Advertisement

ಶಿವರಾತ್ರಿಗೆ ಹೊರಬಂತು “ಮುಂದುವರೆದ ಅಧ್ಯಾಯ’ಮೊದಲ ಹಾಡು

10:22 AM Feb 23, 2020 | Team Udayavani |

ಬಹುತೇಕ ಅಂಡರ್‌ವರ್ಲ್ಡ್ ಹಿನ್ನೆಲೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟ ಆದಿತ್ಯ ಈ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ಆದಿತ್ಯ ನಾಯಕರಾಗಿರುವ “ಮುಂದುವರೆದ ಅಧ್ಯಾಯ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋದು ನಿಮಗೆ ಗೊತ್ತೇ ಇದೆ. ಥ್ರಿಲ್ಲರ್‌ ಅಂಶಗಳೊಂದಿಗೆ ಮೂಡಿಬಂದ ಈ ಟ್ರೇಲರ್‌ಗೆ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಈಗ ಚಿತ್ರದ ಹಾಡೊಂದು “ಶಿವರಾತ್ರಿ’ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದೆ. ನಟ ಧ್ರುವಸರ್ಜಾ ಅವರು ಚಿತ್ರದ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಎಲ್ಲಾ ಓಕೆ, ಶಿವರಾತ್ರಿ ಸಮಯದಲ್ಲಿ ಈ ಹಾಡು ಬಿಡುಗಡೆ ಮಾಡಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇದು ಶಿವನ ಕುರಿತಾದ ಹಾಡು. ಹೌದು, ಕ್ಲೈಮ್ಯಾಕ್ಸ್‌ಗೂ ಮುನ್ನ ಬರುವ ಈ ಹಾಡು ಶಿವನ ಕುರಿತಾಗಿದ್ದು, ಆ ಕಾರಣದಿಂದ ಚಿತ್ರತಂಡ ಶಿವರಾತ್ರಿ ಸಮಯದಲ್ಲಿ ಬಿಡುಗಡೆ ಮಾಡಿದೆ. “ನಮ್ಮೊಳಗಿನ ಶಿವನ’.. ಕುರಿತಾಗಿ ಈ ಹಾಡು ಮೂಡಿ ಬಂದಿದೆ.

ಆದಿತ್ಯ ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, “ಮುಂದುವರೆದ ಅಧ್ಯಾಯ’ ವಿಭಿನ್ನವಾಗಿದೆ. ಈ ನಂಬಿಕೆ ಸ್ವತಃ ಆದಿತ್ಯ ಅವರಿಗೂ ಇದೆ. ಬಹುತೇಕ ಅಂಡರ್‌ವರ್ಲ್ಡ್ ಹಿನ್ನೆಲೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಆದಿತ್ಯ ಈ ಚಿತ್ರದಲ್ಲಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ “ಕಣಜ ಎಂಟರ್‌ಪ್ರೈಸಸ್‌’ನಡಿ ನಿರ್ಮಾಣವಾಗಿದ್ದು, ಬಾಲು ಚಂದ್ರಶೇಖರ್‌ ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next