Advertisement

ತಮಿಳು ಸಾರ್‌ ವಿಜಯ್‌ ದರ್ಶನಕ್ಕೆ ಅಭಿಮಾನಿಗಳ ನೂಕುನುಗಲು

03:08 PM Dec 13, 2019 | Team Udayavani |

ಶಿವಮೊಗ್ಗ: ತಮಿಳು ಸೂಪರ್‌ ಸ್ಟಾರ್‌ ವಿಜಯ ಅಭಿನಯದ ಮಹತ್ವಾಕಾಂಕ್ಷೆಯ ದಳಪತಿ ಸಿನಿಮಾ ಶೂಟಿಂಗ್‌ ಶಿವಮೊಗ್ಗದಲ್ಲಿ ನಡೆಯುತ್ತಿದ್ದು ವಿಜಯ್‌ ನೋಡಲು ಅಭಿಮಾನಿಗಳು ಲಕ್ಷ್ಮೀ  ಟಾಕೀಸ್‌ ಬಳಿ ಪ್ರತಿದಿನ ಜಮಾಯಿಸುತ್ತಿದ್ದಾರೆ.

Advertisement

ಲಕ್ಷ್ಮೀ ಟಾಕೀಸ್‌ ಬಳಿ ಇರುವ ಹಳೆ ಜೈಲು ಆವರಣದಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು ಕಳೆದ ಮೂರು ದಿನದಿಂದ ನಿರಂತರ ಶೂಟಿಂಗ್‌ ನಡೆಯುತ್ತಿದೆ. ಚಿತ್ರದ ಪ್ರಮುಖ ಸೀಕ್ವೆನ್ಸ್‌ ಒಂದರ ಚಿತ್ರೀಕರಣವನ್ನು ಶಿವಮೊಗ್ಗದ ಹಳೆ ಜೈಲಿನಲ್ಲಿ ಮಾಡಲಾಗುತ್ತಿದೆ. ಇದಕ್ಕಾಗಿ ಜೈಲು ಕಟ್ಟಡದೊಳಗೆ ಸೆಟ್‌ ಕೂಡ ಹಾಕಲಾಗಿದೆ. ಇನ್ನು, ಜೈಲು ಆವರಣದ ಹೊರಗೆ ವಿಜಯ್‌ ನೋಡಲು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ.

ಒಂದು ಸಾರಿಯಾದರೂ ತಮ್ಮ ಹೀರೋನನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾತುರದಿಂದ ಜೈಲಿನ ಗೇಟ್‌ ಮುಂದೆ ಕಾದು ನಿಂತಿದ್ದಾರೆ. ಕೆಲವರು ಸಿನಿಮಾ ಟೀಂ ಮತ್ತು ಪೊಲೀಸರ ಜೊತೆಗೂ ವಾಗ್ವಾದ ನಡೆಸುತ್ತಿದ್ದಾರೆ. ನಟ ವಿಜಯ್‌ ಅವರು ಶಿವಮೊಗ್ಗದ ಬಿ.ಎಚ್‌.ರಸ್ತೆಯಲ್ಲಿರುವ ರಾಯಲ್‌ ಆರ್ಕೆಡ್‌ ಹೊಟೇಲ್‌ ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಶೂಟಿಂಗ್‌ಗೆ ತೆರಳುವಾಗ ಮತ್ತು ಶೂಟಿಂಗ್‌ನಿಂದ ಮರಳುವಾಗ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಹೊಟೇಲ್‌ ಮುಂದೆ ಸೇರುತ್ತಿದ್ದಾರೆ. ವಿಜಯ್‌ ಕಾರು ಹೊಟೇಲ್‌ ಒಳಗೆ ಮತ್ತು ಹೊರಗೆ ಹೋಗಲು ಸಾದ್ಯವಾದಂತೆ ತಡೆಯುತ್ತಿದ್ದಾರೆ. ಈ ವೇಳೆ ಪೊಲೀಸರು ಮತ್ತು ವಿಜಯ್‌ ಬಾಡಿಗಾರ್ಡ್‌ಗಳು ಅಭಿಮಾನಿಗಳನ್ನು ದೂರಕ್ಕೆ ಸರಿಸಲು ಹರಸಾಸಹಸ ಪಡುತ್ತಿದ್ದಾರೆ.

ನಟ ವಿಜಯ್‌ ಅವರು ಒಮ್ಮೆಯಾದರೂ ಬಂದು ತಮ್ಮತ್ತ ಕೈ ತೋರಿಸಲಿ ಎಂದು ವಿಜಯ್‌ ಫ್ಯಾನ್ಸ್‌ ಮನವಿ ಮಾಡುತ್ತಿದ್ದಾರೆ. ಹಳೇ ಜೈಲು ಗೇಟ್‌ ಮುಂದೆ ಕಾದು ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next