Advertisement

ಶಿವಪ್ರಕಾಶ ಶ್ರೀಗಳ ತಲೆ ಕೆಟ್ಟಿದೆ: ಎಂ.ಬಿ.ಪಾಟೀಲ್‌

06:45 AM Dec 17, 2017 | Team Udayavani |

ವಿಜಯಪುರ: ಲಿಂಗಾಯತ ಧರ್ಮದ ಹೋರಾಟ ಯಶಸ್ಸಿನತ್ತ ಸಾಗಿದೆ. ಇದನ್ನು ಸಹಿಸದೆ ಬಸವನ ಬಾಗೇವಾಡಿಯ ಶಿವಪ್ರಕಾಶ ಶ್ರೀಗಳು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ತಲೆ ಕೆಟ್ಟಂತಿದೆ. ಅವರ ವರ್ತನೆ ಹೀಗೆ ಮುಂದುವರಿದರೆ ಕಾನೂನು ಕ್ರಮ ಅನಿವಾರ್ಯ ಎಂದು ಜಲ ಸಂಪನ್ಮೂಲ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.

Advertisement

ಶನಿವಾರ ಮುಳವಾಡ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ನೀಡುತ್ತಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನಂತಕುಮಾರ ಹೆಗಡೆ ಹೇಳಿಕೆ ಸಮಾಜದಲ್ಲಿ ನೆಮ್ಮದಿ ಕದಡುವಂತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಪರಮೇಶ್ವರ ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಮಾಡುತ್ತಿರುವುದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಎಲ್ಲರೂ ಒಂದೇ ಕಡೆ ಹೊಗುವುದಕ್ಕಿಂತ ಇಬ್ಬರೂ ಒಂದೊಂದೆಡೆ ಪ್ರವಾಸ ಮಾಡಿ ಪಕ್ಷ ಭದ್ರ ಪಡಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next