Advertisement
ನ.17ರಂದು ಮತದಾನ ನಡೆಯಲಿರುವಂತೆಯೇ ಭೋಪಾಲ ಜಿಲ್ಲೆಯ ಬೆರಾಸಿಯಾ ಎಂಬಲ್ಲಿ ಮಾತನಾಡಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ “ಮಾಜಿ ಸಿಎಂ ಕಮಲ್‌ನಾಥ್ ಭಯ್ನಾ ರಾಜ್ಯದ ಹೊರಗಿನವರು. ಹೀಗಾಗಿ ಅವರನ್ನು ನಂಬುವಂತಿಲ್ಲ. ಆದರೆ ನಾವು ಇಲ್ಲಿಯೇ ಹುಟ್ಟಿದವರು. ಪ್ರತಿಪಕ್ಷ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡಿ ವಂಚಿಸುತ್ತದೆ. ಹೀಗಾಗಿ ಆ ಪಕ್ಷಕ್ಕೆ ಬೆಂಬಲ ನೀಡಿ ಮತದಾರರು ತಪ್ಪು ಮಾಡಬಾರದು’ ಎಂದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕನನ್ನು ಟೀಕಿಸಲು ಜನಪ್ರಿಯ ಹಿಂದಿ ಹಾಡಿನ ಧಾಟಿಯಲ್ಲಿ ಹಾಡಿದ ಚೌಹಾಣ್ “ಯೆ ತೊ ತಹರೆ ಪರ್‌ದೇಶಿ, ಸಾಥ್ ಕ್ಯಾ ನಿಭಾಯೇಂಗೇ’ (ಅವರು ಅಪರಿಚಿತರು, ನಮ್ಮ ಜತೆ ಇರಲಾರರು) ಎಂದರು. ಅವರು ಸಿಎಂ ಆಗಿದ್ದಾಗ ಅಭಿವೃದ್ಧಿಗೆ ಹಣವಿಲ್ಲ ಎಂದು ದೂರುತ್ತಿದ್ದರು ಎಂದರು. ನಮ್ಮ ಸರ್ಕಾರದ ಅವಧಿಯಲ್ಲಿ ಅಂಥ ಕೊರತೆಯೇ ಉಂಟಾಗಿಲ್ಲ ಎಂದರು. ಅತ್ಯುತ್ತಮ ನಟ:
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅತ್ಯುತ್ತಮ ನಟ ಎಂದು ಮಾಜಿ ಸಿಎಂ ಕಮಲ್‌ನಾಥ್ ಸಾಗರ್ ಜಿಲ್ಲೆಯ ರೇಹ್ಲಿ ಎಂಬಲ್ಲಿ ಟೀಕಿಸಿದ್ದಾರೆ. ಡಿ.3ರ ಫಲಿತಾಂಶ ಬರುವ ವೇಳೆಗೆ ಅಧಿಕಾರ ಕಳೆದುಕೊಂಡಿರುತ್ತಾರೆ. ಆದರೆ, ಅವರು ನಿರುದ್ಯೋಗಿಯಾಗುವುದಿಲ್ಲ. ಏಕೆಂದರೆ ಫಲಿತಾಂಶದ ಬಳಿಕ ಅವರು ಮುಂಬೈಗೆ ತೆರಳಿ ಸಿನಿಮಾದಲ್ಲಿ ನಟಿಸಿ, ಮಧ್ಯಪ್ರದೇಶಕ್ಕೆ ಹೆಸರು, ಜನಪ್ರಿಯತೆ ತರಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
Related Articles
Advertisement
15 ಸಾವಿರ ರೂ. ವಾರ್ಷಿಕ ನೆರವು:ಛತ್ತೀಸ್‌ಗಢದಲ್ಲಿ ನ.17ರಂದು 70 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿರುವಂತೆಯೇ ಸಿಎಂ ಭೂಪೇಶ್ ಭಗೇಲ್ ಹೊಸ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೆ ಮಹಿಳೆಯರಿಗೆ ಪ್ರತಿ ವರ್ಷ 15 ಸಾವಿರ ರೂ. ನೆರವು ನೀಡುವುದಾಗಿ ಹೇಳಿದ್ದಾರೆ.