Advertisement
ಓಂಕಾರೇಶ್ವರ ರಥೋತ್ಸವ: ಶತಮಾನಗಳ ಇತಿಹಾಸದ ರಾಮೇನಹಳ್ಳಿ ಬೆಟ್ಟದಮೇಲಿನ ಚೋಳರ ಕಾಲದ ಓಂಕಾರೇಶ್ವರಸ್ವಾಮಿಯ ಜಾತ್ರಾಮಹೋತ್ಸವವು ನಡೆಯಲಿದೆ. ಸುಂದರಪರಿಸರದ ಬೆಟ್ಟದ ಮೇಲೆ ಭವ್ಯವಾದದೇವಾಲಯವನ್ನು ನಿರ್ಮಿಸಿದ್ದು, 426 ಎಕರೆವಿಸ್ತೀರ್ಣ ಹೊಂದಿರುವ ಬೆಟ್ಟವು ದೊಡ್ಡಬಂಡೆಕಲ್ಲುಗಳು, ಸಸಿಗಳಿಂದ ಆವೃತವಾಗಿರುವ 500 ಮೆಟ್ಟಿಲುಗಳ ಬೆಟ್ಟವನ್ನು ಹತ್ತಿ ಪೂಜೆಸಲ್ಲಿಸುತ್ತಾರೆ. ಪ್ರತಿ ಶಿವರಾತ್ರಿಹಬ್ಬದಮಾರನೇದಿನ ಬೆಟ್ಟದತಪ್ಪಲಿನಲ್ಲಿ ರಥೋತ್ಸವ,ಬಾಯಿ ಬೀಗಹಾಕಿಕೊಂಡು ಹರಕೆಸಲ್ಲಿಸುವುದು ಹಾಗೂಮಾರನೇ ದಿನಪಾರಟೋತ್ಸವ, ಲಕ್ಷ್ಮಣತೀರ್ಥ ನದಿಯಲ್ಲಿತೆಪ್ಪೋತ್ಸವ ಜರುಗಲಿದೆ.
Related Articles
Advertisement
ಪಶ್ಚಿಮಾಭಿಮುಖವಾಗಿ ಹರಿಯುವಲಕ್ಷ್ಮಣತೀರ್ಥ ನದಿಯ ದಂಡೆಯ ಮೇಲೆವಿರಾಜಮಾನವಾಗಿರುವ ರಾಮಲಿಂಗೇಶ್ವರಸ್ವಾಮಿಗೆ ದೊಡ್ಡ ಇತಿಹಾಸವಿದ್ದು,ಶ್ರೀರಾಮವನವಾಸವಿದ್ದ ವೇಳೆ ಶಿವರಾತ್ರಿಹಬ್ಬದಂದು ಈ ನದಿದಂಡೆ ಮೇಲೆ ಮರಳುಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದರು.ಇದನ್ನು ಕಂಡುಕೊಂಡ ಚೋಳರಾಜರು ಇಲ್ಲಿರಾಮಲಿಂಗೇಶ್ವರ ದೇವಾಲಯವನ್ನುನಿರ್ಮಿಸಿದ್ದರೆಂಬ ಪ್ರತೀತಿ ಇದೆ. ಮಾ.2 ಬುಧವಾರ ಕೊಳುವಿಗೆ ಗ್ರಾಮದಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ, ಮಾ.6 ಗುರುವಾರ ಕೋಣನಹೊಸಹಳ್ಳಿಯ ಬಸವೇಶ್ವರಸ್ವಾಮಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಉತ್ಸವ ನಡೆಯಲಿದೆ.
ಕಲ್ಲೂರೇಶ್ವರ ಸ್ವಾಮಿ ಜಾತ್ರೆ :
ಹುಣಸೂರು-ನಾಗರಹೊಳೆ ರಸ್ತೆಯ 4 ಕಿ.ಮೀ. ದೂರದ ಹನಗೋಡು ಬಳಿಯ ಮಾದಳ್ಳಿಯ ಕೈಲಾಸಬೆಟ್ಟದಲ್ಲಿ ಕಲ್ಲುಬಂಡೆಗಳ ನಡುವೆ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿಯ ಜಾತ್ರಾ ಮಹೋತ್ಸವವನ್ನು ಬೆಟ್ಟದ ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗರು ಸೇರಿಆಚರಿಸುವರು. ಇಲ್ಲಿ ಮಾ.2ರಂದು ನಡೆಯುವ ಕೊಂಡೋತ್ಸವವೇ ದೊಡ್ಡವಿಶೇಷ. ಕಲ್ಲೂರೇಶ್ವರ ಬೆಟ್ಟ ಹತ್ತಲು 70 ಮೆಟ್ಟಿಲುಗಳಿವೆ. ಅಕ್ಕಪಕ್ಕದಲ್ಲೂ ಬೃಹತ್ ಬಂಡೆಗಳು ಅದರಲ್ಲೂ ಯಾವುದೇ ಆಸರೆ ಇಲ್ಲದೆ ನಿಂತಿರುವ ಬಂಡೆಗಳು ಕಣ್ಮನ ಸೆಳೆಯುತ್ತವೆ.
-ಸಂಪತ್ ಕುಮಾರ್