ನಾಂದೇಡ್: ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಒಟ್ಟಾಗಿದ್ದರೂ ಈ ಪಕ್ಷಗಳ ಮಧ್ಯೆ ಬಿರುಕು ಉಂಟಾಗಿದೆ ಎಂದು ಹೇಳಿಕೊಂಡ ಬಿಜೆಪಿಯು ಶಿವಸೇನೆಯ 12 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದೆ.
ಮಾಜಿ ಸಚಿವ ಬಿಜೆಪಿಯ ಬಬನ್‌ರಾವ್ ಲೋನಿಕರ್ ಅವರು ನಾಂದೇಡ್ ಜಿಲ್ಲೆಯಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿ, ಶಿವಸೇನೆಯ 12 ನಾಯಕರು ಸಂಪರ್ಕದಲ್ಲಿರುವುದಾಗಿ ಹೇಳಿಕೆ ನೀಡಿದ್ದಾರೆ.
ನಾಂದೇಡ್ ಜಿಲ್ಲೆಯಲ್ಲಿ ದೇಗ್ಲೂರು ಬಿಲೋಲಿ ವಿಧಾನಸಭಾ ಉಪಚುನಾವಣೆ ಶೀಘ್ರದÇÉೇ ನಡೆಯಲಿದೆ. ಈ ಚುನಾವಣೆಗೆ ಬಿಜೆಪಿಯ ಸುಭಾಷ್ ಸಬ್ನೆ ಅವರನ್ನು ಅಭ್ಯರ್ಥಿಯಾಗಿ ನೇಮಿಸಿದೆ. ಅವರ ಬೆಂಬಲವಾಗಿ ರ್ಯಾಲಿಯನ್ನು ಆಯೋಜಿಸಲಾಗಿತ್ತು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು ದೊಡ್ಡ ಸಾಧನೆ ಮಾಡಿದೆ. ದೇಗ್ಲೂರು ಬಿಲೋಲಿ ಕ್ಷೇತ್ರದ ಜನರು ಬಿಜೆಪಿಯನ್ನು ಬೆಂಬಲಿಸಿ ಸಬ್ನೆ ಅವರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಮನವಿ ಮಾಡಿದರು.
ಸಬ್ನೆ ಅವರು ಬಿಜೆಪಿ ಸೇರುವ ಮೊದಲೇ ದೇಗ್ಲೂರು ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಶಿವಸೇನೆಯ ಮಾಜಿ ಶಾಸಕ ಸುಭಾಷ್ ಸಬ್ನೆ ಅವರ ಹೆಸರನ್ನು ಘೋಷಿಸಲಾಯಿತು. ಬಳಿಕ ಸಬ್ನೆ ಅವರು ಹಲವಾರು ಕಾರ್ಯಕರ್ತರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ ಪಾಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ವೇಳೆ ಅವರು ಶಿವಸೇನೆಯಲ್ಲಿ ಇತ್ತೀಚಿನ ರಾಜಕೀಯ ವಾತಾವರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.