ನವದೆಹಲಿ: “ಕಮಲ್ ಹಾಸನ್‌ನಂಥ ವರನ್ನು ನಿಭಾಯಿಸಲು ಸಾಧ್ಯವಿಲ್ಲ. ಅಂಥವರನ್ನು ಗುಂಡಿಕ್ಕಿ ಕೊಲ್ಲುವುದೇ ವಾಸಿ.’
ಹೀಗೆಂದು ಹೇಳಿರುವುದು ಅಖೀಲ ಭಾರತೀಯ ಹಿಂದೂ ಮಹಾಸಭಾದ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ. “ಹಿಂದೂ ಭಯೋತ್ಪಾದನೆ’ ಕುರಿತ ಬಹುಭಾಷಾ ನಟ ಕಮಲ್ ಹಾಸನ್ ಅವರ ಹೇಳಿಕೆಯನ್ನು ಖಂಡಿಸಿ ಶರ್ಮಾ ಅವರು ಈ ಮಾತುಗಳನ್ನಾಡಿದ್ದಾರೆ.
ಹಿಂದೂ ಸಂಘಟನೆಗಳಲ್ಲೂ ಇದೀಗ ಭಯೋತ್ಪಾದಕರಿದ್ದು, ಅದನ್ನು ಬಲಪಂಥೀಯರು ಅಲ್ಲಗಳೆಯಬಾ ರದು ಎಂದು ಕಮಲ್ ಅವರು ಇತ್ತೀಚೆಗೆ ತಮಿಳು ಪತ್ರಿಕೆಯೊಂದರ ಲ್ಲಿನ ಲೇಖನದಲ್ಲಿ ಹೇಳಿದ್ದರು. ಇದಕ್ಕೆ ಶನಿವಾರ ಪ್ರತಿಕ್ರಿಯಿಸಿರುವ ಹಿಂದೂ ಮಹಾಸಭಾದ ಅಶೋಕ್ ಶರ್ಮಾ, “ತಮ್ಮ ಕೋಮುವಾದಿ ಅಜೆಂಡಾವನ್ನು ಪಸರಿಸಲು ಕಮಲ್‌ನಂಥವರು ಹಿಂದೂ ಭಯೋತ್ಪಾದನೆಯಂಥ ಪದ ಗಳನ್ನು ಬಳಸುತ್ತಾರೆ. ಇಂಥವರನ್ನು ಗಲ್ಲಿಗೇರಿಸುವುದು ಅಥವಾ ಶೂಟ್ ಮಾಡಿ ಸಾಯಿಸುವುದೇ ಉತ್ತಮ. ಆಗ ಮಾತ್ರ ಅವರು ಪಾಠ ಕಲಿಯು ತ್ತಾರೆ. ಹಿಂದೂ ಧರ್ಮವನ್ನು ಅನುಸರಿ ಸುತ್ತಿರುವವರ ವಿರುದ್ಧ ಯಾರೇ ಅವಹೇಳನಕಾರಿಯಾಗಿ ಮಾತ ನಾಡಿ ದರೂ, ಅಂಥವರಿಗೆ ಈ ಪವಿತ್ರ ಭೂಮಿಯಲ್ಲಿ ಬದುಕುವ ಹಕ್ಕಿಲ್ಲ. ಅವರ ಹೇಳಿಕೆಗೆ ಸಾವೇ ಉತ್ತರವಾ ಗಬೇಕು’ ಎಂದಿದ್ದಾರೆ.
ಸಿನಿಮಾಗೆ ಬಹಿಷ್ಕಾರ: ಇದೇ ಸಂಘಟನೆಯ ಮೀರತ್ ವಿಭಾಗದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಮಾತನಾಡಿ, “ಕಮಲ್ ಹಾಗೂ ಅವರ ಕುಟುಂಬ ಸದಸ್ಯರು ಅಭಿನಯಿಸಿರುವ ಎಲ್ಲ ಸಿನಿಮಾಗಳನ್ನೂ ಬಹಿಷ್ಕರಿಸಲು ನಮ್ಮ ಸಂಘಟನೆಯ ಎಲ್ಲ ಸದಸ್ಯರೂ ನಿರ್ಧರಿಸಿದ್ದೇವೆ. ಹಿಂದೂಗಳು ಮತ್ತು ಅವರ ಧರ್ಮವನ್ನು ಅವಮಾನಿಸು ವವರನ್ನು ಯಾವ ಕಾರಣಕ್ಕೂ ಕ್ಷಮಿಸ ಬಾರದು,’ ಎಂದಿದ್ದಾರೆ.