Advertisement

ಕಾರ್ಮಿಕ ಅದಾಲತ್ ಮೂಲಕ ಒಂದು ತಿಂಗಳಲ್ಲಿ 2,98 ಲಕ್ಷ ಅರ್ಜಿ ವಿಲೇವಾರಿ : ಕಾರ್ಮಿಕ ಸಚಿವ

02:07 PM Dec 22, 2021 | Team Udayavani |

ಬೆಳಗಾವಿ : ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ರಾಜ್ಯದ ಕಾರ್ಮಿಕರಿಗೆ ಆಸರೆಯಾಗಿ ಕಾರ್ಯನಿರ್ವಹಿಸಿದೆ, ಪ್ರತಿ ಹಂತದಲ್ಲಿಯೊ ಸಹ ಶ್ರಮಿಕ ರಕ್ಷಣೆಗೆ ಇಲಾಖೆಗೆ ಶ್ರಮಿಸುತ್ತಿದೆ ಎಂದು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಹೇಳಿದರು.

Advertisement

ಅವರು ಇಂದು ನಗರದ ತಿಲಕವಾಡಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕ್ರೆಡೈ ಮತ್ತು ಹಿಂದಲ್ಯಾಬ್ಸ್ ವತಿಯಿಂದ ಆಯೋಜಿಸಿದ್ದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ಶಿಬಿರವನ್ನುಉದ್ಘಾಟಿಸಿ, ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಸಲಕರಣೆಗಳ ಕಿಟ್ ಅನ್ನು ವಿತರಿಸಿ ಮಾತನಾಡಿದ ಸಚಿವರು ಕೋವಿಡ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಹಾಗೂ ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ತೆರಳುವುದಕ್ಕೆ ವಾಹನ ವ್ಯವಸ್ಥೆ, ವಸತಿ ವ್ಯವಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ನೀಡಿದೆ ಮುಂದಿನ ದಿನಗಳಲ್ಲಿ ರಾಜ್ಯದ ಶ್ರಮಿಕ ಅಭಿವೃದ್ಧಿಯಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುವುದು.

ನಾನು ಕಾರ್ಮಿಕ ಸಚಿವನಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ರಾಜ್ಯದ ಕಾರ್ಮಿಕರ ದೂರವಾಣಿ ಮೂಲಕ ಕರೆ ಮಾಡಿ ವಿವಿಧ ಯೋಜನೆ ಸಹಾಯ ಧನ ತಮಗೆ ಜಮಾ ಆಗಿರದ ಬಗ್ಗೆ ಮಾಹಿತಿ ನೀಡಿದರು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವ ದೃಷ್ಟಿಯಿಂದ ಒಂದು ತಿಂಗಳುಗಳ ಕಾಲ ಕಾರ್ಮಿಕ ಅದಾಲತ್ ನಡೆಸಿ ಬಾಕಿಯಿಂದ 3,01,000 ಅರ್ಜಿಗಳಲ್ಲಿ ಸುಮಾರು 2,98,000 ಅರ್ಜಿಗಳನ್ನು ವಿಲೇವಾರಿ ಮಾಡಿ ಈ ಮೂಲಕವಾಗಿ ಮಂಡಳಿಯಿಂದ ನೇರವಾಗಿ 92 ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದರು.

ಮುಂದುವರೆದು ಮಾತನಾಡಿದ ಸಚಿವರು ಕಾರ್ಮಿಕರಿಗೆ ಹತ್ತಿರವಾಗುವ ದೃಷ್ಟಿಯಿಂದ ಇಲಾಖೆ ಅತ್ಯಂತ ಮುತುವರ್ಜಿಯನ್ನು ವಹಿಸಿ ಕಾರ್ಯವಹಿಸುತ್ತಿದೆ ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಾದ್ಯಂತ 25 ಸಾವಿರ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಮಾಡಲಾಗುವುದು ಹಾಗೂ ಇದೆ 29 ದಿಂದ ಸಂಚಾರಿ ಆರೋಗ್ಯ ಚಿಕಿತ್ಸಾ ಘಟಕವನ್ನು ಪ್ರಾದೇಶಿಕ ವ್ಯಾಪ್ತಿಯಲ್ಲಿ ಉದ್ಘಾಟಿಸಲಾಗುವುದು ಎಂದರು.

ಇದನ್ನೂ ಓದಿ : ಸುಳ್ಯ: ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನೇಣು ಬಿಗಿದು ಆತ್ಮಹತ್ಯೆ

Advertisement

ಈ ಸಮಾರಂಭದಲ್ಲಿ ಮಾತನಾಡಿದ ಶಾಸಕರಾದ ಅಭಯ ಪಾಟೀಲ್ ಮಾನ್ಯ ಸಚಿವರು ಕಾರ್ಮಿಕ ಇಲಾಖೆಯ ಅಧಿಕಾರ ಸ್ವೀಕರಿಸಿದ ದಿನದಿಂದ ಹೆಚ್ಚಿನ ಯೋಜನೆಗಳನ್ನು ಶ್ರಮಿಕ ವರ್ಗಕ್ಕೆ ನೀಡಿದ್ದಾರೆ ಹಾಗ ಕೋವಿಡ್ ನಂತರ ಕಾಲದಲ್ಲಿ ರಾಜ್ಯದ ಕಾರ್ಮಿಕ ಇಲಾಖೆ ಶ್ರಮಿಕರ ರಕ್ಷಣೆಗಾಗಿ ಅತ್ಯಂತ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದೆ ಎಂದು ಸಚಿವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ, Credia ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಚೇತನ ಕುಲಕರ್ಣಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ಸಂಘಟನೆಯ ಪ್ರಮುಖರು ಹಾಗೂ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next