Advertisement

ಶಿವದಾಸಿಮಯ್ಯ ಜಯಂತಿ

01:00 PM Jan 25, 2020 | Suhan S |

ಹಿರೇಕೆರೂರ: ಸಣ್ಣ ಕಾಯಕದ ಮೂಲಕ ದೊಡ್ಡ ಆದರ್ಶ ತೋರಿಸಿದ್ದು ಶಿವಸಿಂಪಿ ಸಮಾಜವಾಗಿದೆ. ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಕಾಯಕ ಧರ್ಮ ತೋರಿಸಿಕೊಟ್ಟವರೇ ಬಸವಾದಿ ಶರಣರು. ಅವರಲ್ಲಿ ಒಬ್ಬರಾದ ಶಿವದಾಸಿಮಯ್ಯನವರ ತತ್ವಾದರ್ಶ ಎಲ್ಲರಿಗೂ ಮಾದರಿ ಎಂದು ಶಿವಶಿಂಪಿ ಸಮಾಜದ ಅಧ್ಯಕ್ಷ ಈರಣ್ಣ ಬುಕ್ಕಂಬುದಿ ಹೇಳಿದರು.

Advertisement

ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶಿವಸಿಂಪಿ ಸಮಾಜದಿಂದ ಹಮ್ಮಿಕೊಂಡಿದ್ದ ಶಿವದಾಸಿಮಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು. ಶಿವಸಿಂಪಿ ಸಮಾಜದ ಉಪಾಧ್ಯಕ್ಷ ಬಸವರಾಜಪ್ಪ ಯತ್ನಳ್ಳಿ, ಚಂದ್ರಪ್ಪ ಮಳವಳವಳ್ಳಿ, ಎಸ್‌.ಎಂ. ನ್ಯಾಮತಿ, ಪ್ರಭು ನ್ಯಾಮತಿ, ವೀರಣ್ಣ ಚಿಟ್ಟೂರ್‌, ಈಶಣ್ಣ ಕುಬಸದ, ರಾಜಣ್ಣ ಕುಬಸದ, ಸಿದ್ದಲಿಂಗೇಶ ಕುಬಸದ, ಎಚ್‌.ಪ್ರಕಾಶ, ಗಿರೀಶ ಕುಬಸದ, ಮಂಜು ಮಳವಳ್ಳಿ, ದರ್ಶನ ನ್ಯಾಮತಿ ಮಲ್ಲಿಕಾರ್ಜುನ ಕುಬಸದ, ರೂಪಾ ಕುಬಸದ ಸೇರಿದಂತೆ ಶಿವಸಿಂಪಿ ಸಮಾಜದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next