Advertisement

Shivaram Hebbar: ಇಲ್ಲಿವರೆಗೂ ಬಿಜೆಪಿ ಶಾಸಕ… ಮುಂದಿನದು ಹೇಳಲು ನಾನು ಜ್ಯೋತಿಷಿಯಲ್ಲ…

03:03 PM Aug 28, 2023 | Team Udayavani |

ಮುಂಡಗೋಡ: ನಾನು ಇಲ್ಲಿಯವರೆಗೂ ಬಿಜೆಪಿ ಶಾಸಕ. ಮುಂದಿನ ಭವಿಷ್ಯ ಹೇಳಲು ನಾನು ಜ್ಯೋತಿಷಿ ಅಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

Advertisement

ಸೋಮವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಮಾತನಾಡುತ್ತಿದ್ದರು ಮುಂದಿನ ತಿಂಗಳು ಕಾಂಗ್ರೆಸ್ ಸೇರ್ಪಡೆ ಆಗುತ್ತೀರಿ ಎಂಬ ವದಂತಿ ಇದೆ ಎಂಬುವದರ ಬಗ್ಗೆ ಪ್ರಶ್ನೆಗೆ ಮುಗುಳ ನಗೆಯಿಂದ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಮುಖ್ಯಮಂತ್ರಿಗಳನ್ನು ರಾಜಕೀಯ ಉದ್ದೇಶದಿಂದ ಭೇಟಿ ಆಗಿಲ್ಲ. ಕ್ಷೇತ್ರದ ಮಳೆ ಕಡಿಮೆಯಾಗಿ ಬೆಳೆ ಹಾನಿಯಾಗಿದೆ. ನನ್ನ ಕ್ಷೇತ್ರವನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದ್ದೇನೆ ವಿನಹ ಬೇರೆ ಯಾವ ರಾಜಕೀಯ ವಿಷಯಗಳ ಬಗ್ಗೆ ಚರ್ಚೆಸಿಲ್ಲ ಎಂದರು.

ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಉದ್ಘಾಟಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ ಅವರನ್ನು ಕರೆತರಲು ಉದ್ದೇಶವಿದೆ. ಈಗಾಗಲೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. ನೀರಾವರಿ ಯೋಜನೆಯ ವಿದ್ಯುತ್ ಜೋಡಣಾ ಕಾರ್ಯಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಮಾಣಪತ್ರ ನೀಡುತ್ತಾರೆ ತದನಂತರ ಜಲ ಸಂಪನ್ಮೂಲ ಇಲಾಖೆವು ಉದ್ಘಾಟನೆಗೆ ಅನುಮತಿ ನೀಡದ ನಂತರವೇ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದ ಅವರು ಹೇಳಿದರು.

ಯಲ್ಲಾಪುರ ಕ್ಷೇತ್ರದಲ್ಲಿ ಶೇ70ರಷ್ಟು ಮಳೆ ಕಡಿಮೆ ಆಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಬ್ಬು ಬೆಳೆ ಕೂಡ‌ ಕುಠಿತಗೊಂಡಿದೆ.ರಾಜ್ಯದ 176 ತಾಲೂಕಿನಲ್ಲಿ ಬರದ ಚಾಹೇ ಇದೆ. ಈ ಬಗ್ಗೆ ಕೃಷಿ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ಹವಮಾನ ಇಲಾಖೆಯವರು ಸೆಪ್ಟೆಂಬರ್ ದಲ್ಲಿ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ರಾಜ್ಯ ಸರಕಾರದ ಮಾರ್ಗಸೂಚಿಯಿಂದ ಸಾಧ್ಯವಿಲ್ಲ.

ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಮಾಡಬೇಕಾಗುತ್ತದೆ. ಕೇಂದ್ರದ ಸರಕಾರ ಆದೇಶದಲ್ಲಿ‌ ಶೇ 60ರಷ್ಟು ಬೆಳೆ ಹಾನಿಯಾದರೆ ಮಾತ್ರ ಬರಪೀಡಿತ ಮಾಡಲು ಅವಕಾಶವಿದೆ. ಕೇಂದ್ರದ ಈ ಮಾರ್ಗಸೂಚಿ ಯನ್ನು 30ಕ್ಕೆ ಇಳಿಸುವಂತೆ ಆಗಬೇಕು ಎಂದರು.

Advertisement

ಇದನ್ನೂ ಓದಿ:  Dandeli: ಹೃದಯಾಘಾತದಿಂದ ಯುವಕ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next