Advertisement
ವೆಸ್ಟ್ ಇಂಡೀಸ್ನಲ್ಲಿ ನಡೆದ ಸೂಪರ್ 50 ಕಪ್ ಕಪ್ ದೇಶಿಯ ಕ್ರಿಕೆಟ್ ಕೂಟದ ವಿಂಡ್ವಾರ್ಡ್ ಐಸ್ಲೆಂಡ್ – ಗಯಾನ ನಡುವಿನ ಪಂದ್ಯದ ವೇಳೆ ಇಂತಹದೊಂದು ಘಟನೆ ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡ್ವಾರ್ಡ್ 50 ಓವರ್ಗೆ 7 ವಿಕೆಟ್ಗೆ 286 ರನ್ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಗಯಾನ ತಂಡದ ಪರ ಶಿವನಾರಾಯಣ್ ಚಂದ್ರಪಾಲ್ (32 ರನ್) ಹಾಗೂ ತೇಜ್ನಾರಾಯಣ್ ಚಂದ್ರಪಾಲ್ (12 ರನ್) 2ನೇ ವಿಕೆಟ್ಗೆ ತಂಡಕ್ಕೆ ಚೇತರಿಕೆ ನೀಡುವ ಭರವಸೆ ಮೂಡಿಸಿದ್ದರು. ಆದರೆ 4.4ನೇ ಎಸೆತದಲ್ಲಿ ಶಿವನಾರಾಯಣ್ ಸ್ಟ್ರೈಟ್ಶಾಟ್ ಹೊಡೆದರು. ಆಗ ನಾನ್ಸ್ಟ್ರೈಕರ್ನಲ್ಲಿದ್ದ ತೇಜ್ ನಾರಾಯಣ್ ಕ್ರೀಸ್ ಬಿಟ್ಟಿದ್ದರು. ವೇಗಿ ಜಾನ್ ಕೈಗೆ ಸಿಕ್ಕಿ ನೇರವಾಗಿ ಚೆಂಡು ಸ್ಟಂಪ್ಗೆ ತಾಗಿತು. ಔಟ್ಗಾಗಿ ಮನವಿ ಸಲ್ಲಿಸಿದಾಗ ಮೂರನೇ ಅಂಪೈರ್ಗೆ ನೀಡಲಾಯಿತು. ಆಗ ಔಟ್ ಎಂದು ತೀರ್ಪು ನೀಡಲಾಯಿತು. ಮಗ ಪೆವಿಲಿಯನ್ಗೆ ತೆರಳುವ ಮೊದಲು ತಂದೆಯತ್ತ ತಿರುಗಿ ನೋಟ ಬೀರಿದ್ದು ವಿಶೇಷವಾಗಿತ್ತು. Advertisement
ಅಪ್ಪನ ಸ್ಟ್ರೈಟ್ ಶಾಟ್ಗೆ ಮಗ ರನೌಟ್!
06:50 AM Feb 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.