Advertisement

ಜೈಲಿಂದ ಹೊರ ಬಂದ ಮೂರೇ ದಿನಕ್ಕೆ ಪೊಲೀಸರಿಂದ ದರೋಡೆಕೋರ ವಿಜಯ್‌ಗೆ ಗುಂಡೇಟು

12:05 PM Jan 19, 2021 | Team Udayavani |

ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ಪದೇ ಪದೆ ತೊಡಗಿಸಿಕೊಂಡಿದ್ದ ಹಾಗೂ ಬಂಧನದ ವೇಳೆ ಪೊಲೀಸರನ್ನು ಕೊಲ್ಲಲು ಯತ್ನಿಸಿದ ಇಬ್ಬರು ರೌಡಿಗಳಿಗೆ ನಗರ ಪೊಲೀಸರು ಗುಂಡೇಟಿನ ಮೂಲಕ ಪಾಠ ಹೇಳಿದ್ದಾ ಕೆ.ಜಿ.ಹಳ್ಳಿ ಪೊಲೀಸರು ಮತ್ತು ರೌಡಿ ಶೀಟರ್‌ಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಇದೇ ಮೊದಲ ಬಾರಿಗೆ ಎಎಸ್‌ಐ ಹಂತದ ಅಧಿಕಾರಿಯೊಬ್ಬರು
ರೌಡಿ ಶೀಟರ್‌ ಆರೋಪಿ ಮೆಹರಾಜ್‌ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Advertisement

ಮತ್ತೂಂದೆಡೆ ಜೈಲಿಂದ ಬಿಡುಗಡೆ ಆದ ಮೂರೇ ದಿನಕ್ಕೆ ಮತ್ತೆ ಉಪಟಳ ಆರಂಭಿಸಿದ್ದ ರೌಡಿಶೀಟರ್‌ ವಿಜಯ್‌ ಕಾಲಿಗೆ ಗುಂಡು ಹೊಡೆದು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಗುಂಡಿನ ಕಾಳಗ: ಉತ್ತರ ಪ್ರದೇಶ ಮೂಲದ ಆರೋಪಿ ಮೆಹರಾಜ್‌ ಜತೆಯಿದ್ದ ಟ್ಯಾನಿ ರಸ್ತೆಯ ಅಬ್ರಾಹರ್‌ ವಿರುದ್ಧ ಕೊಲೆ, ಕೊಲೆಯತ್ನ, ಅತ್ಯಾಚಾರ, ಸುಲಿಗೆ ಸೇರಿ ನಗರದ ವಿವಿಧ ಠಾಣೆಯಲ್ಲಿ ಸುಮಾರು 36 ಪ್ರಕರಣಗಳಿವೆ. ನಾಲ್ಕೈದು ವರ್ಷಗಳಿಂದ
ಆರೋಪಿಗಳು ತಲೆಮರೆಸಿಕೊಂಡು ಓಡಾಡುತ್ತಿದ್ದರು.

ಇದನ್ನೂ ಓದಿ:ಎಪ್ಪತ್ತರ ದಶಕ ಹಿಂದಿ ಚಿತ್ರರಂಗದ ಸುವರ್ಣ ಯುಗ: ಗೋವಾ ಚಿತ್ರೋತ್ಸವದಲ್ಲಿ ರಾಹುಲ್‌ ರವೇಲ್

ಇತ್ತೀಚೆಗೆ ಕೆ.ಜಿ.ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಯಲ್ಲಿ ಸುಲ್ತಾನ್‌ (27) ಎಂಬಾತನ ಕೊಲೆ ಪ್ರಕರಣದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿತ್ತು. ಆರೋಪಿಗಳು ಪುಟ್ಟೇನಹಳ್ಳಿಯ ಮಂಜುನಾಥ್‌ ಲೇಔಟ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಇರುವ
ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸೋಮವಾರ ಮಧ್ಯಾಹ್ನ ಎಎಸ್‌ಐ ದಿನೇಶ್‌ ಕುಮಾರ್‌ ಶೆಟ್ಟಿ ನೇತೃತ್ವದ ತಂಡ ಆರೋಪಿಗಳನ್ನು
ಬಂಧಿಸಲು ತೆರಳಿತ್ತು. ಆರೋಪಿಗಳಿದ್ದ ಮನೆಯ ಬಾಗಿಲು ತಟ್ಟುತ್ತಿದ್ದಂತೆ ಆರೋಪಿ ಮೆಹರಾಜ್‌ ಕಂಟ್ರಿ ಮೇಡ್‌ ಪಿಸ್ತೂಲ್‌ನಿಂದ ಪೊಲೀಸರ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದ. ಈ ವೇಳೆ ಮತ್ತೂಬ್ಬ ಆರೋಪಿ ಅಬ್ರಾಹಾರ್‌ ಡ್ರ್ಯಾಗರ್‌ನಿಂದ ದಿನೇಶ್‌ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದ. ಆಗ ಆತ್ಮರಕ್ಷಣೆಗಾಗಿ ದಿನೇಶ್‌ ಶೆಟ್ಟಿ ಮೆಹರಾಜ್‌ ಮೇಲೆ ಗುಂಡು ಹಾರಿಸಿದ್ದು,  ಪರಿಣಾಮ ಮೆಹರಾಜ್‌ ಮೂಗಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಸದ್ಯ ದಿನೇಶ್‌ ಶೆಟ್ಟಿ ಹಾಗೂ ಮೆಹರಾಜ್‌ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next