ಕಾರವಾರ: ಮುಖ್ಯಮಂತ್ರಿಗಳು ನಾನು ಕೇಳಿದ ಖಾತೆಯನ್ನೇ ನೀಡಿದ್ದಾರೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಕಾರವಾರದಲ್ಲಿ ಅವರು ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದರು.
ನಾನು ಕಾರ್ಮಿಕ ಖಾತೆಯ ಸಚಿವನಾಗಿಯೇ ಮುಂದುವರೆಯುತ್ತೇನೆ ಎಂದ ಅವರು ಕ್ಯಾಬಿನೆಟ್ ಖಾತೆ ಹಂಚಿಕೆ ಈಗಾಗಲೇ ಮುಗಿದಿದೆ. ಯಾರಿಗೂ ಕೂಡಾ ಖಾತೆ ಕುರಿತು ಅಸಮಾಧಾನ ಇಲ್ಲ ಎಂದರು.
ಇದನ್ನೂ ಓದಿ:‘ಜನತಾ ಪರಿವಾರ ಸರ್ಕಾರ’ದ ಛಾಯೆ ಕಳೆಯಲು ಸಂಘ ಹಿನ್ನೆಲೆಯವರಿಗೆ ಬಂಪರ್: ಏನಿದು ಲೆಕ್ಕಾಚಾರ?
ಕಾರ್ಯಕರ್ತನಾದವನಿಗೆ ಶಾಸಕನಾಗಬೇಕು, ಶಾಸಕನಾದ ಕೂಡಲೇ ಮಂತ್ರಿಯಾಗಬೇಕು, ಮಂತ್ರಿಯಾದ ಮೇಲೆ ಮುಖ್ಯಮಂತ್ರಿ ಸ್ಥಾನವೇ ಬೇಕು, ಇಂತಹುದೇ ಖಾತೆ ಬೇಕು ಎನ್ನುವ ಬೇಡಿಕೆ ಇರುತ್ತದೆ. ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರಿಗೆ, ಅದರ ಕಷ್ಟ ಗೊತ್ತಿದೆ. ಮುಖ್ಯಮಂತ್ರಿಗಳು ಯಾವ ಜವಾಬ್ದಾರಿ ಕೊಟ್ಟಿದ್ದಾರೋ ಸರ್ಕಾರಕ್ಕೆ, ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.
ಅತೃಪ್ತಿ ಗೊತ್ತಿಲ್ಲ: ಅತೃಪ್ತರೊಂದಿಗೆ ರಮೇಶ ಜಾರಕಿಹೊಳಿ ಮೀಟಿಂಗ್ ವಿಚಾರ ಕುರಿತು ನನಗೆ ಮಾಹಿತಿ ಇಲ್ಲ. ರಮೇಶ ಜಾರಕಿಹೊಳಿ ಈಗಲೂ ನನ್ನ ಸ್ನೇಹಿತ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.