Advertisement
ಅಂದಹಾಗೆ, ಅದು “ಶಿವು-ಪಾರು’ ಚಿತ್ರದ ಮೊದಲ ಪತ್ರಿಕಾಗೋಷ್ಠಿ. ಅದರ ಹೈಲೈಟ್ ಅಮೆರಿಕ ಸುರೇಶ್. ಚಿತ್ರಕ್ಕೆ ಹಣ ಹಾಕಿದ್ದು, ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಗೀತ ನೀಡಿದ್ದಲ್ಲದೆ, ನಿರ್ದೇಶನವನ್ನೂ ಮಾಡುವ ಮೂಲಕ ಸಕಲಕಲಾವಲ್ಲಭ ಎನಿಸಿಕೊಂಡವರು. ಇದಷ್ಟೇ ಅಲ್ಲ, ತೆರೆಯ ಮೇಲೆ ಅವರೇ ಹೀರೋ. ಚಿತ್ರವನ್ನು ಪೂರ್ಣಗೊಳಿಸಿ, ಇದೀಗ ಪ್ರೇಕ್ಷಕರ ಮುಂದೆ ತರೋಕೆ ಅಣಿಯಾಗಿದ್ದಾರೆ ನಿರ್ದೇಶಕರು.
ನನ್ನ ಸಂಭಾವನೆಯೇ ಮೂರು ಕೋಟಿ ಅಂದುಕೊಳ್ಳಿ. ಇನ್ನು ಚಿತ್ರಕ್ಕೆಷ್ಟಾಗಿರಬಹುದು? ಇಲ್ಲಿ ಹೆಚ್ಚು ಖರ್ಚಾಗಿದ್ದು ಗ್ಲಿಸರಿನ್‌ಗೆ!
Related Articles
ನಾಯಕಿ ಸಿಕ್ಕಾಪಟ್ಟೆ ಅಳ್ತಾರೆ.ಅವರಷ್ಟೇ ಅಲ್ಲ, ಅವರೊಂದಿಗೆ ಸುಮಾರು 50 ಜನ ಜೂನಿಯರ್ ಕೂಡ ಅಳ್ತಾರೆ. ಅದಕ್ಕೆ ಅಷ್ಟೊಂದು ಗ್ಲಿಸರಿನ್ ತರಿಸಿಕೊಟ್ಟೆ.
Advertisement
– ಹಾಗಾದರೆ, ನೋಡೋರು ಅತ್ತು ಹೊರಬರ್ತಾರೆ ಅನ್ನಿ?ಅಳದೇ ಇದ್ದವರಿಗೆ ಬಹುಮಾನವಿದೆ. – ಮೊದಲರ್ಧದಲ್ಲಿ ಅಳ್ತಾರಾ, ದ್ವಿತಿಯಾರ್ಧದಲ್ಲಿ ಅಳ್ತಾರಾ, ಅಥವಾ ಸಿನ್ಮಾ ಮುಗಿದ್ಮೇಲೆ ಅಳ್ತಾರಾ?
ಇಡೀ ಸಿನ್ಮಾ ಅಳ್ತಾನೇ ಇರ್ತಾರೆ. – ಚಿತ್ರದ ಬಗ್ಗೆ ಇಷ್ಟೊಂದು ಕರಪತ್ರ ಕೊಟ್ಟಿದ್ದೀರಿ. ಯಾಕೆ?
ನಿಮ್ಮನೇಲಿರೋರಿಗೆ, ನಿಮ್ಮ ಕಚೇರಿಯಲ್ಲಿರೋರಿಗೆ ಅದನ್ನೆಲ್ಲಾ ಹಂಚಿಬಿಡಿ. – ಚಿತ್ರದಲ್ಲಿ ತುಂಬಾ ವಿಶೇಷ ಅನ್ನೋದೇನಿದೆ?
ಇಲ್ಲಿ 60 ದಿನ ಹನಿಮೂನ್ ಮಾಡೋದಿದೆ. ಅದಕ್ಕೆ ಸಿನ್ಮಾದಲ್ಲಿ ಉತ್ತರ ಸಿಗಲಿದೆ. – ಇದು ಯಾವ ಜಾನರ್‌ನ ಸಿನಿಮಾ?
ಜನ್ಮಜನ್ಮಾಂತರದ ಕಥೆಯದ್ದು – ಜನ್ಮಾಂತರದ ಕಥೆ ಹೊಸದೇನಲ್ವಲ್ಲಾ? ಯಾಕೆ ನೋಡ್ಬೇಕು?
ನೋಡ್ಲೆàಬೇಕು. ಸಾಯೋಕೆ ಮುಂಚೆ ಎಲ್ಲರೂ ಒಂದ್ಸಲ ನೋಡ್ಬೇಕು. ನೀವೂ ಕೂಡ…
ಹೀಗೆ ಇನ್ನೂ ಅನೇಕ ಪ್ರಶ್ನೆಗಳಿಗೆ ಒಂದಷ್ಟೂ ಬೇಸರಿಸಿಕೊಳ್ಳದೆ ನಗ್ತಾನೇ ಉತ್ತರಿಸುತ್ತ ಹೋದರು ಅಮೆರಿಕ ಸುರೇಶ್. ಹೊಸಕೋಟೆ ತಾಲೂಕಿನ ಹಳ್ಳಿಯೊಂದರ ಹೈದ ಕಳೆದ ಎರಡು ದಶಕಗಳ ಕಾಲ ಅಮೆರಿಕದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದವರು. ಸಿನ್ಮಾ ಸಂಬಂಧಿಸಿದಂತೆ ಹತ್ತು ವರ್ಷ ಕಾಲ ಅಲ್ಲೇ ಕುಳಿತು ಒಂದಷ್ಟು ಅವಲೋಕನ ಮಾಡಿ, ಅವರೊಂದು ಕಥೆ ಹೆಣೆದು, ಏನಾದರೊಂದು ಮಾಡಬೇಕು ಅಂತ ಇಲ್ಲಿಗೆ ಬಂದು “ಶಿವು-ಪಾರು’ ಸಿನಿಮಾ ಮಾಡಿದ್ದಾರೆ. ರೋಮಿಯೋ-ಜ್ಯೂಲಿಯಟ್, ಲೈಲಾ- ಮಜು°, “ಪಾರು-ದೇವದಾಸ್’ಗಿಂತ ಕಮ್ಮಿ ಇಲ್ಲದಂತಹ ರೊಮ್ಯಾಂಟಿಕ್ ಲವ್‌ಸ್ಟೋರಿ ಹೆಣೆದಿದ್ದಾರಂತೆ. ಇದು ಜನ್ಮಜನ್ಮಾಂತರದ ಕಥೆ. ಶಿವ ಪಾರ್ವತಿ ಮಾನವ ಜನ್ಮ ತಾಳಿ ಭೂಮಿಗಿಳಿದು ಏನೆಲ್ಲಾ ಮಾಡ್ತಾರೆ ಅನ್ನೋ ಕಥೆ ಮೇಲೆ ಚಿತ್ರ ಸಾಗಲಿದೆ. ಆರು ಹಾಡುಗಳಿವೆ. ಚಿತ್ರಕ್ಕೆ ದಿಶಾ ಪೂವಯ್ಯ ನಾಯಕಿ. ಅವರಿಲ್ಲಿ ಪಾರು ಪಾತ್ರ ಮಾಡಿದ್ದಾರೆ. ಎರಡು ಶೇಡ್ ಇರುವಂತಹ ಪಾತ್ರವಂತೆ. ಉಳಿದಂತೆ ಇಲ್ಲಿ ರಮೇಶ್‌ಭಟ್, ಹೊನ್ನವಳ್ಳಿ ಕೃಷ್ಣ, ಚಿತ್ರಾ ಶೆಣೈ, ಸುಂದರ್, ವಿಶ್ವ, ಕ್ರಿಷಿ ಇತರರು ನಟಿಸಿದ್ದಾರೆ. – ವಿಜಯ್ ಭರಮಸಾಗರ