Advertisement

ಎಲ್ಲೆಡೆ ಶಿವಭಜನೆ ಶಿವಾರಾಧನೆ

12:15 PM Feb 22, 2020 | Suhan S |

ರಾಮದುರ್ಗ: ರಾಮದುರ್ಗ ಪಟ್ಟಣದ (ಮುಳ್ಳೂರ ಗುಡ್ಡದ) ಅಶೋಕ ವನದಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಎರಡನೇಯ ಎತ್ತರದ ಶಿವನ ಮೂರ್ತಿಗೆ ಶಿವರಾತ್ರಿಯ ದಿನವಾದ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಶಿವರಾತ್ರಿಯ ಅಂಗವಾಗಿ ಬೆಳಗ್ಗೆಯೇ ಶಿವನಮೂರ್ತಿಯ ರಾಮೇಶ್ವರ ಮಂದಿರದಲ್ಲಿರುವ ಇಷ್ಟಲಿಂಗಕ್ಕೆ ಶಿವ ಪ್ರತಿಷ್ಠಾಪನಾ ಸೇವಾ ಸಮಿತಿಯಿಂದ ಮಾಜಿ ಶಾಸಕ ಹಾಗೂ ಸಮಿತಿ ಅಧ್ಯಕ್ಷ ಅಶೋಕ ಪಟ್ಟಣ ಅವರ ನೇತೃತ್ವದಲ್ಲಿ ವಟುಗಳು ರುದ್ರಾಭಿಷೇಕ, ಬಿಲ್ವಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಮುಳ್ಳೂರು ಗುಡ್ಡಕ್ಕೆ ವಾಹನಗಳಲ್ಲಿ ಹಾಗೂ ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತರು ಸುಡು ಬಿಸಿಲಿನಲ್ಲಿಯೇ ಶಿವನ ದರ್ಶನ ಪಡೆದರು. ಶಿವರಾತ್ರಿಯ ಪೂಜೆಗೆ ಸಾವಿರಾರು ಜನ ಭಕ್ತರು ದಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆದರು. ಎಲ್ಲ ಭಕ್ತರಿಗೂ ಬೇಯಿಸಿದ ಶೇಂಗಾ ಮತ್ತು ಸಾಬುದಾನಿ, ಬಾಳೆಹಣ್ಣು ಸೇರಿದಂತೆ ಒಣ ಹಣ್ಣುಗಳನ್ನು ವಿತರಣೆ ಮಾಡಲಾಯಿತು. ಶಿವನ ಮೂರ್ತಿ ಸುತ್ತಲೂ ಹಸಿರು ಹಾಸು ಬೆಳೆಸಲಾಗಿದೆ. ಶಿವನ ಮೂರ್ತಿ ವೀಕ್ಷಣೆಗೆ ಮೇಲ್ಭಾಗಕ್ಕೆ ಹತ್ತುವಾಗ ಆಯ ತಪ್ಪದ ರೀತಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಅಳವಡಿಸಲಾಗಿದೆ. ಆಕರ್ಷಕ ಬಣ್ಣದ ರಂಗೋಲಿ ರಚಿಸಲಾಗಿತ್ತು. ತಡರಾತ್ರಿಯವರೆಗೆ ಸುಗಮ ಸಂಗೀತ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next