ಬುಲಾವಾಯೊ: ಜಿಂಬಾಬ್ವೆ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ ಆರಂಭಿಕ ಆಟಗಾರರಾದ ನಾಯಕ ಕ್ರೆಗ್ ಬ್ರಾತ್‌ವೇಟ್ ಮತ್ತು ತಗೆನಾರಾಯಣ್ ಚಂದರ್‌ಪಾಲ್ 33 ವರ್ಷ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅವರಿಬ್ಬರ ಈ ಸಾಧನೆಯಿಂದಾಗಿ ವೆಸ್ಟ್‌ಇಂಡೀಸ್ ತಂಡವು ಮಳೆಯಿಂದ ತೊಂದರೆಗೊಳಗಾದ ಈ ಪಂದ್ಯದಲ್ಲಿ 6 ವಿಕೆಟಿಗೆ 447 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಮೂರನೇ ದಿದ ಆಟ ಸಾಗುತ್ತಿದ್ದು ಜಿಂಬಾಬ್ವೆ ಒಂದು ವಿಕೆಟ್ ಕಳೆದುಕೊಂಡಿದ್ದು 76 ರನ್ ಗಳಿಸಿದೆ.
ಬ್ರಾತ್‌ವೇಟ್ ಮತ್ತು ಚಂದರ್‌ಪಾಲ್ ಮೂರನೇ ದಿನವೂ ಎಲ್ಲರ ಆಕರ್ಷಣೆಯ ಬಿಂದುವಾಗಿದ್ದರು. ಅವರಿಬ್ಬರು ಮೊದಲ ವಿಕೆಟಿಗೆ 336 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಬೇರ್ಪಟ್ಟರು. 1990ರಲ್ಲಿ ಸೇಂಟ್ ಜಾನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇಯ್ನ ಅವರು ಮೊದಲ ವಿಕೆಟಿಗೆ 298 ರನ್ ಪೇರಿಸಿರುವುದು ವೆಸ್ಟ್‌ಇಂಡೀಸ್ ಪರ ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು,
ಟೆಸ್ಟ್ ಇತಿಹಾಸದಲ್ಲಿ ಇದು ಸಮಗ್ರವಾಗಿ ಮೊದಲ ವಿಕೆಟಿಗೆ ಪàರಿಸಿದ 9ನೇ ಗರಿಷ್ಠ ಮೊತ್ತವಾಗಿದೆ. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ನೀಲ್ ಮೆಕೆಂಝಿ ಅವರು 2008ರಲ್ಲಿ ಚಟ್ಟೊಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ವಿಕೆಟಿಗೆ 415 ರನ್ ಪೇರಿಸಿರುವುದು ಗರಿಷ್ಠ ಮೊತ್ತವಾಗಿದೆ.
ಟೆಸ್ಟ್‌ನಲ್ಲಿ 12ನೇ ಶತಕ ದಾಖಲಿಸಿರುವ ಬ್ರಾತ್‌ವೇಟ್ ವೈಯಕ್ತಿಕವಾಗಿ 182 ರನ್ ಗಳಿಸಿ ಮೊದಲಿಗರಾಗಿ ಔಟಾದರು. ಬ್ರಾತ್‌ವೇಟ್ ಈ ಹಿಂದಿನ ಟೆಸ್ಟ್‌ನಲ್ಲಿ ಕೇವಲ 19 ಮತ್ತು 3 ರನ್ ಗಳಿಸಿದ್ದರು. ಇಲ್ಲಿ ಭರ್ಜರಿ ಆಟವಾಡುವ ಮೂಲಕ ಅವರು ಗಮನ ಸೆಳೆದರು. ಭಾರೀ ಮಳೆಯಿಂದಾಗಿ ಮೊದಲ ಎರಡು ದಿನಗಳಲ್ಲಿ ಕೇವಲ 89 ಓವರ್‌ಗಳ ಆಟ ಸಾಗಿತ್ತು. ಆದರೆ ಮೂರನೇ ದಿನ ಪ್ರವಾಸಿ ತಂಡದ ಆರಂಭಿಕರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಸಂಭ್ರಮಿಸಿದರು.
101 ರನ್ನಿನಿಂದ ಮೂರನೇ ದಿನದಾಟ ಆರಂಭಿಸಿದ ಚಂದರ್‌ಪಾಲ್ ದಾಖಲೆಯ ಜತೆಯಾಟ ದಾಖಲಿಸಿದಲ್ಲದೇ ವೈಯಕ್ತಿಕವಾಗಿ ದ್ವಿಶತಕ ಬಾರಿಸಿ ಮಿಂಚಿದರು. ತನ್ನ ಮೂರನೇ ಟೆಸ್ಟ್‌ನಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿದ ಅವರು 16 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 207 ರನ್ ಗಳಿಸಿ ಅಜೇಯರಾಗಿ ಉಳಿದರು. 26ರ ಹರೆಯದ ಅವರು ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಶಿವನಾರಾಯಣ್ ಚಂದರ್‌ಪಾಲ್ ಅವರ ಪುತ್ರರಾಗಿದ್ದಾರೆ.
ಸಂಕ್ಷಿಪ್ತ ಸ್ಕೋರು: ವೆಸ್ಟ್‌ಂಡೀಸ್ ಮೊದಲ ಇನ್ನಿಂಗ್ಸ್ 6 ವಿಕೆಟಿಗೆ 447 ಡಿಕ್ಲೇರ್x (ಬ್ರಾತ್‌ವೇಟ್ 182, ಟಿ.ಚಂದರ್‌ಪಾಲ್ 207, ಬ್ರ್ಯಾಂಡನ್ ಮಾವುತ 140ಕ್ಕೆ 5); ಜಿಂಬಾಬ್ವೆ ಒಂದು ವಿಕೆಟಿಗೆ 76.