Advertisement
ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದ ಕಲಾಸಂಗಮ ಕಲಾವಿದರ ಅಭಿನಯದ “ಶಿವದೂತೆ ಗುಳಿಗೆ’ ನಾಟಕದ 555ನೇ ಪ್ರದರ್ಶನದ ಸಂಗಮ ಕಾರ್ಯಕ್ರಮವನ್ನು ಅಡ್ಯಾರ್ ಗಾರ್ಡನ್‌ನಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, “ಶಿವದೂತೆ ಗುಳಿಗೆ’ ನಾಟಕವಾಗಿ ಮಾತ್ರ ಇರಬಾರದು. ಚಲನಚಿತ್ರವಾಗಿ ದೇಶದ ಜನರು ನೋಡಬೇಕು ಎಂದು ತೀರ್ಮಾನಿಸಲಾಗಿದೆ. ಅದಕ್ಕಾಗಿ ತುಳು, ಕನ್ನಡ, ಮಲಯಾಳ, ತಮಿಳು, ಹಿಂದಿ ಭಾಷೆಗಳಲ್ಲಿ ಹೊರತರಲಾಗುವುದು ಎಂದರು. ಸಮ್ಮಾನ- ಗೌರವಾರ್ಪಣೆ
ಪತ್ರಕರ್ತ, ರಂಗಕರ್ಮಿ ಪರಮಾನಂದ ವಿ. ಸಾಲಿಯಾನ್ ಅವರಿಗೆ 2024ನೇ ವರ್ಷದ ದಿ| ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ನಿ ಲೋಲಾಕ್ಷಿ ಜತೆಗಿದ್ದರು. ಶಿವದೂತೆ ಗುಳಿಗೆ ನಾಟಕದ ಕಲಾವಿದರು, ತಂತ್ರಜ್ಞರನ್ನು, ಸಹಕಾರ ನೀಡಿದವರನ್ನು, ಪ್ರಾಯೋಜಕರನ್ನು ಗೌರವಿಸಲಾಯಿತು.
Related Articles
Advertisement
ಚಿತ್ರರಂಗದ ಪ್ರಮುಖರಾದ ಹಿರಿಯ ಚಲನಚಿತ್ರ ನಿರ್ದೇಶಕ ನಿರ್ಮಾಪಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ನಿರೂಪಕಿ ಅನುಶ್ರೀ ಭಾಗವಹಿಸಿದ್ದರು. ರೂಪಾ ಕೊಡಿಯಾಲಬೈಲ್ ಉಪಸ್ಥಿತರಿದ್ದರು.
ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲ್ ಪ್ರಸ್ತಾವನೆಗೈದು, ಮೊದಲ ಪ್ರದರ್ಶನದಿಂದಲೇ “ಶಿವದೂತೆ ಗುಳಿಗೆ’ ನಾಟಕ ಚಾರಿತ್ರಿಕ ದಾಖಲೆಗೆ ನಾಟಕ ಮುನ್ನುಡಿ ಬರೆಯಿತು. ದೇಶ, ವಿದೇಶದಲ್ಲಿ ಯಶಸ್ವಿ ಪ್ರದರ್ಶನ ನಡೆಯುತ್ತಿದೆ. ಸದ್ಯ ತುಳು ಹಾಗೂ ಕನ್ನಡ ಪ್ರದರ್ಶನ ನಡೆಯುತ್ತಿದ್ದು, ಸದ್ಯದಲ್ಲಿ ಮಲಯಾಳ ಹಾಗೂ ಇತರ ಭಾಷೆಗಳಲ್ಲಿಯೂ ನಾಟಕ ಪ್ರದರ್ಶನವಾಗಲಿದೆ ಎಂದರು.
ಡಾ| ಪ್ರಿಯಾ ಹರೀಶ್, ಸಾಹಿಲ್ ರೈ ನಿರೂಪಿಸಿದರು. ರಮೇಶ್ ಕಲ್ಲಡ್ಕ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಶಿವದೂತೆ ಗುಳಿಗೆ 555ನೇ ಪ್ರದರ್ಶನ ನಡೆಯಿತು. ಚಲನಚಿತ್ರವಾಗಲಿದೆ “ಶಿವದೂತೆ ಗುಳಿಗೆ’
ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ ಎಂಎನ್‌ಆರ್ ಪ್ರೊಡಕ್ಷನ್ ನಡಿ “ಶಿವದೂತೆ ಗುಳಿಗೆ’ ಚಲನಚಿತ್ರವಾಗಿ ಶೀಘ್ರದಲ್ಲೇ ತೆರೆಯ ಮೇಲೆ ಮೂಡಿ ಬರಲಿದೆ. ಎಂಎನ್‌ಆರ್ ಪ್ರೊಡಕ್ಷನ್‌ನಡಿ ನಿರ್ಮಾಣವಾಗಲಿರುವ “ಡಾಕ್ಟ್ರಾ ಭಟ್ರಾ? ಮತ್ತು “ಶಿವದೂತೆ ಗುಳಿಗೆ’ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಇದೇ ವೇಳೆ “ಗಬ್ಬರ್‌ಸಿಂಗ್’ ಚಲನಚಿತ್ರದ ಪೋಸ್ಟರನ್ನು ಕೂಡ ಬಿಡುಗಡೆಗೊಳಿಸಲಾಯಿತು.