Advertisement
ಸಿಎಂ ಆಗಿದ್ದವರು ಹೀಗೆ ಬದಲಾಗಲು ಸಾಧ್ಯವೇ ಎಂದು ಹುಬ್ಬೇರಿಸಬೇಡಿ. ಸಾಧ್ಯ ಅನ್ನೋದನ್ನು ಮಧ್ಯಪ್ರದೇಶದ ಮಾಜಿ ಸಿಎಂ ಮಾಡಿ ತೋರಿಸಿದ್ದಾರೆ. ಸಾಮಾನ್ಯರ ಬೈಕ್‌ಗಳನ್ನೇರಿ, ಪ್ಯಾಸೆಂಜರ್ ರೈಲುಗಳಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಕಾಣಿಸಿಕೊಳ್ಳುತ್ತಿದ್ದಾರೆ. 15 ವರ್ಷಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿರುವ ಅವರು, ಹಳ್ಳಿಗಳಿಗೆ ಬೈಕ್‌ಗಳನ್ನೇರಿ ಓಡಾಡುತ್ತಿದ್ದು, ಅವರ ಇಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಸ್ವತಃ ಚೌಹಾ ಜಾಲ ತಾಣಗಳಲ್ಲಿ ಸಾಮಾನ್ಯರೊಂದಿಗೆ ಸಂಭಾಷಣೆ ಕೂಡ ನಡೆಸುತ್ತಿದ್ದಾರೆ. ಮೊನ್ನೆ ಮೊನ್ನೆ ಯಷ್ಟೇ ನಡೆದ ಚುನಾವಣೆ ಯಲ್ಲಿ ಪಕ್ಷ ಸೋಲನುಭವಿಸಿದರೂ, ಜೀವ ನೋತ್ಸಾಹ ಕಳೆದುಕೊಳ್ಳದ ಚೌಹಾಣ್ ಜನ ರೊಟ್ಟಿಗೆ ಹೆಚ್ಚೆಚ್ಚು ಸಮಯ ಕಳೆಯುತ್ತಿದ್ದಾರೆ. ಬೆಂಬಲಿಗರೊಂದಿಗೆ ನಿರಂತರ ಸಂಪರ್ಕವನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ರೈತನೊಬ್ಬನ ಬೈಕ್‌ನಲ್ಲಿ ಕುಳಿತು, ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದರು. ಅವರನ್ನು ನೋಡುತ್ತಿದ್ದಂತೆ ಗ್ರಾಮಸ್ಥರು ಅವರನ್ನು ಹೆಗಲ ಮೇಲೆ ಹೊತ್ತು ಸಂತಸಪಟ್ಟರು. ಮೊನ್ನೆ ತಾನೇ ಭೋಪಾಲ್‌ನಿಂದ ಬಿನಾಕ್ಕೆ ರೈಲಿನಲ್ಲಿ ಸಾಮಾನ್ಯ ಬೋಗಿಯಲ್ಲೇ ಕುಳಿತು ಪ್ರಯಾಣಿಸಿದ್ದರು. ಅಷ್ಟೇ ಅಲ್ಲ, ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ “ಮಧ್ಯ ಪ್ರದೇಶದ ಜನ ಸಾಮಾನ್ಯ’ ಎಂದೂ ಬರೆದು ಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ. Advertisement
ಕಾಮನ್ ಮ್ಯಾನ್ ಚೌಹಾಣ್
06:00 AM Dec 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.