ಮಾಲೂರು: ದಸರಾ ಹಬ್ಬದ ಪ್ರಯುಕ್ತ ಕೊಮ್ಮನಹಳ್ಳಿ ಯಲ್ಲಿ ಸಂಪ್ರದಾಯದಂತೆ ಶಾಸಕ ಕೆ.ವೈ.ನಂಜೇಗೌಡ ಗ್ರಾಮದ ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ನಂತರ ಬಿಲ್ಲಿನಿಂದ ಬಾಣ ಬಿಟ್ಟು ಬನ್ನಿ ಕಡಿದರು.
ಇದಕ್ಕೂ ಮುನ್ನ ತಮ್ಮ ಮನೆತನ ಹಾಗೂ ಗ್ರಾಮದ ಸಂಪ್ರದಾಯದಂತೆ ನಾಡಬಂದೂಕಿಗೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಗ್ರಾಮದ ಚನ್ನರಾಯಸ್ವಾಮಿ ಉತ್ಸವಕ್ಕೆ ಚಾಲನೆ ನೀಡಿದರು. ತದನಂತರ ದೇವರ ಉತ್ಸವದಲ್ಲಿ ಪಾಲ್ಗೊಂಡು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಇದನ್ನೂ ಓದಿ;-
ಈ ಸಂದರ್ಭದಲ್ಲಿ ಪ್ರತಿ ಮನೆಯಿಂದ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಗ್ರಾಮದ ಚನ್ನರಾಯಸ್ವಾಮಿ ದೇವಾಲಯದಲ್ಲಿ ದಸರಾ ಹಬ್ಬದ ವಿಶೇಷವಾಗಿ ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಪತ್ನಿ ರತ್ನಮ್ಮ ಸ್ವಾಮಿಗೆ ಅಭಿಷೇಕ ನಡೆಸಿ, ಲೋಕ ಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಿದರು.
ಅದೇ ರೀತಿಯಲ್ಲಿ ಮಾಲೂರು ಪಟ್ಟಣದ ಸುದ್ದಕುಂಟೆ ಆಂಜನಯ್ಯ ಸ್ವಾಮಿ ದೇವಾಲಯ ಬಳಿ ತಹಶೀಲ್ದಾರ್ ಕೆ.ರಮೇಶ್ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ವೃಕ್ಷಕ್ಕೆ ಬಿಲ್ಲು ಹೊಡೆದರು. ಪಟ್ಟಣದ ಶಕ್ತಿದೇವತಾ ಮೂರ್ತಿಗಳು ಉತ್ಸವದಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಕಂದಾಯ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.