Advertisement

ಶಿವಾಯ ಫೌಂಡೇಶನ್‌: ಬುದ್ಧಿಮಾಂದ್ಯರ ಶಿಕ್ಷಣ ಸಂಸ್ಥೆಗೆ ಆರ್ಥಿಕ ನೆರವು

04:36 PM Jul 25, 2018 | |

ಮುಂಬಯಿ: ಪ್ರಗತಿ ವಿದ್ಯಾಲಯ ಮುಂಬಯಿ ಮಹಾನಗರದ ವಿಕ್ರೋಲಿಯಲ್ಲಿ ಬುದ್ಧಿ ಮಾಂದ್ಯ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತಿರುವ ಸಂಸ್ಥೆಯಾಗಿದ್ದು,  ಆದರೆ ಸಂಸ್ಥೆಯ ಕಟ್ಟಡ  ತುಂಬ ಹಳೆಯದಾಗಿದ್ದು ಯಾವ ರೀತಿಯಲ್ಲೂ ಪ್ರಗತಿ ಹೊಂದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡ ತುಳು-ಕನ್ನಡಿಗರ ಶಿವಾಯ ಫೌಂಡೇಶನ್‌ನ  ಉತ್ಸಾಹಿ ಯುವಕ-ಯುವತಿಯರ ತಂಡವು ಪ್ರಗತಿ ವಿದ್ಯಾಲಯದ ಅಭಿವೃದ್ಧಿಗೆ  ಪಣತೊಟ್ಟಿದೆ.

Advertisement

ಈ ನಿಟ್ಟಿನಲ್ಲಿ ಜು. 16ರಂದು ಶಾಲೆಗೆ ಭೇಟಿ ನೀಡಿ ಸಮಸ್ಯೆ ಮತ್ತು ಪ್ರಸ್ತುತ  ಪರಿಸ್ಥಿತಿಗಳ ಸಂಪೂರ್ಣ ವಿವರ ಪಡೆದ ಶಿವಾಯ ಫೌಂಡೇಶನ್‌ಸದಸ್ಯರು ವಿದ್ಯಾಲಯದ ಮಕ್ಕಳಿಗೆ ವ್ಯವಸ್ಥಿತ ಕೊಠಡಿ ನಿರ್ಮಿಸುವ ಸಲುವಾಗಿ ಮೊದಲ ಕಂತಿನ ಚೆಕ್ಕನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ. ಹಂತ ಹಂತವಾಗಿ ಚೆಕ್‌ ವಿತರಿಸಿ ವಿದ್ಯಾಲಯದ ಪುನ:ಶ್ಚೇತನದ ಯೋಜನೆಯನ್ನು ಪೂರ್ಣಗೊಳಿಸುವತ್ತ ಫೌಂಡೇಶನ್‌ ಮುಂದಾಗಿದೆ.

ಇಲ್ಲಿ ಶಿಕ್ಷಣಕ್ಕಾಗಿ  ಕಿವುಡ, ಮೂಗ ಮತ್ತು ಅಂಗ ವೈಕಲ್ಯವನ್ನು ಹೊಂದಿದಂತಹ ಮಕ್ಕಳು ಬರುತ್ತಿದ್ದು, ಸರಕಾರದಿಂದ ಸಂಪೂರ್ಣ ರೀತಿ ಯಲ್ಲಿ ನಿರ್ಲಕ್ಷÂಕ್ಕೊಳಗಾದ ಈ ವಿದ್ಯಾಲಯಕ್ಕೆ ಸರಕಾರದ ಗ್ರಾÂಂಟ್‌ ಇದು ವರೆಗೆ ದೊರಕಿಲ್ಲ. ವ್ಯವಸ್ಥಿತ ವಾಗಿದ್ದರೆ ಈ ಶಾಲೆ ಇವತ್ತು ಸುಮಾರು ಇನ್ನೂರು ಮುನ್ನೂರು ಬುದ್ಧಿಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿತ್ತು. ಪ್ರಸ್ತುತ ಈ ವಿದ್ಯಾಲಯವು ಸರಕಾರದ ನಿರ್ಲಕ್ಷÂಕ್ಕೆ ಹಾಗೂ  ಸಮಾಜದ ಅವಗಣನೆಗೆ ಗುರಿಯಾಗಿದೆ ಎಂದರೆ ತಪ್ಪಾಗಲಾರದು.

ಈ  ಕಟ್ಟಡವು ಸುಮಾರು 40 ವರ್ಷ ಹಳೆಯದಾಗಿದ್ದು, ಹಲವಾರು ಕಡೆ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಸರಿಯಾದ ಸೂರಿಲ್ಲದೆ ನೆನೆಯುವ ಸ್ಥಿತಿ, ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಕುಳಿತುಕೊಳ್ಳಲು ಬೆಂಚಿನ ಸಮಸ್ಯೆ, ಫ್ಯಾನ್‌ನ ಕೊರತೆ ಮತ್ತು ಶಿಕ್ಷಕರಿಗೆ ವೇತನವಿಲ್ಲದೆ ಕೊರಗುವ ಪರಿಸ್ಥಿತಿ ಹೀಗೆ ಹತ್ತಾರು ಸಮಸ್ಯೆಗಳಿಂದ ಈ ಪ್ರಗತಿ ವಿದ್ಯಾಲಯ ತೊಳಲಾಡುತ್ತಿದೆ.

ಜನ ಸಾಮಾನ್ಯರು ಬಯಸಿದರೆ ಅಸಾಧ್ಯವಾದುದನ್ನು  ಸಾಧಿಸ ಬಹುದು ಎಂಬುವುದನ್ನು ಶಿವಾಯ ಫೌಂಡೇಶನ್‌ ಕಾರ್ಯ ರೂಪದಲ್ಲಿ ನಿರೂಪಿಸುವ ಸಲುವಾಗಿ ಈಗಾಗಲೇ ಮುಂಬಯಿ, ಕರ್ಜತ್‌, ಪುಣೆಯ ಹಲವು ವ್ಯಾಪಾರ ಸ್ಥಳಗಳಲ್ಲಿ ತನ್ನ ದಾನ ಪೆಟ್ಟಿಗೆಗಳನ್ನು ಅಳವಡಿಸಿಕೊಂಡಿದೆ. ಅದರಿಂದ ಬಂದ ಹಣ ಹಾಗೂ ಈ ಸಂಸ್ಥೆಯ ಸದಸ್ಯರು ನಾವು ದುಡಿದ ಒಂದಾಂಶ ಸಮಾಜಕ್ಕೆ ಎಂಬ ಧ್ಯೇಯದೊಂದಿಗೆ  ತಮ್ಮ ತಿಂಗಳ ವೇತನದÇÉೊಂದು ಪಾಲು ನೀಡಿ  ಸೇವಾ ಚಟುವಟಿಕೆಗಳಿಗೆ ಪ್ರೇರಣೆ ನೀಡುತ್ತಿ¨ªಾರೆ.

Advertisement

ಶಿವಾಯ ಫೌಂಡೇಶನ್‌ನ ಜೊತೆ ನಿಂತು, ತಂಡದ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಮತ್ತು ತಮ್ಮ ವ್ಯಾಪಾರ ಸ್ಥಳಗಲ್ಲಿ ದಾನ ಪೆಟ್ಟಿಗೆಗಳನ್ನು ಇಟ್ಟು ತಂಡದ ಮಾನವೀಯ ಕೆಲಸ  ಕಾರ್ಯಗಳಿಗೆ  ತಮ್ಮ ಸಹಕಾರ ನೀಡ ಬಯಸುವವರು ಹೆಚ್ಚಿನ ಮಾಹಿತಿಗಾಗಿ ಈ ನಂಬರನ್ನು ಸಂಪರ್ಕಿಸುವಂತೆ 9152775530 ಶಿವಾಯ ಫೌಂಡೇಶನ್‌ನ ಪದಾ ಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next