ನರಗುಂದ: ಮಹಾಜನ ವರದಿಯಂತೆ ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗವೆಂದು ಘಲಾಚ ಪಾಹಿಜಿ ಚಳುವಳಿ ವಿರುದ್ಧ ನರಗುಂದದಲ್ಲಿ ಬಂದ್ ಆಚರಿಸಿ ಬೆಳಗಾವಿ ಎಂದೆಂದೂ ಕರ್ನಾಟಕದ್ದೇ ಎಂದಿದ್ದ ಅಪ್ರತಿಮ ಹೋರಾಟಗಾರ ಶಿವಮೂರ್ತಯ್ಯ ಸುರೇಬಾನ ಅವರ ಚಿಂತನೆಗಳು ಅಜರಾಮರ ಎಂದು ಶಿಕ್ಷಕ ವಿನಾಯಕ ಶಾಲದಾರ ಹೇಳಿದರು.
Advertisement
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಏಕೀಕರಣ ಯೋಧರ ಯಶೋಗಾಥೆ-14ರ ಕಾರ್ಯಕ್ರಮದಲ್ಲಿ ಹೋರಾಟಗಾರ ಶಿವಮೂರ್ತಯ್ಯ ಸುರೇಬಾನ ಅವರ ಕುರಿತು ಉಪನ್ಯಾಸ ನೀಡಿದರು.
ಅನುಯಾಯಿಗಳಾಗಿ ಅವರ ಪ್ರಭಾವದಿಂದ ಹುಬ್ಬಳ್ಳಿ ಗಲಭೆ ಮತ್ತು ತುಂಗಭದ್ರಾ ನದಿ ನೀರು ಹೋರಾಟದ ಮೂಲಕ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡಿದ್ದ ಅವರ ಪಾತ್ರ ಹಿರಿದಾದುದು ಎಂದರು. ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಶ್ರೀ ಆಶೀರ್ವಚನ ನೀಡಿ, ಈ ಭಾಗದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರೆ ಶಿವಮೂರ್ತಯ್ಯನವರು ಎನ್ನುವ ಹಾಗೆ ಸಾಮಾಜಿಕ ಜೀವಿಗಳಾಗಿದ್ದ ಅವರು ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿರುತ್ತಿದ್ದರು.
Related Articles
Advertisement
ಶಿವಮೂರ್ತಯ್ಯನವರ ಹೋರಾಟದ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಏಕೀಕರಣ ಪ್ರಶಸ್ತಿ ಪಡೆದ ಅವರು ಬಂಡಾಯದ ನಾಡಿನ ತಾಯಿ ಕನ್ನಡಾಂಬೆಯ ಹೆಮ್ಮೆಯ ಪುತ್ರರಾಗಿದ್ದರು.
*ಶ್ರೀ ಶಾಂತಲಿಂಗ ಸ್ವಾಮಿಗಳು, ದೊರೆಸ್ವಾಮಿ ವಿರಕ್ತಮಠ, ಭೈರನಹಟ್ಟಿ