ಮಂಗಳೂರು/ಉಡುಪಿ/ಕಾಸರಗೋಡು: ಮಹಾಶಿವರಾತ್ರಿಯನ್ನು ಕರಾವಳಿಯಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಈಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ, ರಥೋತ್ಸವ, ಜಾಗರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹೋಮ, ಮಹಾರುದ್ರಾಭಿಷೇಕ, ರಥೋತ್ಸವ, ಶಿವಬಲಿ, ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆಪೂಜೆ, ಕೆರೆದೀಪ ಮುಂತಾದ ಕಾರ್ಯಕ್ರಮಗಳು ನೆರವೇರಿದವು. ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ಹಾಗೂ ಇತರ ಪೂಜೆ ನೆರವೇರಿತು. ಶಿವರಾತ್ರಿ ಪ್ರಯುಕ್ತ ಶ್ರೀ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶ್ರೀ ಮಂಗಳಾದೇವಿಗೆ ಅರ್ಧನಾರೀಶ್ವರ ಅಲಂಕಾರ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಜಾಗರಣೆ, ಅಭಿಷೇಕ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಾವಿರಾರು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಬೆಳ್ತಂಗಡಿಯ ಎಲ್ಲ ಶಿವ ದೇವಾಲಯಗಳಲ್ಲಿ ಶಿವನಿಗೆ ವಿಶೇಷ ಪೂಜೆ ನೆರವೇರಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಂಟ್ವಾಳ ಶ್ರೀ ಕಾರಿಂಜೇಶ್ವರ ದೇವಸ್ಥಾನ, ನರಹರಿ ಪರ್ವತ, ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದೇವಸ್ಥಾನ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಯ ಶಿವ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಂಪನ್ನಗೊಂಡಿತು.
ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನ, ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಪರ್ಯಾಯ ಶ್ರೀಪೇಜಾವರ ಮಠಾಧೀಶರು ವಿಶೇಷ ಪೂಜೆ ಸಲ್ಲಿಸಿದರು. ಉಡುಪಿ ಬನ್ನಂಜೆ- ಪರ್ಕಳ-ಪೆರಂಪಳ್ಳಿ- ಕಲ್ಯಾಣಪುರ-ಪುತ್ತೂರು ಕುಮ್ರಪಾಡಿ – ಪಂದುಬೆಟ್ಟು ಕಾನಗುಡ್ಡೆ – ತೆಂಕನಿಡಿಯೂರು ಬೆಳ್ಕಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸಗ್ರಿಯ ಉಮಾಮಹೇಶ್ವರ ದೇವಸ್ಥಾನ, ಕಟಪಾಡಿಯ ವಿಶ್ವನಾಥ ಕ್ಷೇತ್ರ, ಕೆಳಾರ್ಕಳಬೆಟ್ಟು ಶಿವ ದೇವಸ್ಥಾನ, ಬ್ರಹ್ಮಾವರದ ಮಹಾಲಿಂಗೇಶ್ವರ, ಕೋಟದ ಹಿರೇಮಹಾಲಿಂಗೇಶ್ವರ, ಬಾರಕೂರು ಪಂಚಲಿಂಗೇಶ್ವರ, ಕೂರಾಡಿ ಮಹಾಲಿಂಗೇಶ್ವರ, ಉಪ್ಪೂರು ಚಿತ್ತಾರಿ ಮಹಾಬಲೇಶ್ವರ, ಹಾರಾಡಿ ಮಹಾಲಿಂಗೇಶ್ವರ, ನಯಂಪಳ್ಳಿ ಮಡಿಮಲ್ಲಿಕಾರ್ಜುನ ದೇವಸ್ಥಾನ, ಉಡುಪಿಯ ನಿತ್ಯಾನಂದ ಮಂದಿರ, ಕುಂದಾಪುರದ ಕುಂದೇಶ್ವರ, ಕೋಟೇಶ್ವರದ ಕೋಟಿಲಿಂಗೇಶ್ವರ, ಶಂಕರನಾರಾಯಣ ಮತ್ತು ಕೊಡವೂರಿನ ಶಂಕರನಾರಾಯಣ ದೇವಸ್ಥಾನ, ಬಸೂÅರು ಮಹಾಲಿಂಗೇಶ್ವರ ದೇವಸ್ಥಾನ, ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನ, ಕಿರಿಮಂಜೇಶ್ವರ ಅಗಸೆöàಶ್ವರ ದೇವಸ್ಥಾನ, ಹಟ್ಟಿಯಂಗಡಿ ಲೋಕನಾಥೇಶ್ವರ ದೇವಸ್ಥಾನ, ಕುಂಭಾಸಿ ಹರಿಹರ ದೇವಸ್ಥಾನ, ಕಾರ್ಕಳ ಶಿವತಿಕೆರೆಯ ಉಮಾಮಹೇಶ್ವರ ದೇವಸ್ಥಾನ, ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ರುದ್ರಪಾರಾಯಣ, ರಂಗಪೂಜಾದಿಗಳು ನಡೆದವು.
ಕಾಸರಗೋಡು ಜಿಲ್ಲೆಯ ಮಲ್ಲಿಕಾರ್ಜುನ ದೇವಸ್ಥಾನ, ಕೂಡ್ಲುಗುಡ್ಡೆ ಮಹಾಲಿಂಗೇಶ್ವರ, ಶಿವಮಂಗಲದ ಸದಾಶಿವ, ಮಲ್ಲಾವರ ಪಂಚಲಿಂಗೇಶ್ವರ, ಪರಕಿಲ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನ, ಕಾವುಗೋಳಿ ಶಿವ ದೇವಸ್ಥಾನ, ತಲಪಾಡಿ ಕಣ್ವತೀರ್ಥ ಮಠದ ಬ್ರಹೆ¾àಶ್ವರ, ಬಾಯಾರು, ದೇಲಂಪಾಡಿ , ತ್ರಿಕನ್ನಾಡು ತ್ರ್ಯಂಬಕೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.