ಹನೂರು: ಹಳೇ ಮೈಸೂರು ಭಾಗದ ಆರಾಧ್ಯ ದೈವ ಮಲೆ ಮಹದೇಶ್ವರನ ಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಎಣ್ಣೆಮಜ್ಜನ ಸೇವೆ ಮತ್ತು ಅಮಾವಾಸ್ಯೆ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿದವು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರು ವಾರ ತಡರಾತ್ರಿ ಮಲೆ ಮಾದಪ್ಪನಿಗೆ ತ್ರಿಕಾಲ ಅಭಿಷೇಕ ಪೂಜಾ ಕೈಂಕರ್ಯಗಳನ್ನು ನೆರ ವೇರಿಸಿ ಎಳ್ಳುಕುಟ್ಟಿದ ಎಣ್ಣೆ ಹಾಗೂ ಇನ್ನಿತರ ತೈಲ ಗಳಿಂದ ತೈಲಾಭಿಷೇಕ ನೆರವೇರಿಸಲಾಯಿತು. ಬಳಿಕ ಮಾದಪ್ಪನಿಗೆ ವಿಭೂತಿ ಅಭಿಷೇಕ, ರುದ್ರಾಭಿ ಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಅಭಿಷೇಕ ಪೂಜಾ ಕೈಂಕರ್ಯಗಳನ್ನು ಬೇಡಗಂಪಣ ಅರ್ಚಕರಿಂದ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದ್ದ ತೆರೆದ ವಾಹನದಲ್ಲಿ ಮಾದಪ್ಪನ ಉತ್ಸವ ಮೂರ್ತಿಯನ್ನು ಮಂಗಳವಾದ್ಯ, ವೀರಗಾಸೆ ಕುಣಿತ ತಂಡ, ನಂದಿಕಂಬ, ಸತ್ತಿಗೆ ಸುರ ಪಾನಿ ಸಮೇತ ದೇವಾಲಯದ ಆವರಣ ದಿಂದ ತಂಬಡಗೇರಿಯವರೆಗೆ ಮೆರವಣಿಗೆ ನಡೆಸ ಲಾಯಿತು. ಬಳಿಕ ಶುಕ್ರವಾರ ಮುಂಜಾನೆ ವೇಳೆಗೆ ಉತ್ಸವಮೂರ್ತಿಯನ್ನು ದೇವಾಲಯಕ್ಕೆ ತಂದು ಅಮಾವಾಸ್ಯೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಶಿವರಾತ್ರಿ ಜಾಗರಣೆಯಿಲ್ಲ: ಕೋವಿಡ್-19 ಹಿನ್ನೆಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿರಿವ್ಯಾಪ್ತಿಯ ಭಕ್ತಾದಿಗಳನ್ನು ಹೊರತುಪಡಿಸಿ ಜಿಲ್ಲೆ,ಅಂತರ ಜಿಲ್ಲೆ ಮತ್ತು ಅಂತರರಾಜ್ಯ ಭಕ್ತಾದಿಗಳಿಗೆ ನಿಷೇಧ ಹೇರಿದ್ದ ಹಿನ್ನೆಲೆ ಶಿವರಾತ್ರಿ ಹಬ್ಬದ ಜಾಗ ರಣೆ ಆಚರಣೆ ಜರುಗಲಿಲ್ಲ, ಪ್ರತಿವರ್ಷ ಶಿವ ರಾತ್ರಿಯಂದು ವಿವಿಧ ಕಲಾತಂಡಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಪ್ರಾಧಿಕಾರದ ವತಿಯಿಂದ ಹಲವಾರು ಕಾರ್ಯ ಕ್ರಮಗಳನ್ನು ಏರ್ಪಡಿಸಿ ಭಕ್ತಾದಿಗಳ ಜಾಗ ರಣೆಗೆ ಅವಕಾಶ ಕಲ್ಪಿಸಿಕೊಡಲಾಗುತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ನಿಷೇಧ ವಿಧಿಸಿ ದ್ದರ ಹಿನ್ನೆಲೆ ಈ ಆಚರಣೆಗೆ ಬ್ರೇಕ್ ಬಿದ್ದಿತ್ತು.
ನಾಳೆ ಮಹಾ ರಥೋತ್ಸವ :
ಶ್ರೀ ಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 9.45ರಿಂದ 11:30ರ ಶುಭವೇಳೆಯಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವವು ಜರುಗಲಿದೆ. ಅಲ್ಲದೆ ಅದೇ ದಿನ ತಡರಾತ್ರಿ ಅಭಿಷೇಕ ಪೂಜಾಕೈಂಕರ್ಯಗಳು ಪೂರ್ಣಗೊಂಡ ಬಳಿಕ ಕೊಂಡೊತ್ಸವ ಜರುಗಲಿದ್ದು, ಈ ಮೂಲಕಮಲೆ ಮಾದಪ್ಪನ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ