Advertisement

ಕೃಷ್ಣಸ್ವಾಮಿ ಜೋಯಿಸರಿಗೆ ಶಿವರಾಮ ಕಲ್ಕೂರ ಪ್ರಶಸ್ತಿ

06:04 PM Jan 31, 2020 | mahesh |

ಕಾಳಿಂಗ ನಾವುಡರ ಒಡನಾಡಿ, ಯಕ್ಷರಂಗದಲ್ಲಿ ಜೋಯಿಸರು ಎಂದೇ ಖ್ಯಾತರಾದ ಬಿ.ಕೃಷ್ಣಸ್ವಾಮಿ ಜೋಯಿಸರಿಗೆ ಉಪ್ಪೂರು ತೆಂಕಬೆಟ್ಟುವಿನ ಶ್ರೀ ವಿನಾಯಕ ಯಕ್ಷಗಾನ ಸಂಘ ಇದರ ಸ್ಥಾಪಕ ದಿ. ಯು. ಶಿವರಾಮ ಕಲ್ಕೂರ ಅವರ ಸ್ಮರಣಾರ್ಥ ದಿವಂಗತ ಯು. ಶಿವರಾಮ ಕಲ್ಕೂರ ಪ್ರಶಸ್ತಿಯನ್ನು ಫೆ. 1 ರಂದು ಪ್ರದಾನ ಮಾಡಲಾಗುತ್ತಿದೆ.

Advertisement

ಬ್ರಹ್ಮಾವರದ ಕೃಷ್ಣಸ್ವಾಮಿ ಜೋಯಿಸರು ಅಲ್ಲಿನ ದೇವಸ್ಥಾನದಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸಿ ಪ್ರಭಾವಿತರಾದವರು. ಪದವಿ ಶಿಕ್ಷಣವನ್ನು ಪಡೆಯುತ್ತಿರುವಾಗ ಅನಂತರ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಪ್ರಾಚಾರ್ಯ ಹೆಚ್ಚಿನ ಮದ್ದಳೆ ತರಬೇತಿ ಪಡೆದರು. ಜೋಯಿಸರು ನಾವುಡರು ಹಾಗೂ ಅವರ ತಂದೆಯವರೊಂದಿಗೆ ಹೂವಿನ ಕೋಲು ಕಾರ್ಯಕ್ರಮಗಳಲ್ಲಿ ಮದ್ದಳೆವಾದಕರಾಗಿ ಭಾಗವಹಿಸುತ್ತಿ ದ್ದರು.

ಅಜಪುರ ಯಕ್ಷಗಾನ ಕಲಾ ಸಂಘದಲ್ಲಿ ಪ್ರಸಾದನ ಕಲಾವಿದರಾಗಿ, ಅಜಪುರ ಮಕ್ಕಳ ಮೇಳದ ನಿರ್ದೇಶಕರಾಗಿ, ಹಲವಾರು ಯಕ್ಷಗಾನ ಸಂಘದ ಗುರುಗಳಾಗಿ, ಭಾಗವತರಾಗಿ, ಮದ್ದಳೆಗಾರರಾಗಿ ಭಾಗವಹಿಸಿದ್ದಾರೆ. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಪ್ರಸಾಧನ ಹಾಗೂ ಹಿಮ್ಮೇಳ ಕಲಾವಿದರಾಗಿ ಸೇವೆ ಗೈಯುತ್ತಾ ಮಕ್ಕಳ ಮೇಳ ಹಾಗೂ ಕಾಳಿಂಗ ನಾವುಡರೊಂದಿಗೆ 3 ಬಾರಿ ವಿದೇಶ ಪ್ರಯಾಣ ಮಾಡಿ ವಿದೇಶಿಗರಿಗೆ ಯಕ್ಷಗಾನ ಕಲೆಯ ರಸದೌತಣವನ್ನು ಉಣಬಡಿಸಿದ್ದಾರೆ. ಪ್ರಸ್ತುತ ಬ್ರಹ್ಮಾವರದ ಅಜಪುರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾಗಿ, ಯಕ್ಷಗಾನದ ಪ್ರಸಾಧನ ಕಲಾವಿದರಾಗಿ ವೃತ್ತಿ ನಿರ್ವಹಿಸುತ್ತಿರುವ ಜೋಯಿಸರು ಚಿತ್ರಕಲೆಯಲ್ಲಿ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಪ್ರತೀ ವರ್ಷ ಗಣೇಶ ಚತುರ್ಥಿ ವೇಳೆ 60-70 ಗಣೇಶನ ವಿಗ್ರಹ ಹಾಗೂ ನವರಾತ್ರಿ ಸಂದರ್ಭಗಳಲ್ಲಿ ಶಾರದಾ ವಿಗ್ರಹದ ರಚನೆಯನ್ನೂ ಮಾಡುತ್ತಿದ್ದಾರೆ.

ರಾಘವೇಂದ್ರ ಭಟ್‌, ಮರ್ಣೆ

Advertisement

Udayavani is now on Telegram. Click here to join our channel and stay updated with the latest news.

Next