Advertisement
ಪಾದರಕ್ಷೆಯ ಪರಿಕಲ್ಪನೆ ನಮ್ಮ ಕಾಲದ್ದಂತೂ ಅಲ್ಲ. ಶಿಲಾಯುಗದ ಕಾಲದಿಂದಲೂ ಇದರ ಬಳಕೆಯಿದೆ. ಇತಿಹಾಸಕಾರರು ರಾಜಮಹಾರಾಜರ ಕಾಲದ ಪಾದರಕ್ಷೆ ವಿವರಣೆ ನೀಡುತ್ತಾರೆ. ಒಂದು ಕಾಲವಿತ್ತು. ಆಗೆಲ್ಲಾ ಪಾದರಕ್ಷೆಗೆ ವಿನ್ಯಾಸ ನೀಡುತ್ತಿದ್ದವರು ಚಮ್ಮಾರರು. ಎಷ್ಟೋ ವರ್ಷದವರೆಗೆ ಒಂದೇ ವಿನ್ಯಾಸದ ಪಾದರಕ್ಷೆಗಳು ಮಾರುಕಟ್ಟೆಯಲ್ಲಿದ್ದವು. ಆನಂತರದಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಆದಾಗ ಪಾದರಕ್ಷೆಗಳ ವಿನ್ಯಾಸದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾದವು.
Related Articles
Advertisement
ಇವು ಗೊತ್ತಿರಲಿ…– ಗಣಕ ಸಂಬಂಧಿತ ವಿನ್ಯಾಸ ತಂತ್ರಾಂಶಗಳ ಬಳಕೆ, ಜ್ಞಾನ.
– ಮಕ್ಕಳು, ಪುರುಷರು, ಮಹಿಳೆಯರ ಪಾದಗಳ ಅಳತೆ, ಅಂಗವಿಕಲರ ಪಾದ ಸಂಬಂಧಿತ ಸಮಸ್ಯೆಯ ಅರಿವು, ಅಂಗರಚನಾಶಾಸ್ತ್ರದ ಬಗ್ಗೆ ತಿಳಿವಳಿಕೆ.
– ಪಾದರಕ್ಷೆಗಳಿಗೆ ಬಳಸುವ ಬಣ್ಣ, ಬಣ್ಣಗಳ ಮಿಶ್ರಣ, ಚರ್ಮ, ಮರ ಇತರ ಪರಿಕರಗಳ ಬಗ್ಗೆ ಅರಿವು ಮತ್ತು ಚಿತ್ರಕಲೆ ಕುರಿತ ಜ್ಞಾನ.
– ಹೊಸ ವಿನ್ಯಾಸದ ಜೊತೆಗೆ ಹೊಸ ವಸ್ತುಗಳ ಬಳಕೆ ಕುರಿತ ಸಂಶೋಧನಾ ಗುಣ
– ಟೆಕ್ಸ್‌ಟೈಲ್, ಜಾಗತಿಕ ಪಾದರಕ್ಷೆ ಟ್ರೆಂಡ್‌ಗಳ ಬಗ್ಗೆ ಅರಿವು.
– ಗ್ರಾಹಕರು, ಕಂಪನಿ, ಫ್ಯಾಷನ್ ಇವೆಂಟ್, ಸೇಲ್ಸ್ ಬಗೆಗೆ ತಿಳಿವಳಿಕೆ ಸಂಬಳ ಎಷ್ಟು ಸಿಗುತ್ತೆ?: ಫುಟ್‌ವೇರ್ ಡಿಸೈನಿಂಗ್ ಹೊಸ ಮಾದರಿಯ ಅವಕಾಶವಾಗಿದ್ದು, ಇದರ ಪ್ರಾವೀಣ್ಯತೆಗೆ, ಕಂಪನಿಗಳಿಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ. ಪ್ರಾರಂಭ ಹಂತದ ವಿನ್ಯಾಸಕಾರರಿಗೆ ವಾರ್ಷಿಕವಾಗಿ 3 ಲಕ್ಷ ರು. ಮತ್ತು ಅನುಭವಿಗಳಿಗೆ 7ರಿಂದ 9ಲಕ್ಷ ರು. ವೇತನ ಪಾವತಿಸುವುದುಂಟು. ಎಲ್ಲೆಲ್ಲಿ ಚಾನ್ಸ್ ಸಿಗುತ್ತೆ?: ಶೂ ತಯಾರಿಕಾ ಘಟಕಗಳು, ಆಕ್ಸಸರೀ ವಿನ್ಯಾಸ ವಲಯ, ವಿನ್ಯಾಸ ಸಲಹಾ ಸಂಸ್ಥೆಗಳು, ವುಡ್‌ಲ್ಯಾಂಡ್ಸ್, ಬಾಟಾ ಇಂಡಿಯಾ, ಆಕ್ಷನ್ ಶೂಸ್, ಲಿಬರ್ಟಿ ಥರದ ಕಂಪನಿಗಳು. ಕಲಿಯುವುದು ಎಲ್ಲಿ?
– ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಲೆದರ್ ಟೆಕ್ನಾಲಜಿ, ಬೆಂಗಳೂರು
– ಫುಟ್‌ವೇರ್ ಡಿಸೈನ್ ಅಂಡ್ ಡೆವಲಪ್‌ಮೆಂಟ್ ಇನ್ಸ್‌ಟಿಟ್ಯೂಟ್, ಕೋಡಿಹಳ್ಳಿ, ಬೆಂಗಳೂರು
– ದಿ ನ್ಯೂ ಏಜ್ ಸ್ಕೂಲ್ ಆಫ್ ಡಿಸೈನ್, ಬೆಂಗಳೂರು
– ಸೆಂಟ್ರಲ್ ಫುಟ್‌ವೇರ್ ಟ್ರೆçನಿಂಗ್ ಸೆಂಟರ್, ಚೆನ್ನೆç, ಆಗ್ರಾ
– ಸೆಂಟ್ರಲ್ ಲೆದರ್ ರೀಸರ್ಚ್ ಇನ್ಸ್‌ಟಿಟ್ಯೂಟ್, ಚೆನ್ನೈ * ಎನ್. ಅನಂತನಾಗ್