಂಡಿನ ದಾಳಿ ಮಾಡಿ ಗಾಯಗೊಳಿಸಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.

ಘಟನೆಯಲ್ಲಿ ಇತರ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತವೊಂದು ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next