Advertisement
125ನೇ ಸಿನಿಮಾದ ಬಿಡುಗಡೆ ಸಮಯದಲ್ಲಿ ಹಿಂತಿರುಗಿ ನೋಡಿದ್ರೆ ಏನನಿಸುತ್ತದೆ?
Related Articles
Advertisement
ನಿಮ್ಮ ಪ್ರಕಾರ “ವೇದ’ ಅಂದ್ರೆ ಏನಂಥ ಹೇಳಬಹುದು?
ನನ್ನ ಪ್ರಕಾರ, “ವೇದ’ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗುವ ಸಿನಿಮಾವಲ್ಲ. ಇದೊಂದು ಮಿಕ್ಸ್ ಎಮೋಶನ್ಸ್ ಇರುವಂಥ ಸಿನಿಮಾ. ಇಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ, ಫ್ಯಾಮಿಲಿ, ಸೆಂಟಿಮೆಂಟ್, ಆ್ಯಕ್ಷನ್ ಎಲ್ಲವೂ ಇದೆ. ಒಬ್ಬ ಮನುಷ್ಯನ ಒಳಗಿರುವ ಎಲ್ಲ ಭಾವನೆಗಳೂ ಇಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಎಂಟರ್‌ಟೈನ್ಮೆಂಟ್ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಮನೆಯ, ನಮ್ಮ ಊರಿನ ಹೆಣ್ಣು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ನಡೆಸಿಕೊಳ್ಳಬೇಕು ಎಂಬ ಮೆಸೇಜ್ ಇದೆ.
“ವೇದ’ ಸಿನಿಮಾದಲ್ಲಿ ನಿಮ್ಮ ಪಾತ್ರ, ತಯಾರಿ?
“ವೇದ’ ಒಂದು ಗ್ರಾಮೀಣ ಹಿನ್ನೆಲೆಯಲ್ಲಿ, ಜನಪದದ ಸೊಗಡಿನಲ್ಲಿ ಸಾಗುವ ಸಿನಿಮಾ. ಹಾಗಂತ ಇದು ಯಾವುದೇ ನೈಜ ಘಟನೆಯ ಸಿನಿಮಾವಲ್ಲ. 1960 ಮತ್ತು 1980ರ ದಶಕದಲ್ಲಿ ಇಡೀ ಸಿನಿಮಾದ ಕಥೆ ಸಾಗುತ್ತದೆ. ಹಾಗಾಗಿ ಸುಮಾರು ಐವತ್ತು-ಅರವತ್ತು ವರ್ಷಗಳ ಹಿಂದಿನ ವಾತಾವರಣವನ್ನು ಸ್ಕ್ರೀನ್ ಮೇಲೆ ರೀ-ಕ್ರಿಯೆಟ್ ಮಾಡಬೇಕಿತ್ತು. ಐವತ್ತು ವರ್ಷದ ಹಿಂದೆ ಹಳ್ಳಿಯ ವ್ಯಕ್ತಿಯೊಬ್ಬ ಹೇಗಿರುತ್ತಿದ್ದನೋ, ಹಾಗೆಯೇ ನನ್ನ ಪಾತ್ರ ಕೂಡ ಇದೆ. ಅಪ್ಪಟ ಹಳೇ ಮೈಸೂರು ಶೈಲಿಯ ಗ್ರಾಮೀಣ ಭಾಷೆ ಸಿನಿಮಾದಲ್ಲಿದೆ. ನಿರ್ದೇಶಕ ಹರ್ಷ ಮತ್ತು ಟೀಮ್ ಸಾಕಷ್ಟು ರಿಸರ್ಚ್ ಮಾಡಿ ಇಂಥದ್ದೊಂದು ಕ್ಯಾರೆಕ್ಟರ್ ಪ್ರಸೆಂಟ್ ಮಾಡದೆ.
ಅಮ್ಮನ ಸ್ಥಾನವನ್ನು ಗೀತಾ ತುಂಬಿದ್ದಾಳೆ…
ನನ್ನ ಮೊದಲ ಸಿನಿಮಾವನ್ನು ನಮ್ಮ ಅಮ್ಮ ನಿರ್ಮಾಣ ಮಾಡಿದ್ದರು. ನನ್ನನ್ನು ಒಬ್ಬ ಕಲಾವಿದನಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಾನು ಮಾತ್ರವಲ್ಲ, ನನ್ನಂತಹ ನೂರಾರು ಕಲಾವಿದರು, ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಈಗ ನಮ್ಮ ಅಮ್ಮನ ಸ್ಥಾನವನ್ನು ನನ್ನ ಪತ್ನಿ ಗೀತಾ ತುಂಬುತ್ತಿದ್ದಾಳೆ. ನಮ್ಮ ಹೋಂ ಬ್ಯಾನರ್ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕು. ಹೊಸ ಸಿನಿಮಾಗಳನ್ನು ನಿರ್ಮಿಸಬೇಕು ಎಂಬ ಕನಸು ಗೀತಾಗೂ ಇದೆ. “ವೇದ’ ಸಿನಿಮಾ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾನರ್‌ನಿಂದ ಇನ್ನಷ್ಟು ಸಿನಿಮಾಗಳು ಬರುತ್ತಿರುತ್ತವೆ.
ಜಿ.ಎಸ್.ಕಾರ್ತಿಕ ಸುಧನ್