Advertisement

19 ರಂದು ಚಿಕೇನಕೊಪ್ಪ ಶರಣರ ಪುಣ್ಯಸ್ಮರಣೆ -ಜಾತ್ರೋತ್ಸವ

04:13 PM Feb 14, 2021 | Team Udayavani |

ಗದಗ: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಫೆ.19 ರಂದು ಮೌನಯೋಗಿ ಚಿಕೇನಕೊಪ್ಪದ ಚನ್ನವೀರ ಶರಣರ 26ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಬಳಗಾನೂರು ಶ್ರೀಮಠದ ಶಿವಶಾಂತವೀರ ಶರಣರು ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.18 ರಂದು ಬೆಳಗ್ಗೆ 8ಕ್ಕೆ ಕದಡಿ ನೀಲಮ್ಮನ ಮಠದ ಮಹದೇವ ಸ್ವಾಮಿಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರಲಿದೆ. ಹೂವಿನಹಡಗಲಿ ಗವಿಮಠದ ಡಾ|ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ 6 ಗಂಟೆಗೆ ಪ್ರವಚನ ಮಂಗಲೋತ್ಸವ ನಡೆಯಲಿದೆ ಎಂದರು.

ಫೆ.19 ರಂದು ಬೆಳಗ್ಗೆ 6ಕ್ಕೆ ಬಿಕನಳ್ಳಿ-ಮೈನಳ್ಳಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರಿಂದ ಲಿಂಗದಿಧೀಕ್ಷೆ, ಅಯ್ನಾಚಾರ ಜರುಗಲಿದೆ. ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಂದು ಸಂಜೆ 5 ಗಂಟೆಗೆ ಹರಗುರು ಚರಮೂರ್ತಿಗಳ ಹಾಗೂ ಗುರುಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ಜರುಗುವದು. ಸಂಜೆ 6 ಗಂಟೆಗೆ ಧಾರ್ಮಿಕ ಚಿಂತನಗೋಷ್ಠಿಯಲ್ಲಿ ಕೊಪ್ಪಳ ಗವಿ ಸಂಸ್ಥಾನಮಠದ ಜ|ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಇಬ್ರಾಹಿಂಪೂರ ಶಿವಾನಂದ ಮಠದ ದಯಾನಂದ ಶ್ರೀಗಳು, ಹೆಬ್ಟಾಳ ಬ್ರಹನ್ಮಠದ ನಾಗಭೂಷಣ ಶಿವಾಚಾರ್ಯರು, ಅಣದೂರ ಶಿವಯೋಗಿ ಶಿವಾಚಾರ್ಯರು, ಗುಡದೂರ ನೀಲಕಂಠ ತಾತನವರು, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತನವರು, ಖಜ್ಜಿಡೋಣಿ ಕೃಷ್ಣಾನಂದ ಶಾಸ್ತ್ರಿಗಳು ಉಪಸ್ಥಿತರಿರುವರು ಎಂದರು.

ಗಂಗಾವತಿ ಪ್ರಾಣೇಶ್‌ರಿಂದ ಹಾಸ್ಯ ಸಂಜೆ: ಜಾತ್ರಾ ಮಹೋತ್ಸವದ ಅಂಗವಾಗಿ ಫೆ.19 ರಂದು ಬೆಳಗ್ಗೆ 10.30ಕ್ಕೆ ಎಸ್‌.ಎಸ್‌.ಹಿರೇಮಠ ಹಾಗೂ ತಂಡದಿಂದ ಜಾಗೃತಿಗಾಗಿ ಜಾನಪದ ಕಾರ್ಯಕ್ರಮ ಆಯೋಜಿಸಿದೆ. ಸರಿಗಮಪ ಖ್ಯಾತಿಯ ಗಂಗಮ್ಮ, ಅಮರೇಶ ಜವಳಿ ಅವರಿಂದ ಜಾನಪದ ಗೀತೆ ನಡೆಯಲಿದೆ. ಫೆ.20 ರಂದು ಸಂಜೆ 6 ಗಂಟೆಗೆ “ಹಾಸ್ಯ ಸಂಜೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಸ್ಯ ಕಲಾವಿದರಾದ ಬಿ.ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಹಾಮನಿ ಭಾಗವಹಿಸುವರು. ರಾತ್ರಿ 10ಕ್ಕೆ ಹಿರೇಬಗನಾಳ ಗವಿಸಿದ್ಧೇಶ್ವರ ನಾಟ್ಯ ಸಂಘದಿಂದ ಗವಿಸಿದ್ಧೇಶ್ವರ ಮಹಾತ್ಮ ನಾಟಕ ಪ್ರದರ್ಶಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಸಿಕ್ಕೆದೇಸಾಯಿ, ಎಸ್‌.ಎಸ್‌.ಪಾಟೀಲ, ವಿ.ಬಿ.ಪೊಲೀಸ್‌ ಪಾಟೀಲ, ಮಹದೇವ ಗೌರಿಪೂರ, ವಿಶ್ವನಾಥ ಕಮ್ಮಾರ, ಬಿ.ವೈ.ಡೊಳ್ಳಿನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next