Advertisement

ಮತಾಂತರ ಕಾಯ್ದೆ ವಿರೋಧಿಸೋದು ಕಾಂಗ್ರೆಸ್‌ ಮಾನಸಿಕತೆ : ಶೋಭಾ ಕರಂದ್ಲಾಜೆ

11:40 AM Dec 13, 2021 | Team Udayavani |

ಬಾಗಲಕೋಟೆ: ಜನರ ಬಡತನ, ಅಸಹಾಯಕತೆ ದುರುಪಯೋಗಕ್ಕೆ ಅವಕಾಶ ಕೊಡಬಾರದು. ಅದನ್ನೇಬಂಡವಾಳ ಮಾಡಿಕೊಂಡು ಕೆಲವರು ಬಡವರನ್ನುಮತಾಂತರ ಮಾಡುತ್ತಿದ್ದಾರೆ. ಬಳಿಕ ಅವರುಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆತರಲಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ಎಲ್ಲ ವರ್ಗಗಳ ಜನರ ಅಭಿವೃದ್ಧಿಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕಾಗಿಅವರು ಧರ್ಮ ಬಿಟ್ಟು ಹೋಗಲು ಸಾಧ್ಯ ಆಗಿದೆ.ಇದಕ್ಕೆ ಜಾತಿ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಅಡೆತಡೆಗಳು ಕಾರಣವೋ ಎಂಬ ಬಗ್ಗೆಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು.ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್‌ವಿರೋಧ ಮಾಡುತ್ತಿದೆ. ಇದು ಕಾಂಗ್ರೆಸ್‌ನಮಾನಸಿಕತೆ. ನಾನು ಕೇಂದ್ರ ಸಚಿವೆಯಾಗಿ ಈಬಗ್ಗೆ ಹೆಚ್ಚು ಮಾತಾಡಲ್ಲ. ಆದರೆ, ನಾನು ಕಂಡಂತೆ, ಪಶ್ಚಿಮ ಬಂಗಾಲ, ಆಸ್ಸಾಂ ಹಾಗೂ ಬಾಂಗ್ಲಾದೇಶದಿಂದ ಬರುವ ಮಕ್ಕಳನ್ನು ರಾಜ್ಯಕ್ಕೆ ತಂದು ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್‌ ಐಡಿಕೊಟ್ಟು ಮುಂದೆ ಅವರನ್ನು ಮತದಾರರನ್ನಾಗಿ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮತೆಗೆದುಕೊಳ್ಳಬೇಕು. ಈ ಮಾನಸಿಕತೆ ಇರುವುದುಕಾಂಗ್ರೆಸ್‌ನಲ್ಲಿ ಮಾತ್ರ. ಜಾತಿ ಹಾಗೂ ಧರ್ಮದಆಧಾರದಲ್ಲಿ ಫರ್ಮನೆಂಟ್‌ ಆಗಿ ಅಧಿಕಾರದಲ್ಲಿಇರಬಹುದು ಎನ್ನುವುದು ಕಾಂಗ್ರೆಸ್‌ ಮಾನಸಿಕತೆ.ಬಿಜೆಪಿ ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತದೆ.ಈ ಬಗ್ಗೆ ಡಿ.ಕೆ. ಶಿವಕುಮಾರ ಚರ್ಚೆ ಮಾಡದೇ ಇರುವುದು ಒಳ್ಳೆಯದು. ಅವರ ಪಕ್ಷ ನಿಂತಿದ್ದೆಇದೇ ಆಧಾರದಲ್ಲಿ. ಜಾತಿ, ಧರ್ಮ, ಒಂದು ವರ್ಗ ಓಲೈಸಿ ಅಧಿಕಾರ ಪಡೆಯುವುದಲ್ಲಎಂಬುದು ಮೋದಿ ಅವರು ಎರಡುಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.

ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಇದೆ. ನಾನೂ ಸಂಸದೆ ಇದ್ದೇನೆ. ನಾನೂ ಈ ಬಾರಿ ಲೋಕಸಭೆಗೆಕಡಿಮೆ ಹೋಗಿದ್ದೇನೆ. ಇದಕ್ಕೆ ಕಾರಣ ಏನಂದ್ರೆ ಉತ್ತರಪ್ರದೇಶದ ಜವಾಬ್ದಾರಿ. ಈ ರೀತಿಯಾಗಿ ಹಲವಾರುಜನಕ್ಕೆ ಜವಾಬ್ದಾರಿ ಇದೆ. ನಮ್ಮ ಬಿಜೆಪಿ ಪಕ್ಷದಲ್ಲಿಹೆಚ್ಚು ಸಂಸದರು ಇರೋದು ಯುಪಿಯಲ್ಲಿ. ಈಗಅಲ್ಲಿ ಚುನಾವಣೆ ಇರೋದ್ರಿಂದ ಎಲ್ಲರೂ ಅಲ್ಲಿಯೇಓಡಾಡುತ್ತಿದ್ದಾರೆ. ಕೆಲವರು ಅಧಿವೇಶನಕ್ಕೆ ಬಂದುಸೆಂಟ್ರಲ್‌ ಹಾಲ್‌ನಲ್ಲಿ ಕುಳಿತಿರುತ್ತಾರೆ. ಅಥವಾ ಬೇರೆಮಂತ್ರಿಗಳ ಹತ್ರ ಅವರವರ ಕ್ಷೇತ್ರಗಳ ವಿಚಾರಗಳನ್ನುಇಟ್ಟುಕೊಂಡು ಹೋಗಿರುತ್ತಾರೆ. ಎಣಿಕೆ ಮಾಡುವಸಂದರ್ಭದಲ್ಲಿ ಇರಲಿಕ್ಕಿಲ್ಲ ಎಂದು ಲೋಕಸಭೆಯಲ್ಲಿ ಸಂಸದರ ಹಾಜರಾತಿ ಕಡಿಮೆ ಆಗಿರುವ ಕುರಿತು ಪ್ರತಿಕ್ರಿಯಿಸಿದರು.

ಸಿಡಿಎಸ್‌ ಬಿಪಿನ್‌ ರಾವತ್‌ ಸಾವು ಕೆಲವರು ಸಂಭ್ರಮಿಸಿದ ಕುರಿತ ಪ್ರಶ್ನೆಗೆಪ್ರತಿಕ್ರಿಯಿಸಿದ ಅವರು, ಕೆಲವು ದೇಶದ್ರೋಹಿಗಳುಸಂಭ್ರಮಿಸಿರಬಹುದು. ಅಂಥವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದಗೃಹ ಇಲಾಖೆ, ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳುತ್ತವೆ ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆಡಳಿತದಿಂದ ಉತ್ತರ ಪ್ರದೇಶ ಸಂಪೂರ್ಣಬದಲಾಗಿದೆ. ಐದು ವರ್ಷದ ಹಿಂದಿನ ಹಾಗೂಈಗಿನ ಉತ್ತರ ಪ್ರದೇಶ ನೋಡಬೇಕು.ದೇಶದಲ್ಲಿ ಹೆಚ್ಚು ಹೈವೆ ಆಗಿರುವುದು ಉತ್ತರಪ್ರದೇಶದಲ್ಲಿ. ಶಾಲೆ, ಕಾಲೇಜು, ಸೇತುವೆ ಎಲ್ಲವೂನಮ್ಮ ಸರ್ಕಾರದಲ್ಲಿ ಆಗಿವೆ. ಈಗ ಉತ್ತರಪ್ರದೇಶದಲ್ಲೂ ಕಾನೂನು ಸುವ್ಯವಸ್ಥೆ ಇದೆ. ಯೋಗಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಉದ್ಯೋಗ ಹುಡುಕಿಕೊಂಡು ಬೆಂಗಳೂರಗೆ ಬರುತ್ತಿದ್ದ ಕಾರ್ಮಿಕರು ಇದೀಗ ವಾಪಸ್‌ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದಾರೆ

ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ಯಾರೂ ಒತ್ತಾಯಪೂರ್ವಕವಾಗಿ ಹೇರಲು ಆಗಲ್ಲ. ಆಹಾರಪದ್ಧತಿಯ ಆಯ್ಕೆಯನ್ನು ವ್ಯಕ್ತಿ ಅಥವಾ ಮನೆತನಕ್ಕೆ ಬಿಡಬೇಕು. ಒತ್ತಾಯಪೂರ್ವಕವಾಗಿ ತಿನಿಸುತ್ತೇವೆಎಂಬುದು ತಪ್ಪು. ಮಗುವಿಗೆ ಏನು ಕೊಡಬೇಕು ಅನ್ನೋದು ತಾಯಿಯ ಆಯ್ಕೆ. ಮಗುವಿಗೆ ಏನುಕೊಡಬೇಕು, ಮಗು ಹೇಗಿರಬೇಕು ಎಂಬುದನ್ನು ತಾಯಿ ನಿರ್ಧಾರ ಮಾಡಬೇಕು. ಮೊಟ್ಟೆ ಕೊಡಬೇಕಾ,ಬೇಡವಾ ಎಂಬುದರ ಬದಲು ಮೊಟ್ಟೆಯ ಬದಲು ಹಣ ಕೊಟ್ಟರೆ ತಾಯಿ ಒಳ್ಳೆಯ ಆಹಾರ ಮಗುವಿಗೆಕೊಡಬಲ್ಲಳು. ಇದು ಚರ್ಚೆ, ವಿಶ್ಲೇಷಣೆ ಆಗಬೇಕು. ಹಾಗಾಗಿ ಆಹಾರ ಪದ್ಧತಿಯನ್ನು ಅವರವರಿಗೆ ಬಿಡಬೇಕು.– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

 

Advertisement

Udayavani is now on Telegram. Click here to join our channel and stay updated with the latest news.

Next