Advertisement

YSRCP ಜಗನ್‌ ರೆಡ್ಡಿಗೆ ಶಾಕ್‌: ರಾಜ್ಯಸಭೆಯ ಇಬ್ಬರು ಸಂಸದರು ರಾಜೀನಾಮೆ

12:36 AM Aug 30, 2024 | Team Udayavani |

ಹೊಸದಿಲ್ಲಿ: ಆಂಧ್ರ ಪ್ರದೇಶದ ವೈಎಸ್‌ಆರ್‌ಸಿಪಿಯ ಇಬ್ಬರು ರಾಜ್ಯಸಭಾ ಸದಸ್ಯರು ಪಕ್ಷದ ಸದಸ್ಯತ್ವ ಹಾಗೂ ಮೇಲ್ಮನೆ ಸದಸ್ಯತ್ವಕ್ಕೂ ರಾಜೀನಾ ಮೆ ನೀಡಿದ್ದು, ಸಿಎಂ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸೇರ್ಪಡೆ ಯಾಗಲು ಮುಂದಾಗಿದ್ದಾರೆ. ಇದರೊಂದಿಗೆ, ವೈ. ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

Advertisement

206ರ ಜೂನ್‌ವರೆಗೂ ಸದಸ್ಯತ್ವ ಹೊಂದಿ ದ್ದ ಮೋಪಿದೇವಿ ವೆಂಕಟರಮಣ್‌ ಮತ್ತು 2028ರ ಜೂನ್‌ವರೆಗೆ ಸದಸ್ಯತ್ವ ಇದ್ದ ಬೇಡ ಮಸ್ತಾನ್‌ ರಾವ್‌ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ದ್ದಾರೆ. ಈ ಇಬ್ಬರು ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇವರ ರಾಜೀನಾಮೆಯಿಂದ ಮೇಲ್ಮನೆಯಲ್ಲಿ ವೈಎಸ್‌ಆರ್‌ಸಿಪಿ ಸದಸ್ಯರ ಸಂಖ್ಯೆ 9ಕ್ಕೆ ಇಳಿಕೆಯಾಗಿದೆ. ಲೋಕಸಭೆಯಲ್ಲಿ ಪಕ್ಷದ ನಾಲ್ವರು ಎಂಪಿಗಳಿದ್ದಾರೆ.

ರಾಜೀನಾಮೆ ನೀಡಿರುವ ಇಬ್ಬರು ನಾಯಕರು ಟಿಡಿಪಿ ಮೂಲಕ ರಾಜ್ಯಸಭೆಗೆ ಮರು ಆಯ್ಕೆಯಾಗುವ ಸಾಧ್ಯತೆಗಳಿವೆ. 2019ರಿಂದ ರಾಜ್ಯಸಭೆಯಲ್ಲಿ ಟಿಡಿಪಿಯ ಒಬ್ಬ ಸದಸ್ಯರು ಇಲ್ಲ. ಹಾಗಾಗಿ ಇವರಿಬ್ಬರ ಮೂಲಕ ತನ್ನ ಖಾತೆಯನ್ನು ಟಿಡಿಪಿ ತೆರೆಯಲಿದೆ ಎಂದು ಹೇಳಲಾಗುತ್ತಿದೆ. ವಿಧಾನಸಭೆ ಚುನಾವಣೆಯ ಬಳಿಕ ವೈಎಸ್‌ಆರ್‌ಸಿಪಿಯ ಅನೇಕ ನಾಯಕರು ಪಕ್ಷವನ್ನು ತೊರೆದೆ ಬೇರೆ ಪಕ್ಷಗಳನ್ನು ಸೇರುತ್ತಿದ್ದಾರೆ. ಈ ವಲಸೆಯನ್ನು ತಡೆಯುವುದು ನಾಯಕತ್ವಕ್ಕೆ ಕಷ್ಟದ ಸವಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.