Advertisement

ಹರ್ಷ ಕೊಲೆ ಪ್ರಕರಣ : ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ : ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್

06:42 PM Feb 22, 2022 | Team Udayavani |

ಶಿವಮೊಗ್ಗ : ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದ್ದು ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಿವಮೊಗ್ಗ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿಕೆ ನೀಡಿದ್ದಾರೆ.

Advertisement

ಶಿವಮೊಗ್ಗ ಡಿಸಿ ಆರ್. ಸೆಲ್ವಮಣಿ ಹಾಗೂ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಂದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ನಗರದಲ್ಲಿ ಹರ್ಷ ಎಂಬುವರ ಕೊಲೆಗೆ ಸಂಬಂಧಿಸಿ ಮೊಹಮದ್ ಖಾಸಿಫ್, ಸಯ್ಯದ್ ನದೀಮ್, ಆಸೀಫುಲ್ಲಾ ಖಾನ್, ರಿಹಾನ್ ಶರೀಫ್, ನಿಹಾನ್, ಅಬ್ದುಲ್ ಅಫ್ನಾನ್ ಬಂಧಿಸಿದ್ದೇವೆ. ಎ1 ಖಾಸಿಫ್ ಗೆ ಮಾತ್ರ 30 ವರ್ಷ ವಯಸ್ಸಾಗಿದೆ. ಉಳಿದ ಆರೋಪಿಗಳೆಲ್ಲರೂ 20 ರಿಂದ 22 ವರ್ಷದೊಳಗಿನವರೇ ಆಗಿದ್ದಾರೆ. ಆರೋಪಿಗಳೆಲ್ಲರೂ ಈ ಹಿಂದೆ ಕ್ಲಾರ್ಕ್ ಪೇಟೆಯಲ್ಲಿ ವಾಸವಾಗಿದ್ದು, ಪರಸ್ಪರ ಪರಿಚಯಸ್ಥರಾಗಿದ್ದು ಇತ್ತೀಚಿಗಷ್ಟೇ ಎಲ್ಲರೂ ನಗರದ ಬೇರೆ ಬೇರೆ ಭಾಗದಲ್ಲಿ ನೆಲೆಸಿದ್ದರು.

ಘಟನೆ ಸಂಬಂಧ ಈವರೆಗೆ 12ಕ್ಕಿಂತ ಹೆಚ್ಚು ಜನರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ನಗರದಲ್ಲಿನ ಗಲಭೆಗೆ ಸಂಬಂಧಿಸಿದಂತೆ 13 ಪ್ರಕರಣ ದಾಖಲಾಗಿದೆ. ಕೊಲೆ ಪ್ರಕರಣ ಸಂಬಂಧ ವಿಚಾರಣೆ ಮತ್ತಷ್ಟು ಮುಂದುವರಿದಿದೆ.

ಇದನ್ನೂ ಓದಿ : ಆದಿವಾಸಿಗಳು ಜಾಗೃತರಾದಲ್ಲಿ ಸೌಲಭ್ಯ ಪಡೆಯಲು ಸಾಧ್ಯ: ಹರಿಹರ ಆನಂದಸ್ವಾಮಿ

ನಗರದ ಬೇರೆ ಬೇರೆ ಭಾಗದಲ್ಲಿ 19 ಘಟನೆಗಳು ದಾಖಲಾಗಿವೆ. ನಗರದಲ್ಲಿ ನಡೆದ ಗಲಾಟೆಯಿಂದ ಆಟೋ, ಕಾರು, ಬೈಕ್ ಸೇರಿದಂತೆ 18 ವಾಹನ ಜಖಂಗೊಂಡಿವೆ. ಗಲಭೆಯಲ್ಲಿ 8 ಜನ ಗಾಯಾಳುಗಳಾಗಿದ್ದು, ಸಣ್ಣಪುಟ್ಟ ಗಾಯವಾಗಿದೆ.

Advertisement

ಈಗಾಗಲೇ ಶಿವಮೊಗ್ಗ ನಗರದಾದ್ಯಂತ 1200 ಜನ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಂಗಳೂರು ಹಾಗೂ ಇತರ ಜಿಲ್ಲೆಗಳ ಪೊಲೀಸ್ ಅಧಿಕಾರಿ- ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next