Advertisement

ಕೋವಿಡ್ 19 ವಿರುದ್ಧ ಒಂದಾಗಿ ಹೋರಾಡೋಣ: ಅಖ್ತರ್‌

12:57 PM Mar 27, 2020 | sudhir |

ಲಾಹೊರ್‌: ಪಾಕಿಸ್ಥಾನದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ನಿವೃತ್ತಿ ಬಳಿಕ ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ ಮೂಲಕ ಕ್ರಿಕೆಟ್‌ ಚಟುವಟಿಕೆಗಳ ಬಗ್ಗೆ ಅವಲೋಕನ ಹಾಗೂ ವಿಮರ್ಶೆ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮನುಷ್ಯರಾಗಿ ಚಿಂತಿಸುವ ಸಮಯ ಬಂದಿದೆ ಎಂದಿ¨ªಾರೆ.

Advertisement

ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಭೀತಗೊಂಡಿ¨ªಾರೆ. ಬಹುತೇಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಿರುವಾಗ ಜಾತಿ, ಧರ್ಮ, ಆರ್ಥಿಕ ಸ್ಥಿತಿಯನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಒಬ್ಬರಿಗೊಬ್ಬರು ನೆರವು ನೀಡಬೇಕು ಎಂದು ಅಖ್ತರ್‌ ಕರೆ ನೀಡಿ¨ªಾರೆ.

ಜಾಗತಿಕ ವಿಪತ್ತು
“ಕೊರೊನಾ ಎನ್ನುವುದು ಜಾಗತಿಕ ವಿಪತ್ತು ಆಗಿದೆ. ನಾವು ಧರ್ಮವನ್ನು ಮೀರಿ ನಿಂತು ಚಿಂತನೆ ಮಾಡಬೇಕಿದೆ. ಕೋವಿಡ್‌ 19 ಹರಡದಂತೆ ತಡೆಯಲು ಎಲ್ಲ ದೇಶಗಳು ಹರಸಾಹಸ ಪಡುತ್ತಿವೆ. ಇಂಥ ಸನ್ನಿವೇಶದಲ್ಲಿ ಯಾವುದೇ ಧರ್ಮ, ಜಾತಿ, ಶತ್ರು ರಾಷ್ಟ್ರಗಳ ಚಿಂತನೆಯನ್ನು ಬಿಟ್ಟು ಮಾನವ ಕುಲದ ಒಳಿತಿ ಗಾಗಿ ನಾವು ಒಂದಾಗಬೇಕು’ ಎಂದು ಅಖ್ತರ್‌ ಹೇಳಿದರು.

“ಶ್ರೀಮಂತರು ಅಗತ್ಯ ವಸ್ತುಗಳನ್ನು ಒಟ್ಟುಗೂಡಿಸಿರಹುದು, ಆದರೆ ದಿನಗೂಲಿ ಕಾರ್ಮಿಕರ ಸ್ಥಿತಿ ಏನಾಗಲಿದೆ ಎಂಬುದನ್ನು ಯೋಚಿಸಿ ನೋಡಿ… ಇಲ್ಲಿ ಹಿಂದೂ ಅಥವಾ ಮುಸ್ಲಿಂ ಎನ್ನುವುದು ಮುಖ್ಯವಲ್ಲ. ನಾವೆಲ್ಲ ಮನುಷ್ಯರಾಗಿ ಚಿಂತಿಸುವ ಸಮಯ ಬಂದಿದೆ. ಪ್ರಾಣಿಗಳ ಹಾಗೆ ಜೀವಿಸುವ ಬದಲು ಮನುಷ್ಯರಾಗಿ ಜೀವಿಸೋಣ. ಇನ್ನೊಬ್ಬರಿಗೆ ಸಹಾಯ ಮಾಡುವ ಮನಃಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳೋಣ’ ಎಂದು ಅಖ್ತರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next