Advertisement

ಮೈಸೂರಿನಿಂದ ಬನ್ನೇರುಘಟ್ಟ ಉದ್ಯಾನಕ್ಕೆ ಶಿವಾನಿ ಜಿರಾಫೆ ರವಾನೆ

11:31 PM Feb 27, 2024 | Team Udayavani |

ಮೈಸೂರು: ನಗರದಲ್ಲಿನ ಚಾಮರಾಜೇಂದ್ರ ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಒಂದೂವರೆ ವರ್ಷದ ಶಿವಾನಿ ಹೆಸರಿನ ಹೆಣ್ಣು ಜಿರಾಫೆಯನ್ನು ಕಳುಹಿಸಿಕೊಡಲಾಯಿತು.

Advertisement

ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕೆಲವು ವರ್ಷಗಳಿಂದ ಜಿರಾಫೆ ನೀಡುವ ಬಗ್ಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಅನ್ವಯ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 8 ಜಿರಾಫೆಗಳ ಪೈಕಿ ಹೆಣ್ಣು ಜಿರಾಫೆಯನ್ನು ಮಂಗಳವಾರ ಬೆಳಗ್ಗೆ ವಿಶೇಷ ವಾಹನದ ಮೂಲಕ ರವಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next