Advertisement

ಶಿವರಾತ್ರಿ ವಿಶೇಷ : ‘ತಂಬಿಟ್ಟು’ ಮಾಡುವ ವಿಧಾನ ತಿಳಿಯೋಣ

07:35 PM Mar 11, 2021 | Team Udayavani |

ಶಿವನ ಭಕ್ತರಿಗೆ ಇಂದು (ಮಾರ್ಚ್-11 ಶಿವರಾತ್ರಿ) ಬಹಳ ಮುಖ್ಯವಾದ ದಿನ. ಯಾಕಂದ್ರೆ ಈ ದಿನ ಹರ ಭಕ್ತರು ಇಡೀ ದಿನ ಉಪವಾಸವಿದ್ದು, ರಾತ್ರಿಯೆಲ್ಲ ಜಾಗರಣೆ ಮಾಡಿ ದೇವಾಲಯಗಳಿಗೆ ಹೋಗಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಸಿದ್ಧಿಯಾಗಲಿ ಎಂದು ಪ್ರಾರ್ಥಿಸುತ್ತಾರೆ.

Advertisement

ಇನ್ನು ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಅಡುಗೆ ವಿಶೇಷತೆಗಳು ಇವೆ. ಇಂದು ಶಿವರಾತ್ರಿ ಇರುವುದರಿಂದ ಈ ಹಬ್ಬದ ವಿಶೇಷತೆ ‘ತಂಬಿಟ್ಟು’ ಬಗ್ಗೆ ತಿಳಿಯೋಣ.

ಶಿವರಾತ್ರಿ ಎಂದ ತಕ್ಷಣ ನಮ್ಮ ತಲೆಗೆ ಬರುವುದು ಇಡೀ ದಿನ ಉಪವಾಸ ಇದ್ದು ಕೊನೆಯಲ್ಲಿ ಲಘು ಆಹಾರ ಸೇವಿಸುವ ಮೂಲಕ ಹಬ್ಬ ಆಚರಿಸುವುದು. ಆ ಕಾರಣದಿಂದಲೇ ಈ ಹಬ್ಬಕ್ಕೆ ಕರ್ನಾಟಕದ ಹಲವು ಭಾಗಗಳಲ್ಲಿ ತಂಬಿಟ್ಟು ಮಾಡಿ ಸೇವಿಸುತ್ತಾರೆ.

ಹಾಗಾದ್ರೆ ಬನ್ನಿ ಶಿವರಾತ್ರಿ ವಿಶೇಷ ತಂಬಿಟ್ಟನ್ನು ಹೇಗೆ ಮಾಡುವುದು ತಿಳಿಯೋಣ

ಬೇಕಾಗುವ ಪದಾರ್ಥಗಳು

  • ಹುರಿಗಡಲೆ
  • ಕೊಬ್ಬರಿ
  • ಬೆಲ್ಲ
  • ಶೇಂಗಾ
  • ಎಳ್ಳು
  • ತುಪ್ಪ
Advertisement

ತಂಬಿಟ್ಟು ಮಾಡುವ ವಿಧಾನ :

  • ಶೇಂಗಾವನ್ನು ಹದವಾಗಿ ಹುರಿದಿಟ್ಟುಕೊಂಡು, ನಂತ್ರ ಅನ್ನು ಮಿಕ್ಸಿಯಿಂದ ರುಬ್ಬಿಕೊಳ್ಳಬೇಕು. ತೀರಾ ನುಣ್ಣಗಾಗುವ ತನಕ ರುಬ್ಬಬಾರದು. ಒಂದಿಷ್ಟು ಹುಡಿ ಹುಡಿಯಾಗಿರಬೇಕು
  • ಎಳ್ಳನ್ನು ಹದವಾಗಿ ಹುರಿಯಬೇಕು
  • ಕೊಬ್ಬರಿಯನ್ನು ಪುಡಿ ಪುಡಿ ಮಾಡಿಕೊಳ್ಳಬೇಕು
  • ಬೆಲ್ಲವನ್ನು ಕಾಯಿಸಿ ಪಾಕ ಮಾಡಿಕೊಳ್ಳಬೇಕು
  • ನಂತ್ರ ಈ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಕಲಸಬೇಕು.
  • ಇದಾದ ಮೇಲೆ ಕಾಯಿಸಿಟ್ಟುಕೊಂಡ ಬೆಲ್ಲದ ಪಾಕವನ್ನು ಮತ್ತು ತುಪ್ಪವನ್ನು ಹಾಕಿ ಉಂಡೆ ಮಾಡಬೇಕು. ಈ ವೇಳೆ ಪಾಕವು ಒಂಚೂರ ಬಿಸಿಯಾಗಿದ್ದರೆ ಉತ್ತಮ. ಯಾಕಂದ್ರೆ ಬಿಸಿ ಪಾದಕ್ಕೆ ಮೇಲೆ ಹೇಳಿದ ಪದಾರ್ಥಗಳ ಪುಡಿಯನ್ನು ಹಾಕಿ ಉಂಡೆ ಮಾಡುವುದರಿಂದ ತುಂಬಾ ದಿನ ಬಳಸಬವುದು, ಮತ್ತು ಸಂಗ್ರಹಿಸಲು ಸುಲಭವಾಗುತ್ತದೆ.

ಇದಿಷ್ಟು ತಂಬಿಟ್ಟು ಮಾಡುವ ವಿಧಾನ. ಹೀಗೆ ಮಾಡಿದ ತಂಬಿಟ್ಟನ್ನು ಎಷ್ಟು ದಿನ ಬೇಕಾದರೂ ಸಂಗ್ರಹಿಸಬಹುದು. ನೀರು ತಾಗಿಸದಂತೆ ಇಟ್ಟುಕೊಂಡು ಯಾವಾಗ ಬೇಕಾದರೂ ತಿನ್ನಬಹುದು.

Advertisement

Udayavani is now on Telegram. Click here to join our channel and stay updated with the latest news.

Next