“ಟಗರುʼ ಚಿತ್ರದ ನಂತರ ಡಾಲಿ ಧನಂಜಯ್ ಮತ್ತು ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಮತ್ತೊಮ್ಮೆ ಸಿನಿಪ್ರಿಯರ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು! ಶಿವಣ್ಣ – ಡಾಲಿ ಧನಂಜಯ್ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಜಯ್ ಮಿಲ್ಟನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೇ ಸಾರ್ಥಕ್ ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಲಿದ್ದು, 2021ಕ್ಕೆ ಸಿನಿಮಾ ಸೆಟ್ಟೇರಲಿದೆ. ಹಾಗೂ ಚಿತ್ರದ ಬಗ್ಗೆ ಧನಂಜಯ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ವೊಂದನ್ನು ಕೂಡಾ ಹಂಚಿಕೊಂಡಿದ್ದಾರೆ.
ಈ ಹಿಂದೆ “ಟಗರುʼ ಚಿತ್ರದ ಯಶಸ್ಸಿನ ನಂತರ ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಧನಂಜಯ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮತ್ತೊಮ್ಮೆ ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಮುಖ್ಯವಾಗಿ ಈ ಚಿತ್ರದ ಟೀಸರ್ ಇಂದು ಸಂಜೆ 07:20ಕ್ಕೆ ಲಾಂಚ್ ಆಗಲಿದೆ. ಇನ್ನು ಇತ್ತಿಚೆಗಷ್ಟೇ ಶಿವಣ್ಣ ಕೋವಿಡ್ 19 ಸಮಸ್ಯೆಯಿಂದ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಸೋಷಿಯಲ್ ಮೀಡಿಯಾ ಟ್ವೀಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದರು.
“ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ಬರ್ತ್ ಡೇ ದಿನ ನಾನು ಮನೆಯಲ್ಲಿ ಇರೋದಿಲ್ಲ. ನಿಮ್ಗೆಲ್ಲ ಬೇಜಾರಾಗುತ್ತೆ ಅಂತ ಗೊತ್ತು. ಅದಕ್ಕಿಂತ ಹೆಚ್ಚು ಬೇಜಾರು ನನಗೆ ಆಗುತ್ತೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಆದರೆ, ಬರ್ತ್ ಡೇ ಆಚರಿಸಿದ್ದಲ್ಲಿ ಅದನ್ನ ಪಾಲಿಸೋದು ಕಷ್ಟ. ಕೋವಿಡ್ 19 ಕಳೆದ ಮೇಲೆ ಎಲ್ಲರೂ ಒಂದು ಕಡೆ ಮೀಟ್ ಮಾಡೋಣ. ಆದಷ್ಟು ಬೇಗ ಕೋವಿಡ್ 19ನಿಂದ ಹೊರಬರೋಣ. ಭಯಪಡಬೇಡಿ, ಧೈರ್ಯವಾಗಿರಿ. ನಿಯಮಗಳನ್ನ ಪಾಲಿಸೋಣ’ವೆಂದು ಹೇಳಿದ್ದರು.