Advertisement

ಶಿವಪ್ಪ  ಶಿವಪುರ ಅವಿರೋಧ ಆಯ್ಕೆ

03:33 PM Jul 17, 2021 | Girisha |

ಮುದ್ದೇಬಿಹಾಳ: ಇಲ್ಲಿನ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 13ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಶಿವಪ್ಪ ಶಿವಪುರ ಅವಿರೋಧವಾಗಿ ಆಯ್ಕೆಯಾದರು. ಶುಕ್ರವಾರ ಇಲ್ಲಿನ ಪುರಸಭೆ ಸಭಾ ಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಪುರ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು.

Advertisement

ಇವರಿಗೆ 6ನೇ ವಾಡ್‌ ìನ ಕಾಂಗ್ರೆಸ್‌ ಸದಸ್ಯೆ ಪ್ರೀತಿ ದೇಗಿನಾಳ ಸೂಚಕರಾಗಿದ್ದರೆ, 20ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಮಹೆಬೂಬ ಗೊಳಸಂಗಿ ಅನುಮೋದಕರಾಗಿದ್ದರು. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ, ಸ್ಥಾಯಿ ಸಮಿತಿ ಸದಸ್ಯರಾದ ವೀರೇಶ ಹಡಲಗೇರಿ, ಮಹ್ಮದರμàಕ ದ್ರಾಕ್ಷಿ, ಶರೀಫಾ ಮೂಲಿಮನಿ, ಚಾಂದಬಿ ಮಕಾನದಾರ, ಸೋನೂಬಾಯಿ ನಾಯಕ, ಭಾರತಿ ಪಾಟೀಲ, ರಿಯಾಜ್‌ ಢವಳಗಿ ಇದ್ದರು.

ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ ನಾಮಪತ್ರ ಸ್ವೀಕರಿಸಿದರು. ಪ್ರಭಾರ ಮುಖ್ಯಾಧಿಕಾರಿಯೂ ಆಗಿರುವ ಹಿರಿಯ ಆರೋಗ್ಯ ನಿರೀಕ್ಷಕ ಸುನೀಲ ಪಾಟೀಲ ಪ್ರಕ್ರಿಯೆ ನಡೆಸಿಕೊಟ್ಟರು. ಮುಖಂಡರ ಹಿತನುಡಿ: ಅಧಿಕೃತ ಘೋಷಣೆಯ ನಂತರ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಗುರು ತಾರನಾಳ, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ಕಾಂಗ್ರೆಸ್‌ ಪಕ್ಷ ಒಂದು ಕುಟುಂಬ ಇದ್ದಂತೆ. ಇದರಲ್ಲಿರುವ ಸಹೋದರರ ನಡುವೆ ವೈಮನಸ್ಸು ಸಹಜ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಇಂಥ ವೈಮನಸ್ಸು ತಲೆದೋರಿತ್ತು. ಅದನ್ನು ನಮ್ಮ ನಾಯಕರಾದ ಮಾಜಿ ಸಚಿವ ಸಿ.ಎಸ್‌. ನಾಡಗೌಡರ ಮಾರ್ಗದರ್ಶನದಲ್ಲಿ ಬಗೆಹರಿಸಿದ್ದೇವೆ. ಪರಿಶಿಷ್ಟ ಜಾತಿಯ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿರುವ ಹೆಮ್ಮೆ ನಮ್ಮ ಪಕ್ಷದ್ದಾಗಿದೆ.

ನೂತನ ಅಧ್ಯಕ್ಷರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಎಲ್ಲರನ್ನೂ ಸಮನ್ವಯದಿಂದ, ಒಮ್ಮನಸ್ಸಿನಿಂದ ಕಂಡು ಉತ್ತಮವಾಗಿ ಅಧಿಕಾರ ನಡೆಸಿ ಪಕ್ಷದ ಕೀರ್ತಿ ಹೆಚ್ಚಿಸುವ ವಿಶ್ವಾಸ ಇದೆ. ಭೇದ ಮಾಡದೆ ಅಧಿಕಾರ ನಡೆಸಿ ಜನಮನ್ನಣೆ ಗಳಿಸುವಂತೆ ಅವರಿಗೆ ಕಿವಿಮಾತು ಹೇಳಿದ್ದೇವೆ ಎಂದರು. ವಿಜಯೋತ್ಸವ: ಆಯ್ಕೆ ಪ್ರಕ್ರಿಯೆ ನಂತರ ಪ್ರತಿಭಾ ಅಂಗಡಗೇರಿ ಸೇರಿದಂತೆ ಬೆಂಬಲ ನೀಡಿದ ಎಲ್ಲ ಸದಸ್ಯರು, ಕಾಂಗ್ರೆಸ್‌ ಮುಖಂಡರು, ಪುರಸಭೆ ಅಧಿಕಾರ ವರ್ಗ, ಶಿವಪುರ ಅವರ ಸ್ನೇಹಿತರ ಬಳಗ ಶಿವಪುರ ಅವರಿಗೆ ಹೂಮಾಲೆ ಹಾಕಿ, ಶಾಲು ಹೊದೆಸಿ ಸನ್ಮಾನಿಸಿ ಶುಭ ಕೋರಿದರು. ಅಂಬೇಡ್ಕರ್‌ ವೃತ್ತಕ್ಕೆ ತೆರಳಿ ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಅರ್ಪಿಸಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿಕೊಂಡರು. ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.

ಮುಖಂಡರಾದ ವೈ.ಎಚ್‌. ವಿಜಯಕರ್‌, ಬಸನಗೌಡ ಪಾಟೀಲ, ಸಂಗನಗೌಡ ಪಾಟೀಲ, ರುದ್ರಗೌಡ ಅಂಗಡಗೇರಿ, ಅಪ್ಪು ದೇಗಿನಾಳ, ಪ್ರಶಾಂತ ಕಾಳೆ, 13ನೇ ವಾಡ್‌ ìನ ಪ್ರಮುಖರು, ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಗೆಳೆಯನ ತಬ್ಬಿಕೊಂಡ ಗೊಳಸಂಗಿ: ಶಿವಪುರ ಅವರನ್ನೇ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಲು ಹಠ ಹಿಡಿದಿದ್ದ ಶಿವಪುರ ಅವರ ಆತ್ಮೀಯ ಗೆಳೆಯ 20ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಮಹಿಬೂಬ ಗೊಳಸಂಗಿ ಆಯ್ಕೆ ಘೋಷಣೆ ನಂತರ ಎಲ್ಲರೆದುರು ಗೆಳೆಯನನ್ನು ಬಿಗಿಯಾಗಿ ತಬ್ಬಿಕೊಂಡು ಶುಭ ಕೋರಿ ಗಮನ ಸೆಳೆದರು. ತಮ್ಮ ಹಠ ಗೆದ್ದ ಸಂಭ್ರಮ ಅವರ ಮುಖದಲ್ಲಿ ಕಂಡುಬರುತ್ತಿತ್ತು. ಒಟ್ಟಾರೆ ಪ್ರಕ್ರಿಯೆಗೆ ಇವರೇ ಹೀರೋ ಎನ್ನಿಸಿಕೊಂಡರು. ದ್ವೇಷ ಮರೆತ ಸದಸ್ಯ: ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಹಣಮಂತ ವಡ್ಡರ, ಶಿವಪ್ಪ ಶಿವಪುರ ಅವರು ಪರಸ್ಪರ ಜಗಳ ಮಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು.

Advertisement

ಒಂದೇ ಪಕ್ಷದವರಾಗಿದ್ದರೂ ಇವರಲ್ಲಿ ಇದ್ದ ದ್ವೇಷ, ವೈಷಮ್ಯ ಅಂದು ಬಹಿರಂಗಗೊಂಡಿತ್ತು. ಇದೀಗ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಹಣಮಂತ ಅವರ ಸಭೆಯೊಳಗೆ ಆಗಮಿಸಿ ಶಿವಪುರ ಅವರಿಗೆ ಹೂಮಾಲೆ ಹಾಕಿ ಅಭಿನಂದಿಸುವ ಮೂಲಕ ತಮ್ಮಿಬ್ಬರ ನಡುವೆ ಇದ್ದ ಆಂತರಿಕ ವೈಮನಸ್ಸಿಗೆ ತೆರೆ ಎಳೆದರು. ಶಿವಪುರ ಅವರೂ ಹಿಂದಿನದನ್ನೆಲ್ಲ ಮರೆತು ಶುಭಾಶಯ ಸ್ವೀಕರಿಸಿ ಕೃತಜ್ಞತೆ ತೋರಿಸಿದರು. ಈ ಪ್ರಸಂಗ ಹೆಚ್ಚು ಗಮನ ಸೆಳೆಯಿತು. ಗೈರಾದ ಪ್ರಬಲ ಆಕಾಂಕ್ಷಿ: ಪುರಸಭೆ ಆಡಳಿತ ಮಂಡಳಿ ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರ ಪಾಲಾಗುವಲ್ಲಿ ಮಹತ್ವದ ಪಾತ್ರ ವಹಿಸಿದ

 

 

Advertisement

Udayavani is now on Telegram. Click here to join our channel and stay updated with the latest news.

Next