Advertisement

ಶೋಪಿಯಾನ್‌ ಫೈರಿಂಗ್‌: ಸೇನೆಯ ಎಫ್ಐಆರ್‌

06:40 AM Feb 01, 2018 | Harsha Rao |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಪೊಲೀಸರು ತನ್ನ ವಿರುದ್ಧ ಎಫ್ಐಆರ್‌ ದಾಖಲಿಸಿದಕ್ಕೆ ಪ್ರತಿಯಾಗಿ ಸೇನೆ ಮತ್ತೂಂದು ಎಫ್ಐಆರ್‌ ದಾಖಲಿಸಿದೆ.

Advertisement

ಗಲಭೆಕೋರರ ಅನಿಯಂತ್ರಿತ ವರ್ತನೆಯಿಂದಾಗಿ ಸೈನಿಕರಿಗೆ ಅಪಾಯ ಬಂದೊದಗಿದ್ದರಿಂದ, ಸ್ವ ರಕ್ಷಣೆಗಾಗಿ ಗೋಲಿಬಾರ್‌ ಅನಿವಾರ್ಯವಾಯಿತು ಸೇನೆ ಹೇಳಿಕೊಂಡಿದೆ. ಈ ಬೆಳವಣಿಗೆಯಿಂದಾಗಿ ಸೇನೆ ಮತ್ತು ಪೊಲೀಸ್‌ ಇಲಾಖೆ ನಡುವೆ ಸಮರ ಶುರುವಾಗಿದೆ.

ಜ. 27ರಂದು ಶೋಪಿಯಾನ್‌ನ ಗನೋವ್‌ಪೊರಾ ಪ್ರಾಂತ್ಯದಲ್ಲಿ ಸೇನೆಯ ಗರ್ವಾಲ್‌ ತುಕಡಿಯ ಮೇಲೆ ಕಲ್ಲು ತೂರಾಟದ ವೇಳೆ, ಪರಿಸ್ಥಿತಿ ನಿಯಂತ್ರಣ ಮೀರಿದ್ದರಿಂದ ಗೋಲಿಬಾರ್‌ ನಡೆಸಲಾಗಿತ್ತು. ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಸರಕಾರದ ಅಂಗಪಕ್ಷವಾದ ಬಿಜೆಪಿಯ ವಿರೋಧದ ನಡುವೆಯೂ ಸೇನೆಯ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ರಾಜ್ಯದ ಪೊಲೀಸ್‌ ಇಲಾಖೆಗೆ ಸೂಚಿಸಿದ್ದರು. ಈ ಬೆಳವಣಿಗೆ ಬಿಜೆಪಿ ಮತ್ತು ಪಿಡಿಪಿ ಮೈತ್ರಿಕೂಟದ ನಾಯಕರ ನಡುವೆ ವಾಗ್ವಾದವೂ ನಡೆದಿತ್ತು. 

ಮತ್ತೂಬ್ಬ ಸಾವು:  ಶೋಪಿಯಾನ್‌ ಫೈರಿಂಗ್‌ ವೇಳೆ ಗಾಯಗೊಂಡ ಮತ್ತೂಬ್ಬ ವ್ಯಕ್ತಿ ಅಸುನೀಗಿದ್ದರಿಂದ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next