Advertisement

ಶಿವಾಯ ಫೌಂಡೇಷನ್‌ ವತಿಯಿಂದ ನಾಟಕ ಪ್ರದರ್ಶನ, ಸಾಧಕರಿಗೆ ಸಮ್ಮಾನ

03:56 PM Oct 04, 2018 | Team Udayavani |

ನವಿಮುಂಬಯಿ: ತಾವು ಸಂಪಾದಿಸಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜ ಸೇವೆಗೆ ಅರ್ಪಿಸಿದಾಗ ದೇವರ ಅನುಗ್ರಹ ಲಭಿಸುತ್ತದೆ. ನಮ್ಮಲ್ಲಿ ಮಾನವೀಯತೆಗೆ ಮಿಡಿಯುವ ಮನಸ್ಸಿದ್ದಾಗ ಮಾತ್ರ ನಾವು ಮನುಷ್ಯರಾಗಿರುತ್ತೇವೆ. ಅಂತಹ ಮಾನವೀಯತೆಯ ಕಾರ್ಯವನ್ನು ಶಿವಾಯ ಫೌಂಡೇಶನ್‌ ಮಾಡುತ್ತಿರುವುದು ಅಭಿನಂದನೀಯ. ಇಲ್ಲಿ ಸ್ವಾರ್ಥವನ್ನು ಮರೆತು ನಾವು ಕಾರ್ಯಪ್ರವೃತ್ತರಾದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಶಿವ ಎಂದರೆ ಸುಖ, ಸಂತೋಷ ಎಂದರ್ಥ. ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಪ್ರಾರಂಭಗೊಂಡ ಈ ಸಂಸ್ಥೆ ಯುವಪಡೆಯನ್ನು ಹೊಂದಿದ್ದು, ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ನಗರದಲ್ಲಿ ಎಲ್ಲರ ಗಮನ ಸೆಳೆದಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಸಂಸ್ಥೆಯು ಅಶಕ್ತರ ಆಶಾಕಿರಣವಾಗಿ ಬೆಳೆಯಲಿ ಎಂದು ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ ಹರಿಕಥಾ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು ಅಭಿಪ್ರಾಯಿಸಿದರು.

Advertisement

ಅ.2 ರಂದು ಜೂಯಿ ನಗರದ ಬಂಟ್ಸ್‌ ಸೆಂಟರ್‌ ನಲ್ಲಿ ಶಿವಾಯ ಫೌಂಡೇಷನ್‌ ಮುಂಬಯಿ ಅಶಕ್ತರ ಸಹಾಯಾರ್ಥವಾಗಿ ಹಮ್ಮಿಕೊಂಡ ನಿಧಿ ಸಂಗ್ರಹ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಇಂದಿನ ಕಾರ್ಯಕ್ರಮವನ್ನು ಕಂಡಾಗ ಸಂತೋಷ ವಾಗುತ್ತಿದೆ. ಒಂದೆ ಕಡೆ ಕಲೆಯ ಆರಾಧನೆಯಾದರೆ, ಇನ್ನೊಂದೆಡೆ ಸಾಧಕರನ್ನು ಗುರುತಿಸಿ ಸಮ್ಮಾನಿಸಿರುವುದು ಅಭಿನಂದನೀಯ. ನಿಮ್ಮ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಸಹೃದಯರ, ದಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು.

ಶಿವಾಯ ಫೌಂಡೇಶನ್‌ ವತಿಯಿಂದ ಮುಲುಂಡ್‌ ಬಂಟ್ಸ್‌ನ ಉಪಾಧ್ಯಕ್ಷ ಪಲಿಮಾರು ವಸಂತ್‌ ಎನ್‌. ಶೆಟ್ಟಿ ಮತ್ತು ನೋರ್ಡಿಕ್‌ ಲಾಜಿಸ್ಟಿಕ್ಸ್‌ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಮೋದ್‌ ಕರ್ಕೇರ ಅಡ್ವೆ ಹಾಗೂ ನಮ್ಮ ಬೆದ್ರ ತಂಡದ ಬಲೆ ತೆಲಿಪಾಲೆ ಗಾಳಿಪಟ ಖ್ಯಾತಿಯ ಹರೀಶ್‌ ಕದಂಡಲೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.

ಅತಿಥಿಯಾಗಿ ಪಾಲ್ಗೊಂಡ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಶಿವಾಯ ಫೌಂಡೇಷನ್‌ ಸ್ಥಾಪನೆಯಾದ ಕೇವಲ ಎಂಟು ತಿಂಗಳಲ್ಲಿ ಮಾಡಿದ ಸೇವೆ ಅನುಕರಣೀಯ. ಇಲ್ಲಿನ ಸದಸ್ಯರಲ್ಲಿ ನಾಯಕತ್ವ ಮತ್ತು ಮಾನವೀಯತೆಯ ಗುಣ ಎದ್ದು ಕಾಣುತ್ತದೆ. ನಿಮ್ಮ ಸೇವೆ ಇದೇ ಮಾದರಿಯಲ್ಲಿ ಮುಂದುವರಿಯುತ್ತಿರಲಿ ಎಂದು ನುಡಿದರು.

ಕಲಾಜಗತ್ತು ಡಾ| ವಿಜಯ ಕುಮಾರ್‌ ಶೆಟ್ಟಿ ಅವರು ಪಾಲ್ಗೊಂಡು ಮಾತನಾಡಿ, ಶಿವಾಯ ಫೌಂಡೇಷನ್‌ನ ಸಮಾಜ ಸೇವೆಗೆ ಎಲ್ಲರ ಪ್ರೋತ್ಸಾಹ, ಸಹಕಾರ ಅಗತ್ಯವಾಗಿದೆ. ಮರಾಠಿ ಮಣ್ಣಿನಲ್ಲಿ ಹೊಟ್ಟೆಪಾಡಿಗಾಗಿ ನೆಲೆಕಂಡ ನಾವು ಬದುಕುವುದರೊಂದಿಗೆ ಅಶಕ್ತರನ್ನು ಗುರುತಿಸಿ ಅವರ ಬದುಕು ಕಟ್ಟಲು ನೆರವಾಗಬೇಕು. ಈ ನಿಟ್ಟಿನಲ್ಲಿ ಶಿವಾಯ ಫೌಂಡೇಷನ್‌ನ ಕಾರ್ಯ ಅಭಿನಂದನೀಯವಾಗಿದೆ ಎಂದರು.

Advertisement

ಸಮಾಜ ಸೇವಕಿ ಲಕ್ಷ್ಮೀ ಕೋಟ್ಯಾನ್‌ ಅವರು ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಸಿಬಿಡಿ ನಿತ್ಯಾನಂದ ಸೇವಾ ಸಮಿತಿಯ ಅಧ್ಯಕ್ಷ ಸಿಬಿಡಿ ಭಾಸ್ಕರ್‌ ಶೆಟ್ಟಿ, ಮಿನಿಸ್ಟರಿ ಆಫ್ ಕೆಮಿಕಲ್‌ ಆ್ಯಂಡ್‌ ಫ‌ರ್ಟಿಲೈಸರ್ ಯೋಗೀಶ್‌ ಅಮೀನ್‌, ಯುವ ಉದ್ಯಮಿ ಕೆರಮ ಕಲಾಯಿಗುತ್ತು ಪ್ರಸಾದ್‌ ರೈ,  ಜಯ ಕರ್ನಾಟಕ ಬೆಂಗಳೂರು ನಗರದ ಯುವ ಘಟಕದ ಉಪಾಧ್ಯಕ್ಷ ದೋನಿಂಜೆ ಗುತ್ತು ಅಭಿಷೇಕ್‌ ರೈ, ಹೆಸರಾಂತ ಸಮಾಜ ಸೇವಕಿ ಲಕ್ಷ್ಮೀಕೋಟ್ಯಾನ್‌, ಕರ್ನಾಟಕ ಸಂಘ ಪನ್ವೇಲ್‌ ಇದರ ಯುವ ವಿಭಾಗದ ಅಧ್ಯಕ್ಷರಾದ ಗುರುಪ್ರಸಾದ್‌ ಶೆಟ್ಟಿ, ಕಲಾಪೋಷಕರು ಮತ್ತು ಉದ್ಯಮಿಗಳಾದ, ಮಧುಸೂದನ್‌ ಶೆಟ್ಟಿ ಅಜಯ್‌ ಪ್ಯಾಲೇಸ್‌ ಬೈಕಲಾ, ಗಣೇಶ ಅಭಿಮಾನಿ ಸಂಘದ ಸುರೇಶ್‌ ಭಟ್‌, ಕಮಲಾ ಕ್ಯಾಟರಿಂಗ್‌ ಮತ್ತು ಕಮಲಾ ಕಲಾವೇದಿಕೆಯ ರೋವಾರಿ ಹರೀಶ್‌ ಕೋಟ್ಯಾನ್‌ ಇನ್ನಾ, ಉದ್ಯಮಿ ಮತ್ತು  ಕಲಾಪೋಷಕರುಗಳಾದ ಚಂದ್ರಹಾಸ್‌ ಶೆಟ್ಟಿ ದೆಪ್ಪುಣಿಗುತ್ತು, ಮೋಹನ್‌ ಶೆಟ್ಟಿ ಮಜ್ಜಾರ್‌, ಸತೀಶ್‌ ಪೂಜಾರಿ ಕುತ್ಪಾಡಿ ಅವರು ಉಪಸ್ಥಿತರಿದ್ದರು.

ಶಿವಾಯ ಫೌಂಡೇಷನ್‌ನ ಪ್ರಶಾಂತ್‌ ಶೆಟ್ಟಿ ಪಲಿಮಾರು, ಪ್ರಶಾಂತ್‌ ಶೆಟ್ಟಿ ಪಂಜ, ವರ್ಣಿತ್‌ ಶೆಟ್ಟಿ, ನವೀನ್‌ ಪೂಜಾರಿ, ವಿನೋದ್‌ ದೇವಾಡಿಗ, ಸುಷ್ಮಾ ಪೂಜಾರಿ, ಸತೀಶ್‌ ರೈ, ಚಂದ್ರಹಾಸ ರೈ,  ಸುನೀಲ್‌ ಮೂಲ್ಯ, ಕಿರಣ್‌ ಜೈನ್‌, ದಿವಾಕರ ಶೆಟ್ಟಿ ಮುಲುಂಡ್‌, ಅವಿನಾಶ್‌ ನಾಯಕ್‌, ಸುಧಾಕರ ಪೂಜಾರಿ ನಲಸೋಪರ, ರಮೇಶ್‌ ಶ್ರೀಯಾನ್‌, ಶ್ವೇತಾ ಶೆಟ್ಟಿ ಮತ್ತು  ಶಿಲ್ಪಾ ಶೆಟ್ಟಿ ಅವರಾಲು ಕಂಕಣಗುತ್ತು, ಸುಷ್ಮಾ ಪೂಜಾರಿ, ದೀಪಾ ಪೂಜಾರಿ, ರಕ್ಷಾ ಶೆಟ್ಟಿ, ಶಿಲ್ಪಾ ಗೌಡ, ವೆಂಕಟೇಶ್‌ ಶೆಣೈ, ಅಶೋಕ್‌ ಶೆಟ್ಟಿ ಮುಟ್ಲುಪಾಡಿ, ಪ್ರಭಾಕರ ಶೆಟ್ಟಿ ಆರೂರು, ರಾಜೇಶ್‌ ಶೆಟ್ಟಿ ಕಟಾ³ಡಿ, ಡಾ| ಸ್ವರ್ಣಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.

ಪ್ರಶಾಂತ್‌ ಶೆಟ್ಟಿ ಪಲಿಮಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಶ್ರೀ ಕಾಳಿಕಾಂಬ ವಿಶ್ವಕರ್ಮ ಸೇವಾ ಸಂಘ ಪನ್ವೇಲ್‌ ಇದರ ಮಕ್ಕಳು ಪ್ರಾರ್ಥನೆಗೈದರು. ಸಂಘಟಕ ಸತೀಶ್‌ ಎರ್ಮಾಳ್‌ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ-ಗಣ್ಯರುಗಳನ್ನು ಸಂಸ್ಥೆಯ ಸದಸ್ಯರು ಗೌರವಿಸಿದರು, ನಮ್ಮ ಬೆದ್ರ ತಂಡದ ಕಲಾವಿದರಿಂದ, ನವೀನ್‌ ಪಡುಇನ್ನ ಅವರ ಸಂಚಾಲಕತ್ವದಲ್ಲಿ ಪಾಂಡುನ ಅಲಕ್ಕ ಪೋಂಡು ನಾಟಕ ಪ್ರದರ್ಶನಗೊಂಡಿತು.  

ಅಶಕ್ತರನ್ನು ಗುರುತಿಸಿ ಅವರಿಗೆ ಮಾನವೀಯತೆಯ ನೆಲೆಯಲ್ಲಿ ಸಹಕರಿಸುತ್ತಿರುವ ಶಿವಾಯ ಫೌಂಡೇಷನ್‌ನ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ. ನಿಮ್ಮ ಸಮಾಜ ಸೇವೆಗೆ ನನ್ನ ಸಹಕಾರ ಸದಾಯಿದೆ. ನನ್ನ ಸೇವೆಯನ್ನು ಗುರುತಿಸಿ ಸಮ್ಮಾನಿಸಿದ ನಿಮಗೆಲ್ಲರಿಗೂ ಕೃತಜ್ಞನಾಗಿದ್ದೇನೆ.
ವಸಂತ್‌ ಶೆಟ್ಟಿ  ಪಲಿಮಾರು, ಉಪಾಧ್ಯಕ್ಷರು : ಮುಲುಂಡ್‌ ಬಂಟ್ಸ್‌

ಅಶಕ್ತರ ಬಳಿ ತೆರಳುವವರು ಇಂದಿನ ದಿನಗಳಲ್ಲಿ ಬಹಳಷ್ಟು ಕಡಿಮೆಯಿದ್ದಾರೆ. ಆದರೆ ಶಿವಾಯ ಫೌಂಡೇಷನ್‌ ಮಾಡುತ್ತಿರುವ ಮಾನವೀತೆಯ ಸೇವೆಯನ್ನು ಕಂಡಾಗ ಕಣ್ತುಂಬಿ ಬರುತ್ತದೆ. ಸಂಸ್ಥೆಯಿಂದ ಇನ್ನಷ್ಟು ಅಶಕ್ತರ ಬಾಳಿಗೆ ಆಶಾಕಿರಣ ಬೀರುವಂತಾಗಲಿ. ನನ್ನನ್ನು ಸಮ್ಮಾನಿಸಿದ ಸಂಸ್ಥೆಗೆ ಋಣಿಯಾಗಿದ್ದೇನೆ.
-ಪ್ರಮೋದ್‌ ಕರ್ಕೇರ , ಆಡಳಿತ ನಿರ್ದೇಶಕರು : ನೋರ್ಡಿಕ್‌ ಲಾಜಿಸ್ಟಿಕ್ಸ್‌ ಸಂಸ್ಥೆ

ಸಾಮಾಜಿಕ ಕಳಕಳಿಯೊಂದಿಗೆ ಸ್ಥಾಪನೆಗೊಂಡ ಶಿವಾಯ ಫೌಂಡೇಷನ್‌ ಕಳೆದ ಎಂಟು ತಿಂಗಳಿನಲ್ಲಿ ಅಶಕ್ತರಿಗೆ, ನಿರ್ಗತಿಕರಿಗೆ ಸಹಕರಿಸುವುದರೊಂದಿಗೆ ಅವರ  ಬದುಕಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ನಿರಂತರವಾಗಿ ಮಾಡಿದ ಸಾಧನೆ ಅಪಾರ. ಯುವಕ-ಯುವತಿಯರನ್ನೇ ಹೊಂದಿರುವ ಈ ಸಂಸ್ಥೆಯಿಂದ ಮಾನವೀಯತೆಯ ನೆಲೆಯಲ್ಲಿ ಅರ್ಥಪೂರ್ಣ ಸೇವೆಗಳು ನಡೆಯುತ್ತಿದೆ. ನಮ್ಮ ಈ ಸೇವೆಗೆ ದಾನಿಗಳ ಪ್ರೋತ್ಸಾಹ, ಸಹಕಾರ ಅಗತ್ಯವಿದೆ. ಪಾರದರ್ಶಕತೆಯಿಂದ ಸಂಸ್ಥೆಯು ಸೇವಾಪ್ರವೃತ್ತಗೊಂಡಿದ್ದು, ಸದಸ್ಯರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಸಮಾನ ಮನಸ್ಕರು ಸ್ಥಾಪಿಸಿದ ಈ ಸಂಸ್ಥೆಯಿಂದ ಇನ್ನಷ್ಟು ಸೇವೆ ನಡೆಯಬೇಕಿದೆ. ನಿರ್ಗತಿಕರಿಗೆ, ಕ್ಯಾನ್ಸರ್‌ಪೀಡಿತರಿಗೆ, ಅಸಹಾಯಕರಿಗೆ ಸಹಕರಿಸುವವರು ನಮ್ಮೊಂದಿಗೆ ಕೈಜೋಡಿಸಬಹುದು .
ತಾರಾನಾಥ ರೈ ಪುತ್ತೂರು, ಅಧ್ಯಕ್ಷರು : ಶಿವಾಯ ಫೌಂಡೇಷನ್‌

 ಚಿತ್ರ : ಜೇಕೆ ಮೀಡಿಯಾ

Advertisement

Udayavani is now on Telegram. Click here to join our channel and stay updated with the latest news.

Next