Advertisement

ಎನ್‌ಐಎ ತನಿಖೆಗೆ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

01:27 AM Feb 22, 2022 | Team Udayavani |

ಉಡುಪಿ: ಶಿವಮೊಗ್ಗದ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಕೂಡಲೇ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಕೃಷಿ ಸಚಿವೆ (ರಾಜ್ಯಖಾತೆ) ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

Advertisement

ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿರುವ ಅವರು ಅಲ್ಲಿಂದಲೇ ಮಾಧ್ಯಮ ಹೇಳಿಕೆ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ತನಿಖೆಯನ್ನು ಎನ್‌ಐಎಗೆ ಒಪ್ಪಿಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ. ಹರ್ಷ ಅವರ ಕುಟುಂಬಕ್ಕೆ ಸರಕಾರವೇ ಆರ್ಥಿಕ ನೆರವು ನೀಡುವಂತೆಯೂ ಕೋರಿದ್ದೇನೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮಾತನಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಇಂತಹ ಕೊಲೆ ಮೊದಲ ಬಾರಿಗೆ ಆಗುತ್ತಿರುವುದಲ್ಲ. ಮಂಗಳೂರು, ಮೈಸೂರು, ಬೆಂಗಳೂರಿನಲ್ಲಿ ಹಿಂದೂ ಸಂಘಟನೆಯ ಹಲವಾರು ಕಾರ್ಯ ಕರ್ತರ ಹತ್ಯೆಯಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ರುದ್ರೇಶ್‌ ಕೊಲೆ ಯಾದಾಗ ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಕೈವಾಡ ದೃಢಪಟ್ಟಿತ್ತು. ಹರ್ಷ ಕೊಲೆಯ ಹಿಂದೆಯೂ ಇಂತಹ ದೊಡ್ಡ ಷಡ್ಯಂತ್ರ ವಿದೆ. ಇದರ ಪತ್ತೆಯಾಗಬೇಕು ಮತ್ತು ಕೃತ್ಯ ಎಸಗಿದವರಿಗೆ ಕಠಿನ ಶಿಕ್ಷೆಯಾಗಬೇಕು. ಅದಕ್ಕಾಗಿ ಎನ್‌ಐಎ ಮೂಲಕವೇ ತನಿಖೆ ಮಾಡಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ

ಬಿಜೆಪಿ ಖಂಡನೆ
ಶಿವಮೊಗ್ಗದಲ್ಲಿ ನಡೆದ ಹತ್ಯೆಯನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಹಿಂದಿನ ಹಲವಾರು ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಕಾರಣವಾಗಿರುವ ಸಮಾಜ ಘಾತಕ ಸಂಘಟನೆಗಳ ಕೈವಾಡ ಈ ಹತ್ಯೆಯಲ್ಲೂ ಇರುವ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು. ಪ್ರಕರಣವನ್ನು ತತ್‌ಕ್ಷಣ ಎನ್‌ಐಎಗೆ ಹಸ್ತಾಂತರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಆಗ್ರಹಿಸಿದ್ದಾರೆ.

Advertisement

ಬ್ರಹ್ಮಾವರ: ವಿಹಿಂಪ ಪ್ರತಿಭಟನೆ
ಬ್ರಹ್ಮಾವರ: ಹರ್ಷ ಅವರ ಹತ್ಯೆಯನ್ನು ಖಂಡಿಸಿ ಇಲ್ಲಿನ ಬಸ್‌ ನಿಲ್ದಾಣದ ಬಳಿ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಬ್ರಹ್ಮಾವರ ತಾಲೂಕು ಪ್ರಖಂಡದ ವತಿಯಿಂದ ಪ್ರತಿಭಟನೆ ನಡೆಯಿತು. ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾಘವೇಂದ್ರ ಕುಂದರ್‌ ಜೆ.ಬಿ., ಸಂಘಟನೆಯ ಜಯ ಪೂಜಾರಿ, ಶಶಿಕಾಂತ ಕುಂಜಾಲು ಮೊದಲಾದ ವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next