Advertisement
ಈ ಮೂಲಕ ಮೋದಿ ಅಲೆ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲೂ ಬಿಜೆಪಿಯ ಕೈ ಹಿಡಿದಿದೆ. ಬಿಜೆಪಿ ನಾಯಕರ ಒಗ್ಗಟ್ಟು, ಕಾರ್ಯಕರ್ತರ ಹುಮ್ಮಸ್ಸು, ಯುವ ಮತದಾರರು ಮೋದಿ ಪರ ನಿಂತದ್ದು ಈ ಭಾರೀ ಅಂತರದ ಗೆಲುವಿಗೆ ಕಾರಣ ಎಂದು ಹೇಳಬಹುದು.
2014ರ ಲೋಕಸಭಾ ಚುನಾವಣೆ ಯಲ್ಲಿ ಶೋಭಾ 5,81,168 ಮತ ಗಳಿಸಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ 3,99,525 ಮತಗಳನ್ನು ಗಳಿಸಿದ್ದರು. ಈ ಮೂಲಕ 1,81,643 ಮತ ಅಂತರ ದಲ್ಲಿ ಜಯಭೇರಿ ಬಾರಿಸಿದ್ದರು. ಕ್ಷೇತ್ರವಾರು ಗಳಿಕೆಯೂ ಹೆಚ್ಚಳ
ಕುಂದಾಪುರ, ಉಡುಪಿ, ಕಾಪು, ಕಾರ್ಕಳ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರಿಕೆರೆ ವಿಧಾನಸಭಾ ಕ್ಷೇತ್ರಗಳಲ್ಲೂ ಮತಗಳಿಕೆ ದಾಖಲೆ ಮಟ್ಟಕ್ಕೆ ತಲುಪಿದೆ.
Related Articles
Advertisement
ಫಲ ನೀಡದ ಮೈತ್ರಿ ಅಭ್ಯರ್ಥಿಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದಿ ರುವುದರಿಂದ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವೆಂದೇ ಹೇಳಲಾಗು ತ್ತಿತ್ತು. ಆದರೆ ಇಷ್ಟು ಅಂತರದ ಗೆಲುವು ಬಿಜೆಪಿ ಪಾಳಯದಲ್ಲೂ ಅಚ್ಚರಿ ಮೂಡಿಸಿದೆ. ಈ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿಲ್ಲದೆ ಇರುವುದು ಕೂಡ ಮೈತ್ರಿ ಅಭ್ಯರ್ಥಿ ಪ್ರಮೋದ್ ಸೋಲಿಗೆ ಒಂದು ಕಾರಣ ಎನ್ನಲಾಗುತ್ತಿದೆ. ಮತಗಳ ಅಂತರ “ಲಕ್ಷಾಂತರ’
ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 5 ಬಾರಿ ಚುನಾಯಿತ ರಾದದ್ದು ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್. ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಆಸ್ಕರ್ ಮೂರು ಬಾರಿ, ಟಿ.ಎ.ಪೈ ಒಂದು ಬಾರಿ ಗೆಲುವು ಸಾಧಿಸಿ ದ್ದರು. ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಡಿ.ಎಂ. ಪುಟ್ಟೇಗೌಡರು ಎರಡು ಬಾರಿ, ಡಿ.ಕೆ. ತಾರಾದೇವಿಯವರು ಒಂದು ಬಾರಿ ಲಕ್ಷಕ್ಕೂ ಹೆಚ್ಚು ಅಂತರ ದಿಂದ ಗೆಲುವು ಸಾಧಿಸಿದ್ದರು. ಆದರೆ ಈ ದಾಖಲೆಗಳನ್ನು ಶೋಭಾ ಕರಂದ್ಲಾಜೆ ಮುರಿದಿದ್ದಾರೆ.