Advertisement

ಏ.29ಕ್ಕೆ ಅಜೇಯ್ ರಾವ್ ನಟನೆಯ ‘ಶೋಕಿವಾಲ’ ಬಿಡುಗಡೆ

12:09 PM Mar 30, 2022 | Team Udayavani |

ಅಜೇಯ್‌ ರಾವ್‌ ನಾಯಕರಾಗಿ ನಟಿಸುತ್ತಿರುವ “ಶೋಕಿವಾಲ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರತಂಡದ ಬಿಡುಗಡೆ ದಿನಾಂಕ ಘೋಷಿಸಿದೆ. ಚಿತ್ರ ಏಪ್ರಿಲ್‌ 29ರಂದು ತೆರೆಕಾಣುತ್ತಿದೆ.

Advertisement

ಇದು ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಅಜೇಯ್‌ ಅವರ ಮೊದಲ ಸಿನಿಮಾ. ಈಗಾಗಲೇ ಈ ಚಿತ್ರದ ಗೆಟಪ್‌ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಜಾಕಿ ನಿರ್ದೇಶನದ ಈ ಚಿತ್ರವನ್ನುಕ್ರಿಸ್ಟಲ್‌ಪಾರ್ಕ್‌ ಸಿನಿಮಾಸ್‌ನಡಿ ಟಿ.ಆರ್‌. ಚಂದ್ರಶೇಖರ್‌ ನಿರ್ಮಿ ಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದೆ ಚಿತ್ರದ ಇನ್ನಷ್ಟು ಹಾಡು ಹಾಗೂ ಟ್ರೇಲರ್‌ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್‌ ಸಂಗೀತವಿದೆ.

ಇದನ್ನೂ ಓದಿ:ಸಲಾಂ ಮಂಗಳಾರತಿ ಕುರಿತು ಕೊಲ್ಲೂರು ದೇಗುಲದ ಸ್ಪಷ್ಟನೆಯಲ್ಲೇನಿದೆ?

ಅಂದಹಾಗೆ, ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವುದು ಚಿತ್ರತಂಡದ ಮಾತು. ಅಜೇಯ್‌ ರಾವ್‌, ಸಂಜನಾ ಆನಂದ್‌ ನಾಯಕ-ನಾಯಕಿ. ಉಳಿದಂತೆ ಚಿತ್ರದಲ್ಲಿ ಶರತ್‌ ಲೋಹಿತಾಶ್ವ , ಗಿರಿ , ತಬಲಾ ನಾಣಿ , ಮುನಿರಾಜ್‌, ಅರುಣಾ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

Advertisement

ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ಹಳ್ಳಿಗಳಲ್ಲಿ ಶೂಟಿಂಗ್‌ ಮಾಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next