ನವಿಮುಂಬಯಿ, ಅ. 5: ಮುಂಬಯಿ ಮಹಾನಗರದಲ್ಲಿ ಭಿನ್ನ-ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಅಶಕ್ತರ ಪಾಲಿನ ಭರವಸೆಯಾಗಿರುವ ಶಿವಾಯ ಫೌಂಡೇಶನ್ ಮುಂಬಯಿ ಇದರ ವತಿಯಿಂದ ಅಶಕ್ತ ಮತ್ತು ಬಡ ಕುಟುಂಬಗಳ ಆರ್ಥಿಕ ಸಹಾಯಾರ್ಥವಾಗಿ ಸಾಂಸ್ಕೃತಿಕ ಕಾರ್ಯಕ್ರಮವು ಅ. 2ರಂದು ಜೂಹಿ ನಗರದ ಬಂಟ್ಸ್ ಸೆಂಟರ್‌ನಲ್ಲಿ ಅದ್ದೂರಿಯಾಗಿ ನಡೆಯಿತು.
ಥಾಣೆ ವಿಶ್ವ ಹಿಂದು ಪರಿಷತ್‌ನ ಅಧ್ಯಕ್ಷ, ಯಕ್ಷಗಾನ ಕಲಾ ಪೋಷಕ ಪೊಲ್ಯ ಉಮೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನಾ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಎನ್. ಟಿ. ಪೂಜಾರಿ, ಸಮಾಜ ಸೇವಕ ಹರೀಶ್ ಪೂಜಾರಿ ಮತ್ತು ಕಲಾವಿದ ಬಾಲಕೃಷ್ಣ ಮಾಸ್ಟರ್ ಇವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.
ಕಲಾಜಗತ್ತು ಸಂಸ್ಥೆಯ ರೂವಾರಿ ತೋನ್ಸೆ ವಿಜಯಕುಮಾರ್ ಶೆಟ್ಟಿ, ಶ್ರೀಕೃಷ್ಣ ವಿಟಲ ಪ್ರತಿಷ್ಠಾನದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ವಸಂತ ಶೆಟ್ಟಿ ಪಲಿಮಾರು, ಕನ್ನಡ ಸಂಘ ವಿಕ್ರೋಲಿ ಇದರ ಅಧ್ಯಕ್ಷ ಶ್ಯಾಮ್ ಸುಂದರ್ ಶೆಟ್ಟಿ, ಕನ್ನಡ ವೆಲ್ಪೇರ್ ಸೊಸೈಟಿ ಘಾಟ್ ಕೋಪರ್ ಇದರ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾ ಬಾಳಿಕೆ, ನೆರುಲ್ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಬಂಟರ ಸಂಘ ಕುರ್ಲಾ-ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಮ್ಯಾ ಉದಯ ಶೆಟ್ಟಿ, ಪನ್ವೆಲ್ ಕನ್ನಡ ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಕಲಾ ಪೋಷಕ ಮೋಹನ್ ಶೆಟ್ಟಿ, ಮಜ್ಜಾರ್, ಯುವ ಉದ್ಯಮಿ ಕೆರಮ ಕಲಾಯಿಗುತ್ತು ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಶಿವಾಯ ಫೌಂಡೇಶನ್ ಇದರ ಅಧ್ಯಕ್ಷ ತಾರಾನಾಥ ರೈ ಪುತ್ತೂರು, ಗೌರವ ಸಲಹೆಗಾರರಾದ ಮಧುಸೂದನ್ ಶೆಟ್ಟಿ ಬೈಕಲಾ ಮತ್ತು ಹರೀಶ್ ಕೋಟ್ಯಾನ್ ಇನ್ನಾ ಇವರ ಗೌರವ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಶಿವಾಯ ಫೌಂಡೇಶನಿನ ಪ್ರಶಾಂತ್ ಶೆಟ್ಟಿ ಪಲಿಮಾರು, ಪ್ರಶಾಂತ್ ಶೆಟ್ಟಿ ಪಂಜ, ಪ್ರಭಾಕರ್ ಶೆಟ್ಟಿ ಆರೂರು, ಶ್ವೇತಾ ಶೆಟ್ಟಿ ಅವರಲ್ ಕಂಕಣಗುತ್ತು, ವರ್ಣಿತ್ ಶೆಟ್ಟಿ ಪಲಿಮಾರ್, ಅಶೋಕ್ ಶೆಟ್ಟಿ ಮುಟ್ಲುಪಾಡಿ, ರಾಜೇಶ್ ಶೆಟ್ಟಿ ಕಟಪಾಡಿ, ವಿನೋದ್ ದೇವಾಡಿಗ, ಸುನಿಲ್ ಮೂಲ್ಯ, ದಿವಾಕರ್ ಶೆಟ್ಟಿ, ಕಿರಣ್ ಜೈನ್, ಅವಿನಾಶ್ ನಾಯ್ಕ…, ಸಚಿನ್ ಶೆಟ್ಟಿ,
ದೀಪಾ ಪೂಜಾರಿ, ಸುಷ್ಮಾ ಪೂಜಾರಿ, ಶಿಲ್ಪಾ ಗೌಡ ಮಾಂಡವಾಂಕರ್. ಗಣೇಶ್ ಸಾಫಲ್ಯ, ಚಂದ್ರ ಶೇರಿಗಾರ್, ನಾಗೇಶ್ ಭೋವಿ, ಪ್ರಶಾಂತ್ ಪೂಜಾರಿ, ಸರಿತಾ ಪೂಜಾರಿ, ಮಲ್ಲಿಕಾ ಶೆಟ್ಟಿ, ಆಶಾ ಶೆಟ್ಟಿ, ಪ್ರಭಾವತಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅಜಯ್ ಪ್ಯಾಲೇಸ್ ಅವರು ಸಹಕರಿಸಿದರು.