Advertisement

ಷೇರುಪೇಟೆಗೆ ಆಘಾತ- ಸೆನ್ಸೆಕ್ಸ್‌ 1,628 ಅಂಕ ಕುಸಿತ- ನಿಫ್ಟಿ 460.35 ಅಂಕ ಪತನ

12:27 AM Jan 18, 2024 | Team Udayavani |

ಮುಂಬಯಿ: ಮುಂಬಯಿ ಷೇರುಪೇಟೆ ಬುಧವಾರ ಕುಸಿತದ ಆಘಾತ ಎದುರಿಸಿದೆ. ಒಂದೇ ದಿನ ಸೆನ್ಸೆಕ್ಸ್‌ ಮತ್ತು ನಿಫ್ಟಿ ಶೇ.2ಕ್ಕಿಂತಲೂ ಹೆಚ್ಚು ಕುಸಿತ ದಾಖಲಿಸಿದ್ದು, ಕಳೆದ 2 ವರ್ಷಗಳಲ್ಲಿ ಇದೇ ಮೊದಲು.

Advertisement

ಜಾಗತಿಕ ಬಿಕ್ಕಟ್ಟಿನ ಪರಿಣಾಮವೆಂಬಂತೆ ಬ್ಯಾಂಕಿಂಗ್‌, ಉಕ್ಕು, ತೈಲ ಷೇರುಗಳ ಭಾರೀ ಮಾರಾಟದಲ್ಲಿ ಹೂಡಿಕೆದಾರರು ತೊಡಗಿಕೊಂಡ ಪರಿಣಾಮ, ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರ 1,628.01 ಅಂಕಗಳ(ಶೇ.2.23) ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 71,500.76 ಕ್ಕೆ ತಲುಪಿದೆ. ಇದೇ ವೇಳೆ, ನಿಫ್ಟಿ 460.35 ಅಂಕ (ಶೇ.2.09) ಕುಸಿದು, 21,571.95 ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಎಚ್‌ಡಿಎಫ್ಸಿಗೆ ಭಾರೀ ನಷ್ಟ: ಬುಧವಾರ ಎಚ್‌ಡಿಎಫ್ಸಿ ಬ್ಯಾಂಕ್‌ನ ಷೇರುಗಳ ಮೌಲ್ಯ ಶೇ.8ರಷ್ಟು ಪತನಗೊಂಡಿದೆ. ಇದರಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ 93 ಸಾವಿರ ಕೋಟಿ ರೂ. ಕುಸಿದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next