ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ರಾಜ್ಯ ಘಟಕದ ತೀವ್ರ ಆಕ್ಷೇಪದ ನಡುವೆಯೂ ಕೆಲವರು ಸಂಘಟನೆ ಉಳಿಸಿ ಸಭೆ ನಡೆಸಲು ಮುಂದಾಗಿರುವುದು ಮತ್ತು ಅದರಲ್ಲಿ ಈಶ್ವರಪ್ಪ ಪಾಲ್ಗೊಳ್ಳುತ್ತಿರುವ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ನೀಡಿರುವ ಯಡಿಯೂರಪ್ಪ, ಇದು ಸಂಘಟನೆಗೆ ಧಕ್ಕೆ ತರುವ ಯತ್ನ. ಹೀಗಾಗಿ ಸಭೆ ನಡೆಸುವವರಿಗೆ ಕಠಿಣ
ಸಂದೇಶ ರವಾನಿಸುವಂತೆ ಕೋರಿದ್ದರು. ಇದರ ಬೆನ್ನಲ್ಲೇ ಗುರುವಾರ ಸಂಘಟನೆ ಉಳಿಸಿ ಸಭೆ ನಡೆಸದಂತೆ ಅಮಿತ್
ಶಾ ಸೂಚನೆ ನೀಡಿದ್ದು, ಅದನ್ನು ಉಲ್ಲಂ ಸಿದರೆ ಪಕ್ಷದ ಉಳಿವಿಗೆ ಯಾವುದೇ ಕ್ರಮ ಕೈಗೊಳ್ಳಲು ಸಿದ್ಧ ಎಂಬ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ.
Advertisement
ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಬಿಕ್ಕಟ್ಟು ಶಮನಕ್ಕೆ ಜ. 27ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ತಾವು ಸೂಚಿಸಿದಎಲ್ಲಾ ಸಲಹೆಗಳನ್ನು ಪಾಲಿಸಲಾಗಿದೆ. ಕೆಲವು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂಬ ಬೇಡಿಕೆಗೆ
ಸಂಬಂಧಿಸಿದಂತೆ ಮೂರು ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ.
ಅವರ ಸಮ್ಮುಖದಲ್ಲಿ ತಾವು ಮತ್ತು ಈಶ್ವರಪ್ಪ ಸಂಧಾನಕ್ಕೆ ಬಂದ ಬಳಿಕವೂ ಈಶ್ವರಪ್ಪ ಅವರು ಪಕ್ಷ ಸಂಘಟನೆಗಿಂತ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಹೆಚ್ಚು ಗಮನಹರಿಸುತ್ತಿರುವುದು, ತಮ್ಮ ವಿರುದ್ಧ ತಿರುಗಿಬಿದ್ದಿರುವ ಕೆಲವು ಮುಖಂಡರ ಜತೆ ಸೇರಿ ಸಭೆ ಮಾಡುತ್ತಿರುವುದು ಮುಂತಾದ ಅಂಶಗಳನ್ನೂ ಯಡಿಯೂರಪ್ಪ ಅವರು ಅಮಿತ್ ಶಾ ಅವರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.