Advertisement

ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

02:12 AM Apr 30, 2022 | Team Udayavani |

ಬೆಳ್ತಂಗಡಿ: ಸಾಹಿತ್ಯ ಪೋಷಕರಿಂದ ಇಂದು ಕಾರಂತರ ಪರಂಪರೆಯನ್ನು ಉಳಿಸುವ ಕೆಲಸವಾಗಿದೆ.

Advertisement

1930ರ ಅವಧಿಯಲ್ಲಿ ಕಾಡು ಮೇಡು ಸುತ್ತಿ ಮಲೆಕುಡಿಯರ 90 ವರ್ಷದ ಸಂಸ್ಕೃತಿಯನ್ನು ಅಧ್ಯಯನ ಮಾಡಿ “ಕುಡಿಯರ ಕೂಸು’ ಕೃತಿಯಲ್ಲಿ ಹೆಣೆದಿದ್ದರು. “ಚಿಗುರಿದ ಕನಸು’ ಕಾದಂಬರಿಯಲ್ಲಿ ಮಲೆನಾಡು ಕಾರಂತರಿಗೆ ಆಪ್ಯಾಯ ಮಾನವಾಗಿತ್ತು ಎಂಬುದನ್ನು ಕಾಣಬಹುದು ಎಂದು ಸಂಶೋಧಕ, ಜಾನಪದ ವಿದ್ವಾಂಸ ಪ್ರೊ| ಬಿ.ಎ. ವಿವೇಕ ರೈ ಸ್ಮರಿಸಿದರು.

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಸಹಯೋಗದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿ
ಷತ್‌, ಬೆಳ್ತಂಗಡಿ ತಾಲೂಕು ಸಾಹಿತ್ಯ ಪರಿಷತ್‌ ವತಿಯಿಂದ ಸಂತೆಕಟ್ಟೆ ಸುವರ್ಣ ಆರ್ಕೇಡ್‌ನ‌ಲ್ಲಿ ಶುಕ್ರವಾರ ನಡೆದ 2021ರ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಶಿವರಾಮ ಕಾರಂತ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಾಹಿತಿ ಡಾ| ಕುಂ. ವೀರಭದ್ರಪ್ಪ ಮಾತನಾಡಿ, ಕರ್ನಾಟಕ ಸಾರಸ್ವತ ಲೋಕಕ್ಕೆ ಬರಹವನ್ನು ಕಟ್ಟಿಕೊಟ್ಟವರು ಕಾರಂತರು ಎಂದು ಬಣ್ಣಿಸಿದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಮಾತನಾಡಿದರು. ಮೂಡುಬಿದರೆ ಶಿವರಾಮ ಕಾರಂತ ಪ್ರತಿಷ್ಠಾನ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಪತಿ ಭಟ್‌, ಬಾಹುಬಲಿ ಪ್ರಸಾದ್‌, ಭಾನುಮತಿ ಶೀನಪ್ಪ, ಲಕ್ಷ್ಮೀಪತಿ ಸೋಂದಲಗೆರೆ, ರಾಜಾರಾಮ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ ಸ್ವಾಗತಿಸಿದರು. ಕಾರಂತ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ| ಜಯಪ್ರಕಾಶ ಮಾವಿನಕುಳಿ ನಿರ್ವಹಿಸಿದರು.

Advertisement

ಶಿವರಾಮ ಕಾರಂತ ಪ್ರಶಸ್ತಿ
2021ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿಯನ್ನು ಸಾಹಿತಿಗಳಾದ ಪ್ರೊ| ಬಿ.ಎ. ವಿವೇಕ ರೈ, ಡಾ| ಕುಂ. ವೀರಭದ್ರಪ್ಪ ಬಳ್ಳಾರಿ ಅವರಿಗೆ, 2021ರ ಶಿವರಾಮ ಕಾರಂತ ಪುರಸ್ಕಾರವನ್ನು ಡಾ| ಮಹಾಬಲೇಶ್ವರ ರಾವ್‌, ಡಾ| ಗಜಾನನ ಶರ್ಮ, ಡಾ| ವಿಕ್ರಮವಿಸಾಜಿ, ಪ್ರೊ| ಜಯಪ್ರಕಾಶ ಗೌಡ, ವೈ.ಎ. ದಂತಿ ಅವರಿಗೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next