Advertisement

UPಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮಿತಿಮೀರುತ್ತಿದೆ : ಯೋಗಿಗೆ ಚಾಟಿ ಬೀಸಿದ ನುಸ್ರತ್..!

02:58 PM Mar 03, 2021 | Shreeraj Acharya |

ಕೊಲ್ಕತ್ತಾ/ ನವ ದೆಹಲಿ : ತೃಣ ಮೂಲ ಕಾಂಗ್ರೆಸ್ ನ ಸಂಸದೆ ನುಸ್ರತ್ ಜಹಾನ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಸಂಭವಿಸುತ್ತಿರುವ ಹಿಂಸಾತಕ ಅಪರಾಧಗಳನ್ನು ಉಲ್ಲೇಖಿಸಿ ಯೋಗಿ ವಿರುದ್ಧ ನುಸ್ರತ್ ದಾಳಿ ಮಾಡಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್ ನ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಆಕೆಯ ತಂದೆಯನ್ನು ಗುಂಡಿಕ್ಕಿ ಕೊಂದ ಘಟನೆಯ ಬಗೆಗಿನ ರಾಷ್ಟ್ರೀಯ ಸುದ್ದಿ ಸಂಸ್ಥೆ ಎನ್  ಡಿ ಟಿವಿ ಮಾಡಿದ ವರದಿಯನ್ನು ಟ್ವೀಟ್ ಮಾಡುವುದರೊಂದಿಗೆ ನಿಮ್ಮ ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮಿತಿ ಮೀರುತ್ತಿದೆ ಎಂದು ನುಸ್ರತ್ ಬರೆದುಕೊಂಡಿದ್ದಾರೆ.

ಓದಿ : ಕಡಬ: ಮರ ಲೂಟಿ ಪ್ರಕರಣದ ದೂರು ನೀಡಿದ ವ್ಯಕ್ತಿಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಅಧಿಕಾರಿಗಳು

ಆಶ್ಚರ್ಯಕರ ..! ಉತ್ತರ ಪ್ರದೇಶದ ಭೀಕರ ಸ್ಥಿತಿಯನ್ನು ವಿವರಿಸಲು ಶಬ್ದಗಳು ಸಿಗುತ್ತಿಲ್ಲ. ಬಿಜೆಪಿ ಅಧಿಕಾರವಿರುವ ಉತ್ತರ ಪ್ರದೇಶದಲ್ಲಿ, ಮುಖ್ಯಮಂತ್ರಿ ಯೋಗಿ ಯಾಕೆ ಈ ಕುಟುಂಬಕ್ಕೆ ಸುರಕ್ಷತೆಯನ್ನು ನೀಡುತ್ತಿಲ್ಲ..? ಬಂಗಾಳದ ಚುನಾವಣೆಯೇ ತುಂಬಾ ಮುಖ್ಯವಾಗಿದೆಯಾ ಬಿಜೆಪಿಗೆ ..? ಎಂದು ಅವರು ಟ್ವೀಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

Advertisement

ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುವ ಸ್ವಲ್ಪ ಸಮಯದ ಮುನ್ನಾ ನುಸ್ರತ್ ಈ ರೀತಿ ಟ್ವೀಟ್ ಮಾಡಿದ್ದಾರೆ.

ಇನ್ನು, ಪ್ರಚಾರ ಸಭೆಯಲ್ಲಿ ಮಾತನಾಡಿದ ಯೋಗಿ, ಬಂಗಾಳದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇದರಿಂದಾಗಿ ಬಂಗಾಳದ ಜನರು ಬೇಸತ್ತು ಹೋಗಿದ್ದಾರೆ  ಬಂಗಾಳದಲ್ಲಿ ನಾವು ಬದಲಾವಣೆಯನ್ನು ತರಲಿದ್ದೇವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ವಾಗ್ದಾಳಿ ಮಾಡಿದರು.

ಇನ್ನು, ಕ್ಯಾಬಿನೆಟ್ ಮಿನಿಸ್ಟರ್ ಫಿರ್ಹಾದ್ ಹಕಿಮ್ ಹಾಗೂ ಸಂಸದ ಡಾ. ಕಾಕೋಲಿ ಘೋಷ್ ದಸ್ತಿದಾರ್ ಇಬ್ಬರು ಕೂಡ ಹತ್ರಾಸ್ ಘಟನೆಯ ವರದಿಯನ್ನು ಟ್ವೀಟ್ ಮಾಡುವುದರೊಂದಿಗೆ ಹ್ಯಾಶ್ ಟ್ಯಾಗ್ ನಲ್ಲಿ ಬಿಜೆಪಿ ಹಟಾವೊ, ಬೇಟಿ ಬಚಾವೋ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಯೋಜನೆಗಳಲ್ಲಿ ಒಂದಾದ “ಬೇಟಿ ಬಚಾವೋ ಬೇಟಿ ಪಡಾವೋ”ವನ್ನು ವ್ಯಂಗ್ಯ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭೀಕರ ಘಟನೆಗಳ ಲೆಕ್ಕಕ್ಕೆ ಅಂತ್ಯವಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸಂಕೊಲೆಯಲ್ಲಿರುವಾಗ ಅಲ್ಲಿನ ಜನರು ಬಳಲುತ್ತಿದ್ದಾರೆ. ಆದರೂ, ಯೋಗಿ ಆದಿತ್ಯನಾಥ್ ಬಂಗಾಳದಲ್ಲಿದ್ದಾರೆಯೆ..? ಎಂದು ಸಂಸದ ಡಾ. ದಸ್ತದಾರ್ ಟ್ವೀಟ್ ಮಾಡಿದ್ದಾರೆ.

ಈ ಮಹಿಳೆಯ ಕುಟುಂಬದ ಸುರಕ್ಷತೆಗೆ ಆದ್ಯತೆ ನೀಡಲಾಗುವುದಿಲ್ಲ, ಬಂಗಾಳದ ಚುನಾವಣೆ..? ಏನೆನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಲು ವಿಫಲನಾಗಿದ್ದೇನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಗಾಳದ ಮಹಿಳಾ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಕ ಎಂದು ಭಾವಿಸಿದರೇ ಕುತೂಹಲವಾಗಿದೆ ಎಂದು ಹಕೀಮ್ ಟ್ವೀಟ್ ಮಾಡಿದ್ದಾರೆ.

ಓದಿ : ಅಮೇಜಾನ್ ತನ್ನ ಲೋಗೋ ಬದಲಾಯಿಸಿದ್ದು ಇದೇ ಕಾರಣಕ್ಕಾ..?

Advertisement

Udayavani is now on Telegram. Click here to join our channel and stay updated with the latest news.

Next