ಕನ್ನಡ ಚಿತ್ರರಂಗದ ಮೇರುನಟ, ನಟ ಸಾರ್ವಭೌಮ ಡಾ.ರಾಜಕುಮಾರ್‌ನೇತ್ರದಾನ ಮಾಡಿದ್ದು ಬಹುತೇಕರಿಗೆ ಗೊತ್ತೇ ಇದೆ. ಡಾ. ರಾಜಕುಮಾರ್‌ನಿಧನದ ನಂತರ ಅವರ ಕಣ್ಣುಗಳನ್ನು ಅವರ ಇಚ್ಛೆಯಂತೆ ದಾನಮಾಡಲಾಗಿತ್ತು. ಡಾ. ರಾಜಕುಮಾರ್ ಅವರ ಈ ಸಾರ್ಥಕ ಕಾರ್ಯದಿಂದಪ್ರೇರಣೆಗೊಂಡು, ಅದೆಷ್ಟೋ ಮಂದಿ ಸ್ವಯಂಪ್ರೇರಿತ ನೇತ್ರದಾನಕ್ಕೆಮುಂದಾಗುತ್ತಿದ್ದು, ನೇತ್ರದಾನ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಈಗ ಡಾ. ರಾಜಕುಮಾರ್ ಅವರಂತೆಯೇ, ಅವರ ಪುತ್ರಶಿವರಾಜಕುಮಾರ್ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಿಗೆಸೂಚಿಸಿದ್ದಾರೆ. ಡಾ.ರಾಜಕುಮಾರ್ ಅವರ ನೇತ್ರವನ್ನು ದಾನ ಮಾಡಲಾದ ನಾರಾಯಣನೇತ್ರಾಲಯದಲ್ಲಿಯೇ ಶಿವರಾಜ ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನಮಾಡಲು ಒಪ್ಪಿಗೆ ಸೂಚಿಸಿ ಸಹಿಮಾಡಿದ್ದಾರೆ.
ಇದನ್ನೂ ಓದಿ:ಶತಕೋಟಿ ವೀರ ದರ್ಶನ್ : ನೂರು ಕೋಟಿ ಗಳಿಸಿದ ‘ರಾಬರ್ಟ್’
ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಕನ್ನಡದ “ಅಕ್ಷಿ’ ಚಿತ್ರತಂಡ,ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ವಿಶೇಷಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿವರಾಜಕುಮಾರ್ ನೇತ್ರದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಜೊತೆಗೆ ನೇತ್ರದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಅಂದಹಾಗೆ, 1994 ರಲ್ಲಿ ಡಾ. ರಾಜಕುಮಾರ್ ನೇತ್ರ ಬ್ಯಾಂಕ್ ಸ್ಥಾಪನೆ ಆಗಿತ್ತು. ಅಂದು ಡಾ. ರಾಜಕುಮಾರ್ ನೇತ್ರ ಬ್ಯಾಂಕ್ ಉದ್ಘಾಟನೆ ಮಾಡಿ,ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದರು. ರಾಜಕುಮಾರ್‌ಮರಣದ ನಂತರ ಅವರ ನೇತ್ರವನ್ನು ಸಂರಕ್ಷಿಸಿಕಣ್ಣಿಲ್ಲದವರಿಗೆ ನೀಡಲಾಯಿತು.