Advertisement

ಕಾಶ್ಮೀರ :ಯುವ ಸೇನಾಧಿಕಾರಿಯ ಶವಯಾತ್ರೆಯನ್ನೂ ಬಿಡದ ಕಲ್ಲು ತೂರಾಟಗಾರರು

04:07 PM May 10, 2017 | udayavani editorial |

ಶ್ರೀನಗರ : ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದರಲ್ಲಿ  ಕಾಶ್ಮೀರದಲ್ಲಿನ ಕಲ್ಲು ತೂರಾಟಗಾರ ಪುಂಡರು, ಶೋಪಿಯಾನ್‌ ಜಿಲ್ಲೆಯಲ್ಲಿ  ಉಗ್ರರು ಅಪಹರಿಸಿ ಕೊಂದ ಯುವ ಸೇನಾಧಿಕಾರಿಯ ಶವಯಾತ್ರೆಗೆ ಕೂಡ ರಿಯಾಯಿತಿ ತೋರಿಸದೆ ಕಲ್ಲು ತೂರಾಟ ಮಾಡಿದ್ದಾರೆ.

Advertisement

ಮಾಧ್ಯಮ ವರದಿಗಳ ಪ್ರಕಾರ ಶವ ಮೆರವಣಿಗೆ ವೇಳೆ ಗುಂಡು ಹಾರಾಟದ ಸದ್ದು ಕೂಡ ಕೇಳಿ ಬಂದಿದೆ. ಇವೆಲ್ಲದರ ನಡುವೆಯೂ ಹತ ಯುವ ಸೇನಾಧಿಕಾರಿ ಉಮರ್‌ ಫ‌ಯಾಜ್‌ ನ ಅಂತ್ಯಕ್ರಿಯೆ ವಿಧ್ಯುಕ್ತವಾಗಿ ನಡೆದಿದೆ. 

ಉಮರ್‌ ಫ‌ಯಾಜ್‌ ರನ್ನು ಮಂಗಳವಾರ ಸಂಜೆ ಕುಲಗಾಂವ್‌ನಲ್ಲಿನ ಅವರ ಸಂಬಂಧಿಕರ ಮದುವೆ ಮನೆಯಿಂದ ಐದರಿಂದ ಆರು ಮಂದಿ ಉಗ್ರರು ಅಪಹರಿಸಿ ಬಳಿಕ ಗುಂಡಿಕ್ಕಿ ಸಾಯಿಸಿದ್ದರು. ಶೋಪಿಯಾನ್‌ನ ಹರ್‌ವೆುàನ್‌ ಎಂಬಲ್ಲಿ ಇಂದು ಬುಧವಾರ ಉಮರ್‌ ಫ‌ಯಾಜ್‌ ಅವರ ಗುಂಡೇಟುಗಳಿಂದ ತುಂಬಿದ್ದ ಮೃತ ದೇಹವು ಪತ್ತೆಯಾಗಿತ್ತು. 

ಕುಲಗಾಂವ್‌ ಜಿಲ್ಲೆಯವರಾದ ಫ‌ಯಾಜ್‌ ಅವರು, ಇನ್‌ಫ್ಯಾಂಟ್ರಿ ದಳಕ್ಕೆ ಸೇರಿದವರಾಗಿದ್ದು ಅವರನ್ನು ಜಮ್ಮುನಲ್ಲಿನ ಅಖನೂರ್‌ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಷ್ಟೇ ಅವರು ಸೇನೆಯನ್ನು ಸೇರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next