Advertisement
ಪ್ರತೀ ನಿತ್ಯ ಇದೇ ದಾರಿಯಿಂದ ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸಂಚರಿಸುತ್ತಿದ್ದು ಮಣ್ಣು ಕುಸಿತ ಮುಂದುವರಿದರೆ ಟವರ್ ರಸ್ತೆಗೆ ಉರುಳುವ ಅಪಾಯವಿದೆ. ಸಮೀಪದಲ್ಲಿ ಹಲವಾರು ಮನೆಗಳು, ಅಂಗಡಿ ಮುಂಗಟ್ಟುಗಳಿದ್ದು ಗ್ರಾಮಸ್ಥರು ಆತಂಕಿತರಾಗಿದ್ದಾರೆ.
ಟವರ್‌ನ ಅಡಿಯಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದು ಅದು ಬಿದ್ದಲ್ಲಿ ಅಪಾಯ ಖಚಿತ ಎಂದು ಸ್ಥಳೀಯರು ಹೇಳುತ್ತಾರೆ. ಈ ಟವರ್ ಖಾಸಗಿ ಜಾಗದಲ್ಲಿದ್ದು, 15 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಅವಧಿ ಪೂರ್ಣಗೊಂಡಿರುವ ಕಾರಣ ಮತ್ತು ಅಪಾಯದ ಕಾರಣ ಜಾಗದ ಮಾಲಕರು ಗುತ್ತಿಗೆ ಮುಂದುವರಿಸಲು ಒಪ್ಪದೆ ಕೂಡಲೇ ತೆರವುಗೊಳಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಸಂಬಂಧಪಟ್ಟ ಕಂಪೆನಿಯವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಬಗ್ಗೆ ಪಂಚಾಯತ್ ಗಮನಕ್ಕೂ ತರಲಾಗಿದ್ದು ಸಂಬಂಧಪಟ್ಟವರಿಗೆ ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಬೇಕು ಆಗ್ರಹಿಸಿದ್ದಾರೆ.